ಟಾಟಾ ಮೋಟಾರ್ಸ್​​​ನ ಹೊಸ ಎಸ್ ಯು ವಿ ಟಾಟಾ ಪಂಚ್ ಕಾರಿಗೆ ಬುಕಿಂಗ್ ಆರಂಭವಾಗಿದೆ, ಅಕ್ಟೋಬರ್ 20 ರಿಂದ ಕಾರು ಲಭ್ಯ!

ಟಾಟಾ ಮೋಟಾರ್ಸ್​​​ನ ಹೊಸ ಎಸ್ ಯು ವಿ ಟಾಟಾ ಪಂಚ್ ಕಾರಿಗೆ ಬುಕಿಂಗ್ ಆರಂಭವಾಗಿದೆ, ಅಕ್ಟೋಬರ್ 20 ರಿಂದ ಕಾರು ಲಭ್ಯ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 06, 2021 | 6:26 PM

ಟಾಟಾ ಮೊದಲ ಬಾರಿಗೆ ತನ್ನ ಕಾರಿನಲ್ಲಿ ಬ್ರೇಕ್ ಸ್ವೇ ಕಂಟ್ರೋಲ್ ಅಳವಡಿಸಿದೆ. ಪುಣೆಯಲ್ಲಿರುವ ಸ್ಟೇಟ್-ಆಫ್-ದಿ-ಆರ್ಟ್ ಯುನಿಟ್ ಪಂಚ್ ಕಾರಿನ ತಯಾರಿಸಲಾಗಿದೆ.

ಟಾಟಾ ಮೋಟಾರ್ಸ್ ತನ್ನ ಹೊಸ ಉತ್ಪಾದನೆಗಳನ್ನು ಮಾರ್ಕೆಟ್ಗೆ ಬಿಡುಗಡೆ ಮಾಡುವುದು ಮುಂದುವರಿಸಿದೆ. ಮಂಗಳವಾರದಂದು ಅದು ಹೊಸ ಎಸ್ ಯು ವಿ ಪಂಚ್ ಕಾರನ್ನು ಲಾಂಚ್ ಮಾಡಿದೆ. ಟಾಟಾ ಮೋಟಾರ್ಸ್​ನ ಎಸ್ ಯು ವಿ ಕಾರುಗಳಿಗೆ ಪಂಚ್ ಹೊಸ ಸೇರ್ಪಡೆಯಾಗಿದೆ. ಪಂಚ್ ಕಾರಿನ ವೈಶಿಷ್ಟ್ಯತೆಯೆಂದರೆ ನಿಮ್ಮ ಇಂಧನ ಉಳಿಸಲು ಟ್ರಾಫಿಕ್ ಸಿಗ್ನಲ್​ಗಳಲ್ಲಿ ತಾನಾಗಿಯೇ ಆಫ್ ಮತ್ತು ಆನ್ ಆಗುತ್ತದೆ. 21,000 ರೂ. ಗಳನ್ನು ತೆತ್ತು ಈ ಕಾರನ್ನು ನೀವು ಬುಕ್ ಮಾಡಬಹುದಾಗಿದೆ.

ಟಾಟಾ ಮೊದಲ ಬಾರಿಗೆ ತನ್ನ ಕಾರಿನಲ್ಲಿ ಬ್ರೇಕ್ ಸ್ವೇ ಕಂಟ್ರೋಲ್ ಅಳವಡಿಸಿದೆ. ಪುಣೆಯಲ್ಲಿರುವ ಸ್ಟೇಟ್-ಆಫ್-ದಿ-ಆರ್ಟ್ ಯುನಿಟ್ ಪಂಚ್ ಕಾರಿನ ತಯಾರಿಸಲಾಗಿದೆ. ಟ್ರಿಮ್-ಕೇಂದ್ರಿತ ವ್ಯವಸ್ಥೆಯಿಂದ ಮಾನವ ಅಪ್ರೋಚ್ನೆಡೆ ಸಂಸ್ಥೆಯು ಕಾಲಿರಿಸಿದೆ. ಟಾಟಾ ಮೋಟಾರ್ಸ್ ತನ್ನ ಕಾರುಗಳನ್ನು ತಯಾರಿಸುವಾಗ ನಾಲ್ಕು ಪ್ರಮುಖ ಅಂಶಗಳಿಗೆ (ಸಂಸ್ಥೆ ಅದನ್ನು ಡಿಎನ್ಎ ಎಂದು ಕರೆಯುತ್ತದೆ) ಒತ್ತು ನೀಡುತ್ತದೆ-ವಿನ್ಯಾಸ, ಕಾರ್ಯಕ್ಷಮತೆ, ವೈಶಾಲ್ಯತೆ ಮತ್ತು ಸುರಕ್ಷತೆ.

ಟಾಟಾ ಪಂಚ್ 4 ಚಾರಿತ್ರ್ಯಗಳಲ್ಲಿ (persona) ಲಭ್ಯವಾಗಲಿದೆ-ಶುದ್ಧ ಚಾರಿತ್ರ್ಯ, ಸಾಹಸಮಯ ಚಾರಿತ್ರ್ಯ, ಸಾಧನಶೀಲ ಚಾರಿತ್ರ್ಯ ಮತ್ತು ಸೃಜನಶೀಲ ಚಾರಿತ್ರ್ಯ ಈ ಬಾರಿ, ಟಾಟಾ ಮೋಟಾರ್ಸ್ ವಿಭಿನ್ನವಾಗಿ ಟಾಟಾ ಪಂಚ್ ವಿತರಣೆಯ ಮೇಲೆ ಕೆಲಸಗಳನ್ನು ಮಾಡುತ್ತಿದೆ. ಟಾಟಾ ಪಂಚ್‌ನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎಬಿಎಸ್ ಜೊತೆಗೆ ಇಬಿಡಿ, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಕೂಡ ಸೇರಿವೆ.

ಇದನ್ನೂ ಓದಿ:  Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್