Rakesh Jhunjhunwala: ಒಂದೇ ತಿಂಗಳಲ್ಲಿ ರಾಕೇಶ್ ಜುಂಜುನ್ವಾಲಾಗೆ ಈ ಷೇರಿನಿಂದ 145 ಕೋಟಿ ರೂಪಾಯಿ ಗಳಿಕೆ
ಈ ಕಂಪೆನಿಯ ಷೇರು ಒಂದು ತಿಂಗಳಲ್ಲಿ ಒಂದು ತಿಂಗಳಲ್ಲಿ ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರಿಗೆ ರೂ. 145 ಕೋಟಿ ಲಾಭ ತಂದುಕೊಟ್ಟಿದೆ.
ಷೇರು ಮಾರುಕಟ್ಟೆಯ ಹಿರಿಯ ಹೂಡಿಕೆದಾರರಾದ ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್ಫೋಲಿಯೋದಲ್ಲಿ ಇರುವ ಸ್ಟಾಕ್ ಡೆಲ್ಟಾ ಕಾರ್ಪ್ ಕಳೆದ ಒಂದು ತಿಂಗಳಲ್ಲಿ ಶೇಕಡಾ 40ರಷ್ಟು ಹೆಚ್ಚಳವಾಗಿದೆ. ಆತಿಥ್ಯದ (ಹಾಸ್ಪಿಟಾಲಿಟಿ) ಸ್ಟಾಕ್ ಪ್ರತಿ ಷೇರಿಗೆ 181 ರೂಪಾಯಿಯಿಂದ 2021ರ ಸೆಪ್ಟೆಂಬರ್ನಲ್ಲಿ 253.60 ರೂಪಾಯಿಗೆ ಏರಿದೆ – ಒಂದೇ ತಿಂಗಳಲ್ಲಿ 72.35 ರೂಪಾಯಿ ಏರಿಕೆಯಾಗಿದೆ. ಡೆಲ್ಟಾ ಕಾರ್ಪ್ ಷೇರಿನಲ್ಲಿ ಇಂತಹ ಏರಿಕೆಯೊಂದಿಗೆ ಅದರ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯವು ಈ ತಿಂಗಳಲ್ಲಿ 145 ಕೋಟಿ ರೂಪಾಯಿ ಜಿಗಿದಿದೆ.
ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಮೌಲ್ಯದಲ್ಲಿ ಏರಿಕೆ 2021ರ ಏಪ್ರಿಲ್ನಿಂದ ಜೂನ್ ತ್ರೈಮಾಸಿಕದಲ್ಲಿ ಡೆಲ್ಟಾ ಕಾರ್ಪ್ ಷೇರುಗಳು ಯಾರ ಬಳಿ ಎಷ್ಟಿವೆ ಎಂದು ನೋಡಿದರೆ, ರಾಕೇಶ್ ಜುಂಜುನ್‌ವಾಲಾ ಅವರು ಡೆಲ್ಟಾ ಕಾರ್ಪ್ ಕಂಪೆನಿಯಲ್ಲಿ 2 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಈ ಸ್ಟಾಕ್ 2021ರ ಸೆಪ್ಟೆಂಬರ್ನಲ್ಲಿ ತಲಾ ರೂ. 72.35 ಏರಿಕೆಯಾಗಿದೆ. ಹಾಗಾಗಿ, ಡೆಲ್ಟಾ ಕಾರ್ಪ್‌ನಲ್ಲಿ ರಾಕೇಶ್ ಜುಂಜುನ್‌ವಾಲಾ ಸಂಪತ್ತಿನ ನಿವ್ವಳ ಏರಿಕೆ ಸುಮಾರು 145 ಕೋಟಿ ರೂಪಾಯಿಗಳಷ್ಟಾಗಿದೆ (ರೂ.72.35 x 2,00,00,000). ಆದರೂ ಷೇರು ಮಾರುಕಟ್ಟೆ ತಜ್ಞರು ಈ ಕಂಪೆನಿಯ ಷೇರುಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಜಾಗೃತರಾಗಿದ್ದಾರೆ. ಸ್ಟಾಕ್ ಇನ್ನೂ ಪಾಸಿಟಿವ್ ಆಗಿ ಕಾಣುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದು ದೀರ್ಘಾವಧಿಯ ದೃಷ್ಟಿಕೋನದಲ್ಲಿ ತಲಾ 400 ರೂಪಾಯಿವರೆಗೆ ಹೋಗಬಹುದು ಎನ್ನಲಾಗುತ್ತಿದೆ.
ಡೆಲ್ಟಾ ಕಾರ್ಪ್ ಷೇರು ಬೆಲೆ ನೋಟ ಡೆಲ್ಟಾ ಕಾರ್ಪ್ ಷೇರು ಬೆಲೆ ಏರಿಕೆಯನ್ನು ಬೆಂಬಲಿಸುವ ಮೂಲಭೂತ ಅಂಶಗಳ ಬಗ್ಗೆ ವಿವರಣೆ ನೀಡುತ್ತಾ, ಈಕ್ವಿಟಿ 99ರ ಸಹ-ಸಂಸ್ಥಾಪಕ ರಾಹುಲ್ ಶರ್ಮಾ ಮಾತನಾಡಿ, “ಕಂಪೆನಿಯು ಬಹುತೇಕ ಋಣಮುಕ್ತವಾಗಿದೆ. ನಿರಂತರವಾಗಿ ಪಾಸಿಟಿವ್ ಕಾರ್ಯಾಚರಣೆ ನಗದು ಹರಿವನ್ನು ಸೃಷ್ಟಿಸುತ್ತಿದೆ. ಪ್ರವರ್ತಕರು ಕಂಪೆನಿಯಲ್ಲಿ ಶೇ 33.28ರಷ್ಟು ಪಾಲನ್ನು ಹೊಂದಿದ್ದಾರೆ. ಡಿಐಐಗಳು ಶೇ 7.78ರಷ್ಟು ಹೊಂದಿದ್ದಾರೆ ಮತ್ತು ಎಫ್ಐಐಗಳು ಶೇ 6.80 ಪಾಲನ್ನು ಹೊಂದಿವೆ. ಈ ಕೌಂಟರ್ ಅಲ್ಪಾವಧಿಯಲ್ಲಿ 280 ರಿಂದ 300 ರೂಪಾಯಿಯ ಗುರಿ ಬೆಲೆಯನ್ನು ತಲುಪಬಹುದು ಎಂದು ನಾವು ನಿರೀಕ್ಷಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ.
ಭಾರತೀಯ ಗೇಮಿಂಗ್ ಮತ್ತು ಆತಿಥ್ಯ ಸಂಸ್ಥೆಯಾಗಿರುವ ಡೆಲ್ಟಾ ಕಾರ್ಪ್ ದೇಶದಲ್ಲಿ ಕ್ಯಾಸಿನೊಗಳನ್ನು ಹೊಂದಿದೆ ಮತ್ತು ನಿರ್ವಹಿಸುತ್ತಿದೆ. ಡೆಲ್ಟಾ ಕಾರ್ಪ್ನ ದೀರ್ಘಾವಧಿಯ ಷೇರು ಬೆಲೆ ಗುರಿಯ ಕುರಿತು ಸ್ವಸ್ತಿಕ ಇನ್‌ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಮಾತನಾಡುತ್ತಾ, “ತಾಂತ್ರಿಕವಾಗಿ ಕೌಂಟರ್ ಬುಲ್ಲಿಷ್ ಝೋನ್ ಪ್ರವೇಶಿಸುತ್ತಿದೆ. ಈ ಕೌಂಟರ್ ಅನ್ನು 400 ರೂಪಾಯಿ ಮಟ್ಟಕ್ಕೆ ತಲುಪಬಹುದು. 280 ರೂಪಾಯಿ ತಕ್ಷಣದ ಗುರಿಯಾಗಿದೆ. ತಳ ಮಟ್ಟದಲ್ಲಿ 200 ರೂಪಾಯಿಯಿಂದ 180 ರೂಪಾಯಿಯ ಝೋನ್ ಯಾವುದೇ ಕರೆಕ್ಷನ್ (ಇಳಿಕೆ) ಬಂದಲ್ಲಿ ಬಲವಾದ ಬೇಡಿಕೆ ವಲಯವಾಗಿ ಕಾರ್ಯ ನಿರ್ವಹಿಸುತ್ತದೆ.”
ಇದನ್ನೂ ಓದಿ: Rakesh Jhunjhunwala: ಈ ಹಿರಿಯ ಹೂಡಿಕೆದಾರರ ಇನ್ವೆಸ್ಟ್ಮೆಂಟ್ನಿಂದ 9 ದಿನದಲ್ಲಿ ರೂ. 49.50 ಕೋಟಿ ಲಾಭ