AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಡ್ರಗ್ಸ್ ಸೇವನೆ ಮತ್ತು ಮಾರಾಟದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ, ಯುವಕರಲ್ಲಿ ಹೆರಾಯಿನ್ ಗೀಳು ಜಾಸ್ತಿ!

ಭಾರತದಲ್ಲಿ ಡ್ರಗ್ಸ್ ಸೇವನೆ ಮತ್ತು ಮಾರಾಟದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ, ಯುವಕರಲ್ಲಿ ಹೆರಾಯಿನ್ ಗೀಳು ಜಾಸ್ತಿ!

TV9 Web
| Edited By: |

Updated on: Oct 06, 2021 | 7:41 PM

Share

ಕಳೆದ ನಾಲ್ಕು ವರ್ಷಗಳಲ್ಲಿ ಡ್ರಗ್ಸ್ ಸಂಬಂಧಿತ ಅಪರಾಧಗಳ ಸಂಖ್ಯೆಯಲ್ಲಿ ಶೇಕಡಾ 11 ರಷ್ಟು ಹೆಚ್ಚಳವಾಗಿದೆ. ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿ ಮತ್ತು ಬೇರೆಯವರಿಗೆ ಕದ್ದು ಮುಚ್ಚಿ ಮಾರುವವರ ಆದಾಯ ಕಳೆದ 3 ವರ್ಷಗಳಲ್ಲಿ ಶೇ. 455 ರಷ್ಟು ಹೆಚ್ಚಾಗಿದೆಯಂತೆ!

ಡ್ರಗ್ಸ್ ಕೇಸ್​ನಲ್ಲಿ  ಒಬ್ಬ ಸೆಲಿಬ್ರಿಟಿ ಅಥವಾ ಸೆಲಿಬ್ರಿಟಿಯ ಸಂತಾನ ಸಿಕ್ಕಿಬಿದ್ದರೆ, ಒಂದು ವಾರದವರೆಗೆ ಅದರ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆ ನಡೆಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳು, ಸಚಿವರು ಡ್ರಗ್ಸ್ ದಂಧೆಯನ್ನು ಮಟ್ಟಹಾಕುತ್ತೇವೆ ಅಂತೆಲ್ಲ ಹೇಳಿಕೆಗಳನ್ನು ನೀಡಿ ಮಾಧ್ಯಮಗಳಲ್ಲಿ ರಾರಾಜಿಸುತ್ತಾರೆ. ಅಷ್ಟರೊಳಗೆ ಸಿಕ್ಕಿಬಿದ್ದವನು ಜಾಮೀನು ಪಡೆದು ಹೊರಬರುತ್ತಾನೆ, ಅಲ್ಲಿಗೆ ಕತೆ ಮುಕ್ತಾಯಗೊಳ್ಳುತ್ತದೆ. ಅಲ್ಲಿಂದ ಡ್ರಗ್ಸ್ ದಂಧೆ, ಸೇವನೆಯು ಮತ್ತೊಬ್ಬ ಸೆಲಿಬ್ರಿಟಿ ಸಿಕ್ಕಿಬೀಳುವವರೆಗೆ ಅವ್ಯಾಹತವಾಗಿ ನಡೆಯುತ್ತದೆ. ಮಟ್ಟ ಹಾಕುತ್ತೇವೆ ಅಂತ ಹೇಳಿದವರು ಹೇಳಿದ್ದನ್ನು ಮರೆತು ಬಿಡುತ್ತಾರೆ. ಇದೊಂದು ರೀತಿಯ ಚಕ್ರದ ಹಾಗೆ.

ಆದರೆ, ನಮ್ಮ ದೇಶದ ಯುವಕರು ಡ್ರಗ್ಸ್ ಗೆ ದಾಸರಾಗಿ ಬದುಕು ಹಾಳುಮಾಡಿಕೊಳ್ಳುತ್ತಿರುವ ಬಗ್ಗೆ ಯಾರೆಂದರೆ ಯಾರಿಗೂ ಚಿಂತೆಯಿಲ್ಲ.

ಭಾರತದಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿ ಆಘಾತಕಾರಿಯಾಗಿದೆ ಎಂದು ಹೇಳವುದು ಅಂಡರ್ ಸ್ಟೇಟ್​ಮೆಂಟ್​​ ಎನಿಸುತ್ತದೆ. ಬೇರೆಲ್ಲ ದೇಶಗಳ ಹಾಗೆ ಭಾರತವೂ ಪ್ರತಿವರ್ಷ ಒಂದು ವರದಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸುತ್ತದೆ. ವರದಿಯ ಪ್ರಕಾರ ದೇಶದಲ್ಲಿ ಡ್ರಗ್ಸ್ ಮಾರಾಟ ಮತ್ತು ಸೇವನೆಯ ಪ್ರಮಾಣ ಹೆಚ್ಚುತ್ತಲೇ ಇದೆ.

ಕಳೆದ ನಾಲ್ಕು ವರ್ಷಗಳಲ್ಲಿ ಡ್ರಗ್ಸ್ ಸಂಬಂಧಿತ ಅಪರಾಧಗಳ ಸಂಖ್ಯೆಯಲ್ಲಿ ಶೇಕಡಾ 11 ರಷ್ಟು ಹೆಚ್ಚಳವಾಗಿದೆ. ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿ ಮತ್ತು ಬೇರೆಯವರಿಗೆ ಕದ್ದು ಮುಚ್ಚಿ ಮಾರುವವರ ಆದಾಯ ಕಳೆದ 3 ವರ್ಷಗಳಲ್ಲಿ ಶೇ. 455 ರಷ್ಟು ಹೆಚ್ಚಾಗಿದೆಯಂತೆ!

‘ಉಡ್ತಾ ಪಂಜಾಬ್’ ಸಿನಿಮವನ್ನು ನೀವು ನೋಡಿರಬಹುದು. ಪಂಜಾಬ್ನಲ್ಲಿ ಅಕ್ಷರಶಃ ಸಿನಿಮಾನಲ್ಲಿ ತೋರಿಸಿದಂತೆಯೇ ನಡೆಯುತ್ತಿದೆ. ಹಾಗೆ ನೋಡಿದರೆ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಪ್ರಮಾಣವನ್ನು ಗಮನಿಸಿದರೆ ಪಂಜಾಬ್ ಎರಡನೇ ಸ್ಥಾನದಲ್ಲಿದೆ, ಮೊದಲ ಸ್ಥಾನದಲ್ಲಿ ಸಿಕ್ಕಿಂ ಮತ್ತು ಮೂರನೇ ಸ್ಥಾನದಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ ಇದೆ.

ಭಾರತಕ್ಕೆ ಹೆಚ್ಚಿನ ಪ್ರಮಾಣದ ಡ್ರಗ್ಸ್ ತಾಲಿಬಾನಿಗಳ ಅಫ್ಘಾನಿಸ್ತಾನದಿಂದ ಬರುತ್ತದೆ. ತಾಲಿಬಾನಿಗಳಿಗೆ ಪ್ರಮುಖ ಆದಾಯದ ಮೂಲವೇ ಡ್ರಗ್ಸ್ ಕಳ್ಳಸಾಗಣೆ.

ಭಾರತದ ಜನಸಂಖ್ಯೆಯ ಶೇಕಡಾ 2.1 ಜನ ಡ್ರಗ್ಸ್ ಗೆ ದಾಸರಾಗಿದ್ದಾರೆ. ಅವರಲ್ಲಿ 1.33 ಕೋಟಿ ಜನರಿಗೆ ಗಾಂಜಾ ಮತ್ತು ಚರಸ್ನ ಗೀಳು. ಯುವಕರಿಗೆ ಹೆರಾಯಿನ್ ಬಗ್ಗೆ ಹೆಚ್ಚು ಆಕರ್ಷಣೆ ಇದೆಯಂತೆ. ಕಳೆದ ವರ್ಷ ಮಾದಕ ವ್ಯಸನಿಗಳ ಪೈಕಿ ಶೇಕಡಾ 81ರಷ್ಟು ಜನ ಪೊಲೀಸ ಮತ್ತು ಎನ್ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ವಿಶ್ವದಾದ್ಯಂತ ಪ್ರತಿವರ್ಷ 2 ಲಕ್ಷಕ್ಕೂ ಹೆಚ್ಚು ಜನರನ್ನು ಡ್ರಗ್ಸ್ ಬಲಿ ತೆಗೆದುಕೊಳ್ಳುತ್ತಿದೆ. ಇದಕ್ಕೆ ದಾಸರಾಗಿರುವವರ ಪೈಕಿ ಶೇ.44 ರಷ್ಟು ಜನ ಅದರಿಂದ ಮುಕ್ತಿ ಪಡೆಯುವ ಪ್ರಯತ್ನ ಮಾಡಿದ್ದರೆ, ಶೇ. 25 ರಷ್ಟು ಜನ ರಿಹ್ಯಾಬ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:  Viral Video: ಹಳೆಯ ಎಟಿಎಂ ಖರೀದಿಸಿ 1.49 ಲಕ್ಷ ರೂ. ಪಡೆದ ಯುವಕರು! ಖುಷಿಯಲ್ಲಿ ಕಿರುಚಾಡಿದ ವಿಡಿಯೋ ವೈರಲ್​