AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿ ಉತ್ಪನ್ನಗಳ ಬೇಡಿಕೆ ಹೆಚ್ಚಳ! ಲಾಭ, ಆದಾಯದಲ್ಲಿ ಏರಿಕೆ

ಪತಂಜಲಿ ಫುಡ್ಸ್ ನಾಲ್ಕನೇ ತ್ರೈಮಾಸಿಕದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವುದಲ್ಲದೆ ಇಡೀ ಹಣಕಾಸು ವರ್ಷದ ಡೇಟಾವನ್ನು ಸಹ ಪ್ರಸ್ತುತಪಡಿಸಿದ್ದು ಎರಡರಲ್ಲಿಯೂ ಹೆಚ್ಚಳ ಕಂಡುಬಂದಿದೆ. ಇದಕ್ಕೂ ಮೊದಲು, ಕಂಪನಿಯ ಷೇರುಗಳು ಸುಮಾರು ಒಂದೂವರೆ ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದ್ದವು. ಹಾಗಾದರೆ ಪತಂಜಲಿ ಫುಡ್ಸ್ ತ್ರೈಮಾಸಿಕ ಫಲಿತಾಂಶಗಳೆಷ್ಟು? ಆದಾಯದಲ್ಲಿ ಎಷ್ಟು ಹೆಚ್ಚಳವಾಗಿದೆ ಎಂಬುದನ್ನು ತಿಳಿದುಕೊಳ್ಳಿ.

ಪತಂಜಲಿ ಉತ್ಪನ್ನಗಳ ಬೇಡಿಕೆ ಹೆಚ್ಚಳ! ಲಾಭ, ಆದಾಯದಲ್ಲಿ ಏರಿಕೆ
ಪತಂಜಲಿ
ಪ್ರೀತಿ ಭಟ್​, ಗುಣವಂತೆ
|

Updated on: May 16, 2025 | 4:17 PM

Share

ದೇಶೀಯ ಎಫ್ ಎಮ್ ಸಿ ಜಿ (FMCG) ಕಂಪನಿ ಪತಂಜಲಿ (Patanjali) ಫುಡ್ಸ್ ಆದಾಯ ಮತ್ತು ಲಾಭದಲ್ಲಿ (Profit and Revenue) ನಿರಂತರ ಹೆಚ್ಚಳ ಕಾಣುತ್ತಿದೆ. ಈ ಕಾರಣದಿಂದಲೇ ಬಾಬಾ ರಾಮದೇವ್ ಅವರ ಕಂಪನಿಯು ವಿಶ್ವದ ಕೆಲವು ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಿದೆ. ಇನ್ನು ನಾಲ್ಕನೇ ತ್ರೈಮಾಸಿಕದ ಅಂಕಿ ಅಂಶಗಳನ್ನು ನೋಡಿದರೆ, ಕಂಪನಿಯ ಲಾಭದಲ್ಲಿ ಶೇಕಡಾ 74 ರಷ್ಟು ಏರಿಕೆ ಕಂಡುಬಂದಿದೆ. ಹೆಚ್ಚುವರಿಯಾಗಿ, ಕಂಪನಿಯ ಆದಾಯದಲ್ಲೂ ಹೆಚ್ಚಳ ಕಂಡು ಬಂದಿದೆ. ಕುತೂಹಲಕಾರಿ ವಿಷಯವೇನೆಂದರೆ ಕಂಪನಿಯು ನಾಲ್ಕನೇ ತ್ರೈಮಾಸಿಕದ ಅಂಕಿ ಅಂಶಗಳಜೊತೆಗೆ ಇಡೀ ಹಣಕಾಸು ವರ್ಷದ ಡೇಟಾವನ್ನು ಸಹ ಪ್ರಸ್ತುತಪಡಿಸಿದ್ದು ಇದರಲ್ಲಿಯೂ ಹೆಚ್ಚಳ ಕಂಡುಬಂದಿದೆ. ಈ ಹಿಂದೆ, ಕಂಪನಿಯ ಷೇರುಗಳು ಸುಮಾರು ಒಂದೂವರೆ ಪ್ರತಿಶತದಷ್ಟು ಏರಿಕೆಯನ್ನು ಕಂಡಿದ್ದವು.

ನಾಲ್ಕನೇ ತ್ರೈಮಾಸಿಕದಲ್ಲಿ ಲಾಭ, ಆದಾಯದಲ್ಲಿ ಹೆಚ್ಚಳ

ಕಳೆದ ಹಣಕಾಸು ವರ್ಷದ ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಪತಂಜಲಿ ಫುಡ್ಸ್ ಲಿಮಿಟೆಡ್‌ನ ನಿವ್ವಳ ಲಾಭವು ಶೇ. 74 ರಷ್ಟು ಏರಿಕೆಯಾಗಿ 358.53 ಕೋಟಿ ರೂಪಾಯಿಗಳಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ 2023- 24 ರ ಇದೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 206.31 ಕೋಟಿ ರೂಪಾಯಿಗಳಷ್ಟಿತ್ತು. ಈಗ ಪತಂಜಲಿ ಫುಡ್ಸ್ ಲಿಮಿಟೆಡ್ ಗುರುವಾರ ಷೇರು ಮಾರುಕಟ್ಟೆಗೆ ನೀಡಿದ ಅಧಿಸೂಚನೆಯಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಒಟ್ಟು ಆದಾಯ 9,744.73 ಕೋಟಿ ರೂಪಾಯಿಗಳಾಗಿದ್ದು, 2023-24 ರ ಇದೇ ತ್ರೈಮಾಸಿಕದಲ್ಲಿ ಇದು 8,348.02 ಕೋಟಿ ರೂಪಾಯಿಗಳಷ್ಟಿತ್ತು ಎಂದು ತಿಳಿಸಿದೆ.

ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಬರದಂತೆ ತಡೆಯಲು ಪತಂಜಲಿಯ ಈ ಔಷಧಿಗಳನ್ನು ತೆಗೆದುಕೊಳ್ಳಿ

ಇದನ್ನೂ ಓದಿ
Image
ಆಹಾರ ಸಂಯೋಜನೆ ಬಗ್ಗೆ ಗಮನ ಕೊಡಿ: ಪತಂಜಲಿ
Image
ರಕ್ತದೊತ್ತಡಕ್ಕೆ ಪತಂಜಲಿ BPGrit Vati ಔಷಧಿ
Image
ಪತಂಜಲಿಯ ಈ ಔಷಧಿಯ ಸೇವನೆಯಿಂದ ಕೊಲೆಸ್ಟ್ರಾಲ್‌ನಿಂದ ಮುಕ್ತಿಪಡೆಯಬಹುದಂತೆ
Image
ಶ್ವಾಸಕೋಶ ಕಾಯಿಲೆಗಳಿಗೆ ರಾಮಬಾಣ ಪತಂಜಲಿ ಬ್ರೋಂಕೋಮ್

ಇಡೀ ಹಣಕಾಸು ವರ್ಷದ ಲಾಭ ಎಷ್ಟು?

2024- 25ರ ಸಂಪೂರ್ಣ ಹಣಕಾಸು ವರ್ಷದ ಬಗ್ಗೆ ಮಾತನಾಡುವುದಾದರೆ ಕಂಪನಿಯ ಲಾಭದಲ್ಲಿ ಅಗಾಧವಾದ ಏರಿಕೆ ಕಂಡುಬಂದಿದೆ. ಅಂಕಿ ಅಂಶಗಳನ್ನು ನೋಡಿದರೆ, ಕಂಪನಿಯ ನಿವ್ವಳ ಲಾಭವು 1,301.34 ಕೋಟಿಗಳಿಗೆ ಏರಿದೆ, ಇದು 2023- 24ರ ಹಣಕಾಸು ವರ್ಷದಲ್ಲಿ 765.15 ಕೋಟಿಗಳಷ್ಟಿತ್ತು. ಆದಾಯದ ಬಗ್ಗೆ ಮಾತನಾಡಿದರೆ, ಕಂಪನಿಯ ಒಟ್ಟು ಆದಾಯವು 2023- 24ರ ಹಣಕಾಸು ವರ್ಷದಲ್ಲಿ 31,961.62 ಕೋಟಿಗಳಿಗೆ ಹೋಲಿಸಿದರೆ 2024- 25ರ ಹಣಕಾಸು ವರ್ಷದಲ್ಲಿ 34,289.40 ಕೋಟಿಗಳಿಗೆ ಏರಿದೆ.

ಗುರುವಾರ ಷೇರು ಮಾರುಕಟ್ಟೆಯಲ್ಲಿ ಪತಂಜಲಿ ಷೇರುಗಳಲ್ಲಿ ಏರಿಕೆ ಕಂಡು ಬಂದಿದೆ. ಅಂಕಿ ಅಂಶಗಳನ್ನು ನೋಡಿದರೆ, ಕಂಪನಿಯ ಷೇರು 1.41 ಪ್ರತಿಶತ ಅಥವಾ ಪ್ರತಿ ಷೇರಿಗೆ 25.20 ರೂಪಾಯಿಗಳಷ್ಟು ಏರಿಕೆಯಾಗಿ 1811.35 ರೂಪಾಯಿಯಾಗಿತ್ತು. ಏತನ್ಮಧ್ಯೆ, ಕಂಪನಿಯ ಷೇರು 1795.95 ರೂಪಾಯಿಗಳಲ್ಲಿ ಪ್ರಾರಂಭವಾಗಿ ಒಂದು ದಿನದಲ್ಲಿ ಗರಿಷ್ಠ 1824 ರೂಪಾಯಿಗಳನ್ನು ತಲುಪಿತ್ತು. ಪತಂಜಲಿ ಫುಡ್ಸ್ ಷೇರುಗಳು 52 ವಾರಗಳಲ್ಲಿ ಗರಿಷ್ಠ 2,030 ಆಗಿದೆ. ಪ್ರಸ್ತುತ, ಕಂಪನಿಯ ಮೌಲ್ಯ 65,603.03 ಕೋಟಿ ರೂಪಾಯಿಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!