AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata Motors: ಟಾಟಾ ಮೋಟಾರ್ಸ್​ನ ಎಲೆಕ್ಟ್ರಿಕ್ ವಾಹನ ಅಂಗಸಂಸ್ಥೆಯಲ್ಲಿ ಟಿಪಿಜಿಯಿಂದ 7500 ಕೋಟಿ ರೂ. ಹೂಡಿಕೆ

ಟಿಪಿಜಿ ಸಮೂಹದಿಂದ ಟಾಟಾ ಮೋಟಾರ್ಸ್​ನ ಹೊಸ ಎಲೆಕ್ಟ್ರಿಕ್ ವಾಹನ ಅಂಗ ಸಂಸ್ಥೆಯಲ್ಲಿ 7500 ಕೋಟಿ ರೂಪಾಯಿಗಳನ್ನು ಕಂತುಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

Tata Motors: ಟಾಟಾ ಮೋಟಾರ್ಸ್​ನ ಎಲೆಕ್ಟ್ರಿಕ್ ವಾಹನ ಅಂಗಸಂಸ್ಥೆಯಲ್ಲಿ ಟಿಪಿಜಿಯಿಂದ 7500 ಕೋಟಿ ರೂ. ಹೂಡಿಕೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Oct 12, 2021 | 6:05 PM

Share

ಟಾಟಾ ಮೋಟಾರ್ಸ್ ಅಕ್ಟೋಬರ್ 12ರಂದು (ಮಂಗಳವಾರ) ಹೇಳಿರುವ ಪ್ರಕಾರ, ತನ್ನ ಸಂಪೂರ್ಣ ಸ್ವಾಮ್ಯದ ಎಲೆಕ್ಟ್ರಿಕ್ ವಾಹನ ಅಂಗಸಂಸ್ಥೆಯಲ್ಲಿ ಖಾಸಗಿ ಈಕ್ವಿಟಿ ಸಂಸ್ಥೆ ಟಿಪಿಜಿ ಸಮೂಹವು ರೂ.7,500 ಕೋಟಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಮೊದಲ ಕಂತು ಪೂರ್ಣಗೊಂಡ ದಿನಾಂಕದಿಂದ 18 ತಿಂಗಳ ಅವಧಿಯಲ್ಲಿ ಹೂಡಿಕೆಯನ್ನು ಕಂತಿನಲ್ಲಿ ಮಾಡಲಾಗುವುದು. ಎಲೆಕ್ಟ್ರಿಕ್ ವಾಹನಗಳ ವಿಭಾಗಕ್ಕಾಗಿ ಟಾಟಾ ಮೋಟಾರ್ಸ್ ಸ್ಥಾಪಿಸಿದ ಸಂಸ್ಥೆ TML EVCo, ಪ್ರಯಾಣಿಕರ ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಹಾರವನ್ನು ಕೈಗೊಳ್ಳಲಿದೆ ಎಂದು ಕಂಪೆನಿ ತಿಳಿಸಿದೆ. ಮೊದಲ ಸುತ್ತಿನ ಬಂಡವಾಳ ಪೂರಣವನ್ನು ಮಾರ್ಚ್ 2022ರೊಳಗೆ ಪೂರ್ಣಗೊಳಿಸಲಾಗುವುದು ಮತ್ತು ಸಂಪೂರ್ಣ ಹಣವನ್ನು 2022ರ ಅಂತ್ಯದ ವೇಳೆಗೆ ತುಂಬಿಸಲಾಗುತ್ತದೆ ಎಂದು ಅದು ಹೇಳಿದೆ.

TPG ಸಮೂಹವು ಎಲೆಕ್ಟ್ರಿಕ್ ವಾಹನ ಅಂಗಸಂಸ್ಥೆಯಲ್ಲಿ ಶೇ 11ರಿಂದ ಶೇಕಡಾ 15ರಷ್ಟು ಷೇರುಗಳನ್ನು 910 ಕೋಟಿ ಡಾಲರ್ ಮೌಲ್ಯದಲ್ಲಿ ಪಡೆಯುತ್ತದೆ.

“ಭಾರತದಲ್ಲಿ ಮಾರುಕಟ್ಟೆಯನ್ನು ರೂಪಿಸುವ ಎಲೆಕ್ಟ್ರಿಕ್ ಪ್ರಯಾಣಿಕರ ಮೊಬಿಲಿಟಿ ವ್ಯಾಪಾರವನ್ನು ರಚಿಸಲು ನಮ್ಮ ಪ್ರಯಾಣದಲ್ಲಿ ಟಿಪಿಜಿ ಸೇರಿಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಗ್ರಾಹಕರನ್ನು ಸಂತೋಷಪಡಿಸುವ ಅತ್ಯಾಕರ್ಷಕ ಉತ್ಪನ್ನಗಳಲ್ಲಿ ನಾವು ಪೂರ್ವಭಾವಿಯಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಉತ್ತಮ ಪರಿಸರ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ರಚಿಸುತ್ತೇವೆ. 2030ರ ವೇಳೆಗೆ ಶೇ 30ರಷ್ಟು ವಿದ್ಯುತ್ ವಾಹನಗಳು ಹೊಂದುವ ಸರ್ಕಾರದ ದೃಷ್ಟಿಕೋನದಲ್ಲಿ ಪ್ರಮುಖ ಪಾತ್ರ ವಹಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಬದ್ಧರಾಗಿದ್ದೇವೆ ಎಂದು ಟಾಟಾ ಮೋಟಾರ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿದ್ದಾರೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್​​​ನ ಹೊಸ ಎಸ್ ಯು ವಿ ಟಾಟಾ ಪಂಚ್ ಕಾರಿಗೆ ಬುಕಿಂಗ್ ಆರಂಭವಾಗಿದೆ, ಅಕ್ಟೋಬರ್ 20 ರಿಂದ ಕಾರು ಲಭ್ಯ!