Aadhaar Authentication: ಆಧಾರ್​ ದೃಢೀಕರಣದ ದರ ಇಳಿಕೆ ಮಾಡಿದ ಸರ್ಕಾರ; ಇಲ್ಲಿದೆ ಸಂಪೂರ್ಣ ವಿವರ

ಆಧಾರ್ ದೃಢೀಕರಣ ಶುಲ್ಕವನ್ನು ಯುಐಡಿಎಐನಿಂದ ಇಳಿಕೆ ಮಾಡಲಾಗಿದೆ. ಆ ಬಗ್ಗೆ ಸಂಪೂರ್ಣ ವಿವರ ನಿಮ್ಮೆದುರು ಇದೆ.

Aadhaar Authentication: ಆಧಾರ್​ ದೃಢೀಕರಣದ ದರ ಇಳಿಕೆ ಮಾಡಿದ ಸರ್ಕಾರ; ಇಲ್ಲಿದೆ ಸಂಪೂರ್ಣ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 30, 2021 | 2:23 PM

ಆಧಾರ್ ಕಾರ್ಡ್​ ವಿತರಣೆ ಮಾಡುವ ಯುಐಡಿಎಐನಿಂದ ಇತ್ತೀಚೆಗೆ ಗ್ರಾಹಕರಿಂದ ಮಾಡುವ ದೃಢೀಕರಣದ ದರವನ್ನು ಕಡಿತಗೊಳಿಸಲಾಗಿದೆ. ತಮ್ಮ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ವಿವಿಧ ಸೇವೆಗಳು ಮತ್ತು ಪ್ರಯೋಜನಗಳ ಮೂಲಕ ಜನರಿಗೆ ಸುಲಭವಾಗಿ ದಕ್ಕಲು ಅನುವು ಮಾಡಿಕೊಡುವ ಸಲುವಾಗಿ ಸರ್ಕಾರಿ ಸಂಸ್ಥೆಯು ದರವನ್ನು ರೂ.20ರಿಂದ ರೂ.3 ಕ್ಕೆ ಇಳಿಸಿದೆ. NPCI-IAMAI ಆಯೋಜಿಸಿದ ಜಾಗತಿಕ ಫಿನ್‌ಟೆಕ್ ಸಮಾವೇಶದಲ್ಲಿ ಮಾತನಾಡಿದ UIDAI ಸಿಇಒ ಸೌರಭ್ ಗರ್ಗ್, ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಆಧಾರ್ ಅನ್ನು ಸದುಪಯೋಗಪಡಿಸಿಕೊಳ್ಳುವ ಸಾಮರ್ಥ್ಯವು ಅಗಾಧವಾಗಿದೆ ಎಂದು ಹೇಳಿದ್ದಾರೆ. ಈ ಸಮಾರಂಭದಲ್ಲಿ ಇನ್ನೂ ಮುಂದುವರಿದು ಮಾತನಾಡಿ, ಏಜೆನ್ಸಿಗಳು ಮತ್ತು ಸಂಸ್ಥೆಗಳು ಉತ್ತಮ ಮೂಲಸೌಕರ್ಯವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರತಿ ದೃಢೀಕರಣಕ್ಕೆ ರೂ 20ರಿಂದ ರೂ. 3ಕ್ಕೆ ದರವನ್ನು ಕಡಿತಗೊಳಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ರಾಜ್ಯಗಳು ರೂಪಿಸಿದ ಡಿಜಿಟಲ್ ಮೂಲಸೌಕರ್ಯದ ಶಕ್ತಿಯನ್ನು ಸಂಸ್ಥೆಗಳು ಸಮರ್ಥವಾಗಿ ಬಳಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಇಲ್ಲಿಯವರೆಗೆ 99 ಕೋಟಿಗೂ ಹೆಚ್ಚು ಇಕೆವೈಸಿ ಪ್ರಕ್ರಿಯೆಗಳನ್ನು ಆಧಾರ್ ವ್ಯವಸ್ಥೆಯನ್ನು ಬಳಸಿ ನಡೆಸಲಾಗಿದೆ. ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸದ ಕಾರ್ಡ್​ದಾರರು ತಮ್ಮ ಆಧಾರ್ ಕಾರ್ಡ್‌ಗಳನ್ನು ಸಂಸ್ಥೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳುವ ಕೆಲವು ಬದಲಾವಣೆಗಳನ್ನು ಈ ತಿಂಗಳ ಆರಂಭದಲ್ಲಿ ಯುಐಡಿಎಐ ಘೋಷಿಸಿತ್ತು. ಫಿನ್​ಟೆಕ್ ಕಂಪೆನಿಗಳು ಹೊಸ ಗ್ರಾಹಕರನ್ನು ಪಡೆದಾಗ ಇದು ಹೆಚ್ಚು ವೆಚ್ಚ-ಪರಿಣಾಮಕಾರಿ ಮತ್ತು ಉತ್ತಮ ಸಲ್ಯೂಷನ್ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಗರ್ಗ್ ಹೇಳಿದ್ದಾರೆ. ಅಧಿಕಾರವು ಇಲ್ಲಿಯೇ ಇದೆ ಮತ್ತು KYC ಆಧಾರ್ ಜೀವಮಾನದ ಗುರುತನ್ನು ಒದಗಿಸುತ್ತದೆ ಹಾಗೂ ಅದನ್ನು ಮರುಬಳಕೆ ಮಾಡಬಹುದಾಗಿದೆ. ಇದು ಆಧಾರ್ ವ್ಯವಸ್ಥೆಯ ಶಕ್ತಿ ಎಂದಿದ್ದಾರೆ. ಯುಐಡಿಎಐ ಯಾವುದೇ ಬಯೋಮೆಟ್ರಿಕ್ ಅನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅದರ ಎಲ್ಲ ಪಾಲುದಾರರು ಯುಐಡಿಎಐನಂತೆಯೇ ಅದೇ ಮಟ್ಟದ ಭದ್ರತೆ ಮತ್ತು ಗೋಪ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ವಿವಿಧ ಸರ್ಕಾರಿ ಯೋಜನೆಗಳು ಮತ್ತು ಖಾಸಗಿ ಸೇವಾ ಪೂರೈಕೆದಾರರಾದ PDS, NREGA, ಬ್ಯಾಂಕ್​ಗಳು ಮತ್ತು ಟೆಲಿಕಾಂ ಆಪರೇಟರ್‌ಗಳು ತಮ್ಮ ಫಲಾನುಭವಿಗಳು/ಗ್ರಾಹಕರ ಪರಿಶೀಲನೆಗಾಗಿ ಆಧಾರ್ ದೃಢೀಕರಣವನ್ನು ಅಳವಡಿಸಿಕೊಂಡಿದ್ದಾರೆ. ಈ ದೃಢೀಕರಣವನ್ನು ಸಾಮಾನ್ಯವಾಗಿ ಅನುಕೂಲಗಳ ವಿತರಣೆಯ ಸಮಯದಲ್ಲಿ ಅಥವಾ ಸೇವೆಗೆ ಚಂದಾದಾರರಾಗುವ ಮೂಲಕ ಮಾಡಲಾಗುತ್ತದೆ.

ಆಧಾರ್ ದೃಢೀಕರಣ ಬೆಲೆ: (ಗುಡ್ ರಿಟರ್ನ್ಸ್ ವರದಿ ಮಾಡಿದಂತೆ ಸುತ್ತೋಲೆಯ ವಿವರಗಳು) ಯುಐಡಿಎಐ ಮಾಡಿದ ಹೊಸ ನಿಯಮಾವಳಿಗಳನ್ನು ಆಧಾರ್ (ಆಧಾರ್ ದೃಢೀಕರಣ ಸೇವೆಗಳ ಬೆಲೆ) ನಿಯಮಗಳು, 2021 (ಸಂಖ್ಯೆ 2021) ಎಂದು ಕರೆಯಬಹುದು. UIDAI ಪ್ರಕಾರ ಆಧಾರ್ ದೃಢೀಕರಣ ಸೇವೆಗಳ ಹೊಸ ಶುಲ್ಕಗಳು ಹೀಗಿವೆ: (ಎ) ಆಧಾರ್ ದೃಢೀಕರಣ ಸೇವೆಗಳಿಗೆ ರೂ. 3 (ಅನ್ವಯವಾಗುವ ತೆರಿಗೆಗಳು ಸೇರಿದಂತೆ) ಮತ್ತು ಪ್ರತಿ ಯಶಸ್ವಿ ಆಧಾರ್ ಇ-ಕೆವೈಸಿ ವಹಿವಾಟಿಗೆ ರೂ. 0.50 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) ಮತ್ತು ಪ್ರತಿ ಯಶಸ್ವಿ ಹೌದು/ಇಲ್ಲ ದೃಢೀಕರಣ ವಹಿವಾಟು ಕ್ರಮವಾಗಿ ವಿನಂತಿಸುವ ಸಂಸ್ಥೆಗಳಿಂದ ಪಡೆಯಲಾಗುತ್ತದೆ. (ಬಿ) ಪ್ರತಿ ವಿಫಲ ವಹಿವಾಟಿಗೆ, ಆದರೆ ಚಾರ್ಜ್ ಮಾಡಬಹುದಾದ ಆಧಾರ್ ಇ-ಕೆವೈಸಿ ವಹಿವಾಟು ಅಥವಾ ಹೌದು/ಇಲ್ಲ ದೃಢೀಕರಣ ವಹಿವಾಟಿಗೆ ರೂ. 0.50 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) ವಿನಂತಿಸುವ ಘಟಕಗಳಿಂದ ಪಡೆಯಲಾಗುತ್ತದೆ (ಸಿ) ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವಾಲಯಗಳು/ಇಲಾಖೆಗಳ ಪರವಾಗಿ ಅಥವಾ ಅಧಿಸೂಚಿತ ಸೇವೆಗಳಿಗಾಗಿ, ಲಾಭಗಳು ಮತ್ತು ಸಬ್ಸಿಡಿಗಳ ವರ್ಗಾವಣೆಯ ದೃಢೀಕರಣ ವಹಿವಾಟುಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. (ಡಿ) ಮೇಲಿನ ಶುಲ್ಕಗಳು ಪರವಾನಗಿ ಶುಲ್ಕಗಳು ಮತ್ತು ಹಣಕಾಸಿನ Disincentiveಗೆ ಹೆಚ್ಚುವರಿಯಾಗಿ ಅನ್ವಯವಾಗುತ್ತದೆ. (ಇ) ವಹಿವಾಟು ದೋಷ ಸಂಕೇತಗಳ ವಿವರಗಳು ಮತ್ತು ಅದರ ಶುಲ್ಕಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. (ಎಫ್) ನಿಯಮಾವಳಿ 2 (1)ನಲ್ಲಿರುವಂತೆ ದೃಢೀಕರಣ ವಹಿವಾಟು ಶುಲ್ಕಗಳು (ಆಧಾರ್ ಇ-ಕೆವೈಸಿ ಮತ್ತು ಹೌದು/ಇಲ್ಲ ವಹಿವಾಟುಗಳೆರಡಕ್ಕೂ) ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಅದರ ಸಮೀಪದ ಹತ್ತು ಪೈಸೆಯಂತೆ ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.

ಒಟ್ಟಾರೆಯಾಗಿ, ಯುಐಡಿಎಐ ತನ್ನ ವೇದಿಕೆಯಲ್ಲಿ ಹೆಚ್ಚಿನ ಮಟ್ಟದ ಒಳಗೊಳ್ಳುವಿಕೆಯನ್ನು ಪರಿಚಯಿಸಲು ಇದು ಸಕಾರಾತ್ಮಕ ಕ್ರಮವಾಗಿದೆ. ಇದು ಹೆಚ್ಚಿನ ಜನರು ಭಾಗವಹಿಸಲು ಮತ್ತು ಆಧಾರ್ ವ್ಯವಸ್ಥೆಯೊಂದಿಗೆ ಸಂಯೋಜನೆಗೊಳ್ಳಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: GST Filing: ಜಿಎಸ್​ಟಿ ಮರುಪಾವತಿಗೆ ಕ್ಲೇಮ್​ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ