AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಫಾರ್ಮಾ ಸೆಕ್ಟರ್ ಆದಾಯ ಶೇ. 7.8 ಬೆಳೆಯುವ ಸಾಧ್ಯತೆ: ಫಿಚ್ ಗ್ರೂಪ್ ಅಂದಾಜು

India's pharma sector: ಭಾರತದ ಔಷಧ ವಲಯದ ಬೆಳವಣಿಗೆ ಏಪ್ರಿಲ್ ತಿಂಗಳಲ್ಲಿ ಶೇ. 7.8ರ ವಾರ್ಷಿಕ ದರದಷ್ಟು ಇರಲಿದೆ ಎಂದು ಫಿಚ್ ಗ್ರೂಪ್​​ನ ತಜ್ಞರು ಅಂದಾಜಿಸಿದ್ದಾರೆ. 2014ರಿಂದ ಈಚೆಗೆ ಭಾರತದ ಫಾರ್ಮಾ ಸೆಕ್ಟರ್ ಬಹಳ ಅಮೋಘವಾಗಿ ಬೆಳೆದಿದ್ದು ಇದರ ಗಾತ್ರ ಈಗ ನಾಲ್ಕು ಲಕ್ಷ ಕೋಟಿ ರೂಗಿಂತ ಹೆಚ್ಚಿದೆ. ವಿಶ್ವಕ್ಕೆ ಬೇಕಾದ ಅತಿಹೆಚ್ಚು ಲಸಿಕೆ ಮತ್ತು ಜೆನೆರಿಕ್ ಔಷಧವನ್ನು ಭಾರತ ತಯಾರಿಸುತ್ತದೆ.

ಭಾರತದ ಫಾರ್ಮಾ ಸೆಕ್ಟರ್ ಆದಾಯ ಶೇ. 7.8 ಬೆಳೆಯುವ ಸಾಧ್ಯತೆ: ಫಿಚ್ ಗ್ರೂಪ್ ಅಂದಾಜು
ಔಷಧ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2025 | 7:27 PM

Share

ನವದೆಹಲಿ, ಮೇ 18: ಭಾರತ ಇಲ್ಲದಿದ್ದರೆ ಇವತ್ತು ಜಗತ್ತಿನಾದ್ಯಂತ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳು ಸಿಗುವ ಅವಕಾಶ ಕಡಿಮೆ ಇತ್ತು. ವಿಶ್ವದ ಶೇ. 20ರಷ್ಟು ಜೆನೆರಿಕ್ ಔಷಧಗಳು (generic medicines) ಭಾರತದಲ್ಲೇ ತಯಾರಾಗುತ್ತವೆ. ಭಾರತದ ಫಾರ್ಮಾ ಕ್ಷೇತ್ರ ದಿನೇ ದಿನೇ ಬಲಗೊಳ್ಳುತ್ತಿದೆ. ಫಿಚ್ ಗ್ರೂಪ್​​ನ ಇಂಡಿಯಾ ರೇಟಿಂಗ್ಸ್ ಪ್ರಕಾರ ಭಾರತದ ಫಾರ್ಮಾ ಸೆಕ್ಟರ್ (pharma sector) 2025ರ ಏಪ್ರಿಲ್​​ನಲ್ಲಿ ಶೇ. 7.8ರ ವಾರ್ಷಿಕ ದರದಲ್ಲಿ ಆದಾಯ ಹೆಚ್ಚಿಸಿಕೊಳ್ಳಬಹುದು.

ಭಾರತದ ಔಷಧ ಉದ್ಯಮ ಬೃಹತ್ ಗಾತ್ರದ್ದಾಗಿದೆ. 2023-24ರಲ್ಲಿ ಈ ವಲಯದ ಬ್ಯುಸಿನೆಸ್ ಟರ್ನೋವರ್ 4.17 ಲಕ್ಷ ಕೋಟಿ ರೂ ಇತ್ತು. ಕಳೆದ ಐದು ವರ್ಷಗಳಿಂದ ಶೇ. 10ರ ವಾರ್ಷಿಕ ದರದಲ್ಲಿ ಇದು ಬೆಳೆಯುತ್ತಿದೆ. ಅತಿಹೆಚ್ಚು ಔಷಧ ತಯಾರಿಸುವುದರಲ್ಲಿ ಭಾರತ ಮೂರನೇ ಸ್ಥಾನ ಪಡೆಯುತ್ತದೆ. ತಯಾರಾಗುವ ಔಷಧದ ಒಟ್ಟು ಮೌಲ್ಯದಲ್ಲಿ ಭಾರತ ನಂಬರ್ 14 ಆಗಿದೆ.

ಇದನ್ನೂ ಓದಿ: ಪಾಶ್ಚಿಮಾತ್ಯ ದೇಶಗಳನ್ನು ರಿಮೋಟ್ ಕಂಟ್ರೋಲ್​​ನಿಂದ ಅಲುಗಾಡಿಸಲಿದೆಯಾ ಚೀನಾ? ಇಲ್ಲಿದೆ ಸೋಲಾರ್ ಕಿಲ್ ಸ್ವಿಚ್ ತಂತ್ರ

ಯುನಿಸೆಫ್​​ನ ಲಸಿಕೆ ಯೋಜನೆಗಳಿಗೆ ಬೇಕಾದ ಶೇ. 55-60ರಷ್ಟು ವ್ಯಾಕ್ಸಿನ್​​ಗಳನ್ನು ಭಾರತೀಯ ಕಂಪನಿಗಳು ಸರಬರಾಜು ಮಾಡುತ್ತವೆ. ಡಬ್ಲ್ಯುಎಚ್​​ಒದ ಶೇ. 99ರಷ್ಟು ಡಿಪಿಟಿ ವ್ಯಾಕ್ಸಿನ್​​ಗಳು ಭಾರತದಿಂದಲೇ ಹೋಗುತ್ತವೆ. ಟಿಬಿ ಮತ್ತಿತರ ರೋಗಗಳು ಬಾರದಂತೆ ನೀಡುವ ಹೆಚ್ಚಿನ ಲಸಿಕೆಗಳು ಭಾರತದಲ್ಲೇ ತಯಾರಾಗುತ್ತದೆ. ಭಾರತವು ಜಾಗತಿಕ ಲಸಿಕೆ ಕೇಂದ್ರ ಎಂದೇ ಪರಿಗಣಿತವಾಗಿದೆ.

ಭಾರತದಲ್ಲಿ ತಯಾರಾದ ಲಸಿಕೆಗಳು ವಿಶ್ವಾದ್ಯಂತ ಕೋಟ್ಯಂತರ ಜನರ ಜೀವ ಉಳಿಸಿದೆ. ರೋಗಗಳು ಬಾರದಂತೆ ನಿಯಂತ್ರಿಸಲು ಸಹಕಾರಿಯಾಗಿವೆ. ಲಸಿಕೆ ಮಾತ್ರವಲ್ಲ, ಜೆನೆರಿಕ್ ಔಷಧಗಳ ತಯಾರಿಕೆಯಲ್ಲೂ ಭಾರತೀಯ ಕಂಪನಿಗಳು ಮುಂದಿವೆ.

ಇದನ್ನೂ ಓದಿ: ಅಮೆರಿಕಕ್ಕೆ ಕ್ರೆಡಿಟ್ ರೇಟಿಂಗ್ AAAನಿಂದ AA1ಗೆ ಇಳಿಸಿದ ಮೂಡೀಸ್; ಭಾರತಕ್ಕೆಷ್ಟಿದೆ ರೇಟಿಂಗ್? ಏನಿದರ ಅರ್ಥ?

500 ರೂ ಬೆಲೆ ಬಾಳುವ ಹೃದಯ ರೋಗದ ಔಷಧವೊಂದು ಈಗ ಕೇವಲ 100 ರೂಗೆ ಲಭ್ಯ ಇದೆ. ಅಷ್ಟು ಮಟ್ಟಕ್ಕೆ ಅಗ್ಗದ ಔಷಧಗಳನ್ನು ಭಾರತೀಯ ಕಂಪನಿಗಳು ನೀಡಲು ಸಫಲವಾಗಿವೆ. ಇದರಿಂದ ಜನಸಾಮಾನ್ಯರ ಔಷಧ ವೆಚ್ಚ ಗಣನೀಯವಾಗಿ ತಗ್ಗುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ