ಮೇಕಪ್ ಇಲ್ಲದೆ ನನ್ನನ್ನು ಯಾರೂ ಗುರುತಿಸಲ್ಲ ಎಂದ ಸಂಜನಾ ಗಲ್ರಾನಿ
ನಟಿ ಸಂಜನಾ ಗಲ್ರಾನಿ ತಮಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಕ್ಯಾಬ್ ಚಾಲಕ ಆರೋಪ ಮಾಡಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು.
ನಟಿ ಸಂಜನಾ ಗಲ್ರಾನಿ ತಮಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಕ್ಯಾಬ್ ಚಾಲಕ ಆರೋಪ ಮಾಡಿದ್ದರು. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು. ಇದಕ್ಕೆ ಸಂಜನಾ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ತಮ್ಮದು ಯಾವುದೇ ತಪ್ಪು ಇಲ್ಲ ಎಂದು ಅವರು ಅಲವತ್ತುಕೊಂಡಿದ್ದಾರೆ. ಇದರ ಜತೆಗೆ ಬಣ್ಣ ಹಚ್ಚದಿದ್ದರೆ ನಮಗೆ ಬೆಲೆ ಇಲ್ಲ ಎಂದಿದ್ದಾರೆ.
‘ಮಹಿಳೆಯರಿಗೆ ಏನಾದ್ರು ತೊಂದರೆಯಾದ್ರೆ, ಅವಳು ಅಲ್ಲಿಗೆ ಯಾಕೆ ಹೋದ್ರು ಅಂತ ಕೇಳ್ತಾರೆ. ಸಮಾಜದಲ್ಲಿ ಹೀಗೆ ಆಗಬಾರದು ಎಂದು ಹೇಳುತ್ತಿದ್ದೇನೆ. ತಪ್ಪು ದಾರಿಯಲ್ಲಿ ಕರೆದುಕೊಂಡು ಹೋದರೆ ಸುಮ್ಮನೆ ಇರೋದಕ್ಕೆ ಆಗುತ್ತ? ಜಿಪಿಎಸ್ ರೂಟ್ ಪ್ರಕಾರ ಅವರು ರಾಂಗ್ ರೂಟ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ನಾನು ದೂರು ಕೊಟ್ಟರೆ ಅವರ ಜೀವನ ಹಾಳಾಗುತ್ತದೆ. ಈಗ ಚಾಲಕನೇ ಪೊಲೀಸ್ ಠಾಣೆಗೆ ಹೋಗಿದ್ದಾನೆ. ನಾನು ಕೆಟ್ಟಮಾತನಾಡಿದೆ ಎಂದು ದೂರು ಕೊಟ್ಟಿದ್ದಾನೆ. ಅವನ ತಾಯಿ, ತಂಗಿಯಾಗಿದ್ರೆ ಅವನು ಹೀಗೆ ಮಾಡುತ್ತಿದ್ದನಾ’ ಎಂದು ಸಂಜನಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ಕ್ಯಾಬ್ ಚಾಲಕ ನನ್ನನ್ನು ಕಿಡ್ನಾಪ್ ಮಾಡ್ತಿದ್ದಾನೆ ಅಂತ ಭಯವಾಯ್ತು’; ಸಂಜನಾ ಗಲ್ರಾನಿ