AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ

ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ

ನಯನಾ ರಾಜೀವ್
|

Updated on: May 19, 2025 | 2:04 PM

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಜಾಫರ್ ಎಕ್ಸ್‌ಪ್ರೆಸ್ ಅಪಹರಣದ ವೀಡಿಯೊವನ್ನು ಬಿಡುಗಡೆ ಮಾಡಿದೆ. ಬಿಎಲ್ಎ ಇದಕ್ಕೆ ಆಪರೇಷನ್ ದರ್ರಾ-ಎ-ಬೋಲನ್ 2.0 ಎಂದು ಹೆಸರಿಟ್ಟಿತ್ತು. ಈ ವರ್ಷದ ಮಾರ್ಚ್‌ನಲ್ಲಿ, ಬಲೂಚಿಸ್ತಾನ್ ಬಂಡುಕೋರರ ಗುಂಪು ಬಿಎಲ್‌ಎ, ಬೋಲಾನ್ ಪ್ರದೇಶದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಎಂಬ ಪಾಕಿಸ್ತಾನಿ ರೈಲನ್ನು ಅಪಹರಿಸಿತ್ತು.

ಬಲೂಚಿಸ್ತಾನ, ಮೇ 19: ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಜಾಫರ್ ಎಕ್ಸ್‌ಪ್ರೆಸ್ ಅಪಹರಣದ ವೀಡಿಯೊವನ್ನು ಬಿಡುಗಡೆ ಮಾಡಿದೆ. ಬಿಎಲ್ಎ ಇದಕ್ಕೆ ಆಪರೇಷನ್ ದರ್ರಾ-ಎ-ಬೋಲನ್ 2.0 ಎಂದು ಹೆಸರಿಟ್ಟಿತ್ತು. ಈ ವರ್ಷದ ಮಾರ್ಚ್‌ನಲ್ಲಿ, ಬಲೂಚಿಸ್ತಾನ್ ಬಂಡುಕೋರರ ಗುಂಪು ಬಿಎಲ್‌ಎ, ಬೋಲಾನ್ ಪ್ರದೇಶದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಎಂಬ ಪಾಕಿಸ್ತಾನಿ ರೈಲನ್ನು ಅಪಹರಿಸಿತ್ತು.

ಈ ರೈಲಿನಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.ಬಲೂಚ್ ಲಿಬರೇಶನ್ ಆರ್ಮಿಯ ಮಾಧ್ಯಮ ವಿಭಾಗವಾದ ಹಕ್ಕಲ್, ಜಾಫರ್ ಎಕ್ಸ್‌ಪ್ರೆಸ್ ಅಪಹರಣದ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಬಲೂಚ್ ಬಂಡುಕೋರರು ಪಾಕಿಸ್ತಾನಿ ಸೇನೆಯ ಮೇಲೆ ಹೇಗೆ ದಾಳಿ ಮಾಡಿ ಅವರ ಸ್ಥಿತಿಯನ್ನು ಹೇಗೆ ಹದಗೆಡಿಸಿತು ಎಂಬುದನ್ನು ತೋರಿಸಿದ್ದಾರೆ.

ವೀಡಿಯೊದಲ್ಲಿ, ಬಿಎಲ್‌ಎ ಹೋರಾಟಗಾರರು ಬಲೂಚಿಸ್ತಾನ್ ಸ್ವಾತಂತ್ರ್ಯದ ಧ್ವಜವನ್ನು ಹಿಡಿದು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆಯುವವರೆಗೆ ಹೋರಾಟವನ್ನು ಮುಂದುವರಿಸುವ ಬಗ್ಗೆ ಮಾತನಾಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಎಂಬ ಪ್ಯಾಸೆಂಜರ್ ರೈಲನ್ನು ಹೈಜಾಕ್ ಮಾಡಿದ್ದ ಬಲೂಚ್ ಬಂಡುಕೋರರು, 20 ಯೋಧರನ್ನು ಹತ್ಯೆ ಮಾಡಿದ್ದು, 182 ಪ್ರಯಾಣಿಕರನ್ನು ಬಲೂಚಿಸ್ತಾನದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಪಾಕಿಸ್ತಾನ ಸೇನೆಯು 33 ದಾಳಿಕೋರರನ್ನು ಕೊಂದಿರುವುದಾಗಿ ಹೇಳಿದೆ. ಬಿಎಲ್​ಎ ಘಟನೆಯಲ್ಲಿ 214 ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಪಾಕ್ ಸೇನೆ 26 ಮಂದಿ ಸತ್ತಿರುವುದಾಗಿ ಹೇಳಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ