AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone cost: ಭಾರತ ಬಿಟ್ಟು ಅಮೆರಿಕದಲ್ಲಿ ಐಫೋನ್ ತಯಾರಾದರೆ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗುತ್ತೆ ಗೊತ್ತಾ?

Variation of iPhone cost if manufactured in USA and India: ಐಫೋನ್ ಅನ್ನು ಭಾರತದಲ್ಲಿ ತಯಾರಿಸುವ ಬದಲು ಅಮೆರಿಕದಲ್ಲಿ ತಯಾರಿಸಿ ಎಂದು ಆ್ಯಪಲ್ ಕಂಪನಿಗೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರಂತೆ. ಆದರೆ, ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಐಫೋನ್ ತಯಾರಿಕೆಯು ಅಗ್ಗವಾಗಿ ಆಗುತ್ತದೆ. ಗ್ರಾಹಕರಿಗೆ ಕಡಿಮೆ ಬೆಲೆಗೆ ಐಫೋನ್ ಸಿಗುತ್ತದೆ. ಅಮೆರಿಕದಲ್ಲಿ ತಯಾರಾದರೆ 1,000 ಡಾಲರ್ ಮೌಲ್ಯದ ಐಫೋನ್ ಬೆಲೆ 3,000 ಡಾಲರ್ ಆಗುತ್ತದೆ ಎಂದು ಹೋಲಿಕೆ ಮಾಡಲಾಗಿದೆ.

iPhone cost: ಭಾರತ ಬಿಟ್ಟು ಅಮೆರಿಕದಲ್ಲಿ ಐಫೋನ್ ತಯಾರಾದರೆ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗುತ್ತೆ ಗೊತ್ತಾ?
ಐಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2025 | 5:54 PM

Share

ನವದೆಹಲಿ, ಮೇ 16: ಡೊನಾಲ್ಡ್ ಟ್ರಂಪ್ ಅವರು ಐಫೋನ್​​ಗಳನ್ನು (iPhone manufacturing) ಭಾರತದಲ್ಲಿ ತಯಾರಿಸುವ ಬದಲು ಅಮೆರಿಕದಲ್ಲಿ ತಯಾರಿಸಿ ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಅವರಿಗೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಈಗಷ್ಟೇ ಚೀನಾದಿಂದ ಭಾರತಕ್ಕೆ ಹಂತ ಹಂತವಾಗಿ ತಯಾರಿಕಾ ಘಟಕಗಳನ್ನು ವರ್ಗಾಯಿಸುತ್ತಾ ಬರುತ್ತಿರುವ ಆ್ಯಪಲ್ ಕಂಪನಿ ಈಗ ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಶುರು ಹಚ್ಚಿಕೊಂಡರೆ ಹೇಗಾದೀತು..? ಭಾರತದ ಉದ್ಯಮ ಸಂಘಟನೆಯೊಂದರ ಮುಖ್ಯಸ್ಥ ಪ್ರಶಾಂತ್ ಗಿರ್ಬಾನೆ ಒಂದು ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಐಫೋನ್ ತಯಾರಿಸಿದರೆ ಎಷ್ಟು ಬೆಲೆ ಇದೆ, ಅಮೆರಿಕದಲ್ಲಿ ತಯಾರಿಸಿದರೆ ಎಷ್ಟು ಬೆಲೆಯಾಗುತ್ತದೆ ಎಂದು ಸರಳವಾಗಿ ಹೋಲಿಕೆ ಮಾಡಿದ್ದಾರೆ.

‘ಭಾರತ, ಚೀನಾ, ವಿಯೆಟ್ನಾಂ ದೇಶಗಳಲ್ಲಿ ತಯಾರಾಗುವ ಐಫೋನ್​​​ನ ಬೆಲೆ 1,000 ಡಾಲರ್ ಎಂದು ಭಾವಿಸಿ. ಅದೇ ಐಫೋನ್ ಅನ್ನು ಅಮೆರಿಕದಲ್ಲಿ ತಯಾರಿಸಿದರೆ, ಅದರ ಬೆಲೆ 3,000 ಡಾಲರ್ ಆಗುತ್ತದೆ. ಅಮೆರಿಕದ ಗ್ರಾಹಕರು 1,000 ರೂ ಬೆಲೆಯ ಐಫೋನ್​​ಗೆ 3,000 ಡಾಲರ್ ಕೊಡಲು ಸಿದ್ಧರಿರುತ್ತಾರಾ’ ಎಂದು ಮಹರಟ್ಟಾ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರೀಸ್ ಅಂಡ್ ಅಗ್ರಿಕಲ್ಚರ್​​ನ ಮಹಾನಿರ್ದೇಶಕರಾದ ಪ್ರಶಾಂತ್ ಗಿರ್ಬಾನೆ ಕೇಳಿದ್ದಾರೆ.

ಇದನ್ನೂ ಓದಿ: ಪಾಕ್ ಮಿತ್ರ ಟರ್ಕಿಗೆ ಅತ್ಯಾಧುನಿಕ ಕ್ಷಿಪಣಿಗಳನ್ನು ನೀಡಲು ಮುಂದಾದ ಅಮೆರಿಕ

ಇದನ್ನೂ ಓದಿ
Image
ಭಾರತದಲ್ಲಿ ಐಫೋನ್ ತಯಾರಿಸುವುದು ಬೇಡ: ಆ್ಯಪಲ್​​ಗೆ ಟ್ರಂಪ್ ಸೂಚನೆ
Image
ಬಿಇಎಲ್​​ನ ಆಕಾಶತೀರ ಈಗ ಆಪರೇಷನ್ ಸಿಂದೂರದ ಹೀರೋ
Image
ಪಾಕಿಸ್ತಾನದಲ್ಲಿ ರಹಸ್ಯವಾಗಿದ್ದ ಅಮೆರಿಕದ ಅಡ್ಡೆ ಈಗ ಬಟಾಬಯಲು?
Image
2019ರಲ್ಲಿ ಅದೇ ಹಾಡು...2025ರಲ್ಲೂ ಅದೇ ರಾಗ:.ಟ್ರಂಪ್​ನ ಬಿಲ್ಡಪ್​​ ಅನಾವರಣ

ಭಾರತದಲ್ಲಿ ಐಫೋನ್ ತಯಾರಿಸುವುದರಿಂದ ಅಮೆರಿಕನ್ನರ ಕೆಲಸ ಕಿತ್ತಂತಾಗುವುದಿಲ್ಲ…

ಕೆಲ ವರ್ಷಗಳ ಹಿಂದಿನವರೆಗೂ ಶೇ. 98ಕ್ಕೂ ಅಧಿಕ ಐಫೋನ್​​ಗಳು ಚೀನಾದಲ್ಲಿ ತಯಾರಾಗುತ್ತಿದ್ದುವು. ಕೋವಿಡ್ ಬಳಿಕ ಐಫೋನ್ ಸರಬರಾಜು ಸರಪಳಿಗೆ ತೊಂದರೆಯಾದ್ದರಿಂದ ಚೀನಾ ಬಿಟ್ಟು ಅನ್ಯ ದೇಶಗಳಲ್ಲೂ ತಯಾರಿಕೆ ವಿಸ್ತರಿಸಲು ಆ್ಯಪಲ್ ಕಂಪನಿ ನಿರ್ಧರಿಸಿತ್ತು. ಅದರಂತೆ ಹಂತ ಹಂತವಾಗಿ ಭಾರತದಲ್ಲಿ ಐಫೋನ್ ಫ್ಯಾಕ್ಟರಿಗಳು ಆರಂಭವಾಗಿವೆ. ಈಗ ಶೇ. 20ರಷ್ಟು ಐಫೋನ್​​ಗಳು ಭಾರತದಲ್ಲಿ ತಯಾರಾಗುತ್ತಿವೆ.

ಪ್ರಶಾಂತ್ ಗಿರ್ಬಾನ್ ಪ್ರಕಾರ, ಭಾರತದಲ್ಲಿ ಈಗ ಐಫೋನ್ ತಯಾರಾಗುತ್ತಿರುವುದರಿಂದ ಅಮೆರಿಕನ್ನರ ಕೆಲಸ ಕಿತ್ತುಕೊಂಡಂತೆ ಆಗುವುದಿಲ್ಲ. ಚೀನಾದಿಂದ ಭಾರತಕ್ಕೆ ತಯಾರಿಕೆ ವರ್ಗಾವಣೆ ಆಗಿದೆ. ವ್ಯಾಪಾರ ಸ್ನೇಹಿ ಅಲ್ಲದ ಒಂದೇ ರಾಷ್ಟ್ರದ ಮೇಲೆ ಅವಲಂಬನೆ ಆಗುವುದು ತಪ್ಪಿದರೆ ಅದು ಅಮೆರಿಕದ ಕಂಪನಿ ಮತ್ತು ಗ್ರಾಹಕರಿಗೆ ಒಳಿತೇ ಆಗುತ್ತದೆ ಅಲ್ಲವಾ ಎಂದು ಪ್ರಶ್ನಿಸುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ ಐಫೋನ್ ತಯಾರಿಕೆಗೆ ಕಲ್ಲು ಹಾಕುತ್ತಿದ್ದಾರಾ ಟ್ರಂಪ್; ಭಾರತದಿಂದ ಹೊರಬರುವಂತೆ ಆ್ಯಪಲ್​​ಗೆ ತಿಳಿಸಿದ ಅಮೆರಿಕ ಅಧ್ಯಕ್ಷ

ಅಮೆರಿಕದಲ್ಲಿ ತಯಾರಿಸಿದರೆ ಯಾಕೆ ಬೆಲೆ ಹೆಚ್ಚು?

ಅಮೆರಿಕ ಸಿರಿವಂತ ದೇಶ. ಅಲ್ಲಿ ಉದ್ಯೋಗಿಗಳಿಗೆ ನೀಡಬೇಕಾದ ಕನಿಷ್ಠ ಸಂಬಳವೇ ಬಹಳ ಅಧಿಕವಾದುದು. ಆದರೆ, ಚೀನಾ, ಭಾರತ. ವಿಯೆಟ್ನಾಂನಂತಹ ಬೆಳೆಯುತ್ತಿರುವ ಆರ್ಥಿಕತೆಯ ದೇಶಗಳಲ್ಲಿ ಸಂಬಳದ ಕಟ್ಟುಪಾಡುಗಳಿಲ್ಲ. ಜನಸಂಖ್ಯೆ ಹೆಚ್ಚಿರುವುದರಿಂದ ಅವಶ್ಯಕ ಮಾನವ ಸಂಪನ್ಮೂಲ ಲಭ್ಯ ಇರುತ್ತದೆ. ಹೀಗಾಗಿ, ಆ್ಯಪಲ್, ಟೆಸ್ಲಾದಂತಹ ಹಲವು ಅಮೆರಿಕನ್ ಕಂಪನಿಗಳು ಕೆಳ ಸ್ತರದ ದೇಶಗಳಲ್ಲಿ ಉತ್ಪಾದನೆ ಮಾಡಿ, ಅಲ್ಲಿಂದ ತಮ್ಮ ದೇಶಕ್ಕೆ ಹಾಗೂ ಇತರ ದೇಶಗಳಿಗೆ ರಫ್ತು ಮಾಡುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ