AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕಕ್ಕೆ ಕ್ರೆಡಿಟ್ ರೇಟಿಂಗ್ AAAನಿಂದ AA1ಗೆ ಇಳಿಸಿದ ಮೂಡೀಸ್; ಭಾರತಕ್ಕೆಷ್ಟಿದೆ ರೇಟಿಂಗ್? ಏನಿದರ ಅರ್ಥ?

Moody's credit rating for USA: ಮೂಡೀಸ್ ಎನ್ನುವ ಕ್ರೆಡಿಟ್ ರೇಟಿಂಗ್ ಏಜೆನ್ಸಿಯು ಅಮೆರಿಕಕ್ಕೆ ಗ್ರೇಡಿಂಗ್ ಕಡಿಮೆ ಮಾಡಿದೆ. ಅತ್ಯುಚ್ಚ ಎಎಐ ಎಂದಿದ್ದ ರೇಟಿಂಗ್ ಈಗ ಎಎ1ಗೆ ಇಳಿಸಲಾಗಿದೆ. ಒಂದು ದೇಶದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಎಷ್ಟು ರಿಸ್ಕಿ ಎಂಬುದನ್ನು ಈ ರೇಟಿಂಗ್ ಸೂಚಿಸುತ್ತದೆ. ಎಎಎನಿಂದ ಆರಂಭವಾಗಿ ಸಿವರೆಗೆ ವಿವಿಧ ರೇಟಿಂಗ್​​ಗಳಿವೆ. ಭಾರತಕ್ಕೆ ಬಿಎಎ3 ರೇಟಿಂಗ್ ನೀಡಲಾಗಿದೆ.

ಅಮೆರಿಕಕ್ಕೆ ಕ್ರೆಡಿಟ್ ರೇಟಿಂಗ್ AAAನಿಂದ AA1ಗೆ ಇಳಿಸಿದ ಮೂಡೀಸ್; ಭಾರತಕ್ಕೆಷ್ಟಿದೆ ರೇಟಿಂಗ್? ಏನಿದರ ಅರ್ಥ?
ಅಮೆರಿಕ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2025 | 3:54 PM

Share

ನವದೆಹಲಿ, ಮೇ 18: ವಿಶ್ವದ ಪ್ರಮುಖ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಮೂಡೀಸ್ ಈಗ ಅಮೆರಿಕಕ್ಕೆ ನೀಡಿದ್ದ ಅತ್ಯುಚ್ಚ ರೇಟಿಂಗ್ ಅನ್ನು ಕಡಿಮೆಗೊಳಿಸಿದೆ. ಇದು ಹೂಡಿಕೆದಾರರ (ಹಣಕಾಸು ಸಂಸ್ಥೆಗಳು) ಅವಗಾಹನೆಗೆ ರೇಟಿಂಗ್ ಏಜೆನ್ಸಿಗಳು ನೀಡುವ ಗ್ರೇಡಿಂಗ್. ಮೂಡೀಸ್ ಸಂಸ್ಥೆ ಅಮೆರಿಕಕ್ಕೆ ತಾನು ನೀಡಿದ್ದ ಎಎಎ ರೇಟಿಂಗ್ ಅನ್ನು ಈಗ ಎಎ1ಗೆ ಇಳಿಸಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಅಂಡ್ ಪೂರ್ ಹಾಗೂ ಫಿಚ್ ರೇಟಿಂಗ್​​ಗಳ ಸಾಲಿಗೆ ಮೂಡೀಸ್ ಸೇರಿದೆ. ಈ ಮೂರೂ ರೇಟಿಂಗ್ ಏಜೆನ್ಸಿಗಳು ಅಮೆರಿಕಕ್ಕೆ ರೇಟಿಂಗ್ ತಗ್ಗಿಸಿರುವುದು ಕುತೂಹಲ.

ಅಮೆರಿಕ್ಕೆ ರೇಟಿಂಗ್ ಇಳಿಸಿರುವುದು ಯಾಕೆ?

ಅಮೆರಿಕದ ವಿತ್ತೀಯ ಕೊರತೆಯು ಜಿಡಿಪಿಯ ಶೇ. 6.4ರಷ್ಟಿದೆ. 2035ರಲ್ಲಿ ಈ ಅಂತರವು ಶೇ. 9ಕ್ಕೆ ಏರಬಹುದು. 2024ರಲ್ಲಿ ಅಮೆರಿಕದ ಸಾಲವು ಜಿಡಿಪಿಗೆ ಹೋಲಿಸಿದರೆ ಶೇ. 98ರಷ್ಟಿದೆ. ಇದು 2035ರಲ್ಲಿ ಶೇ. 134ಕ್ಕೆ ಏರಬಹುದು. ಆಗ ಅಮೆರಿಕದ ಶೇ. 30ರಷ್ಟು ಆದಾಯವು ಬಡ್ಡಿ ಪಾವತಿಸಲೇ ಸಂದಾಯವಾಗಬಹುದು. ಈ ಕಾರಣಕ್ಕೆ ಮೂಡೀಸ್ ಸಂಸ್ಥೆಯು ಅಮೆರಿಕಕ್ಕೆ ರೇಟಿಂಗ್ ಅನ್ನು ಒಂದು ಹಂತ ಕೆಳಗಿಳಿಸಿದೆ.

ರೇಟಿಂಗ್​ನ ಅರ್ಥ, ಮಹತ್ವವೇನು?

ಮೂಡೀಸ್​​ನಂತಹ ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ವಿವಿಧ ದೇಶಗಳ ಸಾಲ ನಿರ್ವಹಣೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ರೇಟಿಂಗ್ ನೀಡುತ್ತವೆ. ಎಎಎನಿಂದ ಹಿಡಿದು ಸಿವರೆಗೆ ರೇಟಿಂಗ್ ಇರುತ್ತದೆ. ಎಎಎ ಅತ್ಯುಚ್ಚವಾದರೆ, ಸಿ ಎಂಬುದು ಕನಿಷ್ಠ ರೇಟಿಂಗ್.

ಇದನ್ನೂ ಓದಿ
Image
ಷೇರುಗಳ ಮೇಲೆ ಹೂಡಿಕೆ ಮಾಡುವವರೆ, ಈ ಪಂಚ ಪಾಠ ತಿಳಿದಿರಿ
Image
ಅಮೆರಿಕದಲ್ಲಿ ಐಫೋನ್ ತಯಾರಾದರೆ ಎಷ್ಟು ದುಬಾರಿಯಾಗುತ್ತೆ?
Image
ಪ್ಯಾನ್​​ನಲ್ಲಿರುವ 10 ಕ್ಯಾರೆಕ್ಟರ್​​ಗಳ ಅರ್ಥ ತಿಳಿಯಿರಿ
Image
ಎಪಿವೈ ಪೆನ್ಷನ್ ಸ್ಕೀಮ್; ಅರ್ಹತೆ, ವಯಸ್ಸು ಇತ್ಯಾದಿ ಮಾಹಿತಿ

ಇದನ್ನೂ ಓದಿ: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು

ಒಂದು ದೇಶಕ್ಕೆ ಹಾಗೂ ಅದರಲ್ಲಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲ ನೀಡುವುದು ಎಷ್ಟು ರಿಸ್ಕ್ ಇರಬಹುದು ಎಂಬುದನ್ನು ಈ ರೇಟಿಂಗ್ ಸೂಚಿಸುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಈ ರೇಟಿಂಗ್​​ನ ಆಧಾರವಾಗಿ ಸಾಲಗಳನ್ನು ನೀಡಲು ನಿರ್ಧರಿಸಬಹುದು. ಇಲ್ಲಿ ಬ್ಯಾಂಕುಗಳು ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಆಧಾರವಾಗಿ ಸಾಲ ನೀಡುವುದಕ್ಕೆ ಇದನ್ನು ಹೋಲಿಸಬಹುದು.

ಅಮೆರಿಕಕ್ಕೆ ರೇಟಿಂಗ್ ಅನ್ನು ಎಎ1ಗೆ ಇಳಿಸಿರುವುದು ತೀರಾ ಆತಂಕದ ಸಂಗತಿಯಲ್ಲ. ಅಮೆರಿಕದ ಹಣಕಾಸು ನಿರ್ವಹಣೆಯ ಸದ್ಯದ ಸ್ಥಿತಿ ಗಮನಿಸಿದರೆ ದೀರ್ಘಾವಧಿಯಲ್ಲಿ ರಿಸ್ಕ್ ತುಸು ಹೆಚ್ಚಿರಬಹುದು ಎಂಬುದು ಇದರ ಎಚ್ಚರಿಕೆ.

ಮೂಡೀಸ್​​ನ ಈ ಕ್ರೆಡಿಟ್ ರೇಟಿಂಗ್ ಇಳಿಕೆ ನಿರ್ಧಾರವನ್ನು ಅಮೆರಿಕ ಸರ್ಕಾರ ಒಪ್ಪಿಲ್ಲ. ಇದೊಂದು ರಾಜಕೀಯ ನಿರ್ಧಾರ ಎಂದು ಹೇಳಿದೆ. ಮೂಡೀಸ್ ಅನಾಲಿಟಿಕ್ಸ್ ಸಂಸ್ಥೆಯ ಆರ್ಥಿಕ ತಜ್ಞ ಮಾರ್ಕ್ ಝಾಂಡಿ ಅವರು ಮೂಲತಃ ಟ್ರಂಪ್ ವಿರೋಧಿ. ಹೀಗಾಗಿ, ಅವರ ಅನಿಸಿಕೆ ಇಲ್ಲಿ ಅಪ್ರಸ್ತುತ ಎಂದು ಅಮೆರಿಕ ಅಧ್ಯಕ್ಷರ ವಕ್ತಾರರು ಹೇಳಿದ್ದಾರೆ.

ಮೂಡೀಸ್​​ನ ವಿವಿಧ ರೇಟಿಂಗ್​​ಗಳ ಪಟ್ಟಿ

  • ಎಎಎ
  • ಎಎ1
  • ಎಎ2
  • ಎಎ3
  • ಎ1
  • ಎ2
  • ಎ3
  • ಬಿಎಎ1
  • ಬಿಎಎ2
  • ಬಿಎಎ3
  • ಬಿಎ1
  • ಬಿಎ2
  • ಬಿಎ3
  • ಬಿ1
  • ಬಿ2
  • ಬಿ3
  • ಸಿಎಎ1
  • ಸಿಎಎ2
  • ಸಿಎಎ3
  • ಸಿಎ
  • ಸಿ

ಇಲ್ಲಿ ಎಎಎನಿಂದ ಎ3ವರೆಗೆ ಇರುವ ರೇಟಿಂಗ್​​ಗಳು ಒಂದು ದೇಶದಲ್ಲಿನ ಹೂಡಿಕೆ ಕಡಿಮೆ ರಿಸ್ಕಿಯಾಗಿರಬಹುದು ಎಂಬುದನ್ನು ಸೂಚಿಸುತ್ತದೆ. ಬಿಎ1ನಿಂದ ಕೆಳಗಿರುವ ರೇಟಿಂಗ್​​​ಗಳು ಅಧಿಕ ರಿಸ್ಕ್ ಅನ್ನು ಸೂಚಿಸುತ್ತದೆ.

ಇದನ್ನೂ ಓದಿ: ಪ್ಯಾನ್ ಸಂಖ್ಯೆ ರಹಸ್ಯ… 4 ಮತ್ತು 5ನೇ ಅಕ್ಷರಕ್ಕಿದೆ ಮಹತ್ವ; ವ್ಯಕ್ತಿಯಾ, ಸರ್ಕಾರವಾ, ಕಂಪನಿಯಾ ಗುರುತಿಸಲು ಸಾಧ್ಯ

ಭಾರತ, ಪಾಕಿಸ್ತಾನಕ್ಕೆ ಎಷ್ಟಿದೆ ಮೂಡೀಸ್ ರೇಟಿಂಗ್?

ಮೂಡೀಸ್ ಸಂಸ್ಥೆ ಭಾರತಕ್ಕೆ ಬಿಎಎ3 ಎನ್ನುವ ರೇಟಿಂಗ್ ನೀಡಿದೆ. ಇದು ಹೈ ರಿಸ್ಕ್ ಮಟ್ಟಕ್ಕಿಂತ ಒಂದು ಹೆಜ್ಜೆ ಮೇಲಿರುವ ರೇಟಿಂಗ್.

ಪಾಕಿಸ್ತಾನವು ಸಿಎಎ2 ರೇಟಿಂಗ್ ಹೊಂದಿದೆ. ಬಹಳ ಕಡಿಮೆ ಗುಣಮಟ್ಟದ ಹಾಗೂ ಬಹಳ ರಿಸ್ಕಿ ಎನಿಸಿರುವ ಹೂಡಿಕೆ ಸ್ಥಳ ಎನಿಸಿದೆ. ಟರ್ಕಿ ದೇಶಕ್ಕೆ ಬಿ1 ರೇಟಿಂಗ್ ಇದೆ. ಇದೂ ಕೂಡ ಕಳಪೆಯೇ.

ಎಎಎ ರೇಟಿಂಗ್ ಇರುವ ದೇಶಗಳು

ಅತ್ಯುಚ್ಚ ಎಎಎ ರೇಟಿಂಗ್ ಇರುವ ದೇಶಗಳ ಪಟ್ಟಿ ಈ ಕೆಳಕಂಡಂತೆ ಇದೆ:

  1. ಆಸ್ಟ್ರೇಲಿಯಾ
  2. ಕೆನಡಾ
  3. ಜರ್ಮನಿ
  4. ಸಿಂಗಾಪುರ್
  5. ಸ್ವೀಡನ್
  6. ಸ್ವಿಟ್ಜರ್​​​ಲ್ಯಾಂಡ್
  7. ಲಕ್ಸುಂಬರ್ಗ್
  8. ನೆದರ್​​ಲ್ಯಾಂಡ್ಸ್
  9. ನ್ಯೂಜಿಲ್ಯಾಂಡ್
  10. ಡೆನ್ಮಾರ್ಕ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..