AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turkey: ಪಾಕ್ ಮಿತ್ರ ಟರ್ಕಿಗೆ ಅತ್ಯಾಧುನಿಕ ಕ್ಷಿಪಣಿಗಳನ್ನು ನೀಡಲು ಮುಂದಾದ ಅಮೆರಿಕ

USA military support to Turkey: ಟರ್ಕಿ ದೇಶಕ್ಕೆ ಒಟ್ಟು 304 ಮಿಲಿಯನ್ ಡಾಲರ್ ಮೌಲ್ಯದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲು ಅಮೆರಿಕ ಮುಂದಾಗಿದೆ. 225 ಮಿಲಿಯನ್ ಡಾಲರ್ ಮೌಲ್ಯದ 53 ಎಐ-120ಸಿ-8 ಎನ್ನುವ ಸುಧಾರಿತ ಕ್ಷಿಪಣಿಗಳು ಹಾಗೂ 79 ಮಿಲಿಯನ್ ಡಾಲರ್ ಮೌಲ್ಯದ 60 ಬ್ಲಾಕ್-2 ಮಿಸೈಲ್​​ಗಳನ್ನು ಕೊಡಲು ಅಮೆರಿಕ ಒಪ್ಪಿಕೊಂಡಿದೆ.

Turkey: ಪಾಕ್ ಮಿತ್ರ ಟರ್ಕಿಗೆ ಅತ್ಯಾಧುನಿಕ ಕ್ಷಿಪಣಿಗಳನ್ನು ನೀಡಲು ಮುಂದಾದ ಅಮೆರಿಕ
ಕ್ಷಿಪಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2025 | 11:26 AM

Share

ನವದೆಹಲಿ, ಮೇ 16: ಟರ್ಕಿ ದೇಶಕ್ಕೆ ಸುಧಾರಿತ ಕ್ಷಿಪಣಿಗಳನ್ನು (advanced missiles) ನೀಡಲು ಅಮೆರಿಕ ಮುಂದಾಗಿದೆ. ಬ್ಲೂಮ್​​ಬರ್ಗ್ ವರದಿ ಪ್ರಕಾರ, 304 ಮಿಲಿಯನ್ ಡಾಲರ್ ಮೌಲ್ಯದ ಮಿಸೈಲ್​​ಗಳು ಹಾಗೂ ಸಂಬಂಧಿತ ಸಪೋರ್ಟ್ ಸಿಸ್ಟಂ ಅನ್ನು ಟರ್ಕಿಗೆ ಅಮೆರಿಕ ಮಾರಲು ಒಪ್ಪಿಕೊಂಡಿದೆ. ಅಮೆರಿಕದ ಎಐಎಂ 120ಸಿ-8 ಮತ್ತು ಬ್ಲಾಕ್-2 ಕ್ಷಿಪಣಿಗಳನ್ನು (Block- II missile) ಟರ್ಕಿ ಅಪೇಕ್ಷಿಸುತ್ತಿದೆ. ಇದಕ್ಕೆ ಸದ್ಯ ಅಮೆರಿಕ ಸರ್ಕಾರ ಒಪ್ಪಿಕೊಂಡಿದೆ. ಸಂಸತ್​​​ನಲ್ಲಿ ಅನುಮೋದನೆ ಸಿಕ್ಕ ಬಳಿಕ ಇವುಗಳನ್ನು ಟರ್ಕಿಗೆ ಪೂರೈಸುವ ಸಾಧ್ಯತೆ ಇದೆ.

ಎಐ-120ಸಿ-8 ಎಂಬುದು ಸುಧಾರಿತ ಮಧ್ಯಮ ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳನ್ನು (ಎಎಂಆರ್​​ಎಎಎಂ) ಟರ್ಕಿ ಬಯಸುತ್ತಿದೆ. ಇಂಥ 53 ಮಿಸೈಲ್​​ಗಳನ್ನು ನೀಡಬೇಕೆಂದು ಅಮೆರಿಕವನ್ನು ಟರ್ಕಿ ಕೋರಿಕೊಂಡಿತ್ತು. ಇವುಗಳ ಬೆಲೆ 225 ಮಿಲಿಯನ್ ಡಾಲರ್​​ನಷ್ಟಿದೆ. ಹಾಗೆಯೇ, 79.1 ಮಿಲಿಯನ್ ಡಾಲರ್ ಮೌಲ್ಯದ 60 ಬ್ಲಾಕ್-2 ಮಿಸೈಲ್​​ಗಳಿಗೂ ಮನವಿ ಮಾಡಿತ್ತು.

ಅಮೆರಿಕದ ಪ್ರಮುಖ ಡಿಫೆನ್ಸ್ ಕಂಪನಿಯಾದ ಆರ್​​ಟಿಎಕ್ಸ್ ಕಾರ್ಪೊರೇಶನ್ ಈ ಗುತ್ತಿಗೆ ಪಡೆಯಬಹುದು. ಈ ಮೇಲಿನ ಮಿಸೈಲ್​​ಗಳು ಮಾತ್ರವಲ್ಲ, ಅದಕ್ಕೆ ಪೂರಕವಾಗಿರುವ ಗೈಡೆನ್ಸ್ ಸಿಸ್ಟಮ್ಸ್, ಲಾಜಿಸ್ಟಿಕ್ಸ್, ಪ್ರೋಗ್ರಾಮ್ ಸಪೋರ್ಟ್, ಸ್ಪೇರ್ ಪಾರ್ಟ್ಸ್ ಇತ್ಯಾದಿಯನ್ನೂ ಟರ್ಕಿಗೆ ನೀಡಬೇಕಾಗುತ್ತದೆ. ತಾಂತ್ರಿಕ ಮತ್ತು ಎಂಜಿನಿಯರಿಂಗ್ ಸರ್ವಿಸ್​​ಗಳೂ ಕೂಡ ಈ ಡೀಲ್​​ನಲ್ಲಿ ಒಳಗೊಂಡಿರುತ್ತದೆ.

ಇದನ್ನೂ ಓದಿ
Image
ಚುನಾವಣೆಗೆ ಹಣವಿಲ್ಲವೆಂದ ಕಾಂಗ್ರೆಸ್​ ಟರ್ಕಿಯಲ್ಲಿ ಹೇಗೆ ಕಚೇರಿ ತೆರೀತು?
Image
ಟರ್ಕಿಗೆ ಶಾಕ್​: ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್‌ಗೆ ಭದ್ರತಾ ಅನುಮತಿ ರದ್ದು
Image
ಭಾರತದಲ್ಲಿ ಐಫೋನ್ ತಯಾರಿಸುವುದು ಬೇಡ: ಆ್ಯಪಲ್​​ಗೆ ಟ್ರಂಪ್ ಸೂಚನೆ
Image
ಟರ್ಕಿಯ ಕಡುವೈರಿ ರಾಷ್ಟ್ರಕ್ಕೆ ಭಾರತದಿಂದ ರುದ್ರಂ ಕ್ಷಿಪಣಿ?

ಇದನ್ನೂ ಓದಿ: ಭಾರತದಲ್ಲಿ ಐಫೋನ್ ತಯಾರಿಕೆಗೆ ಕಲ್ಲು ಹಾಕುತ್ತಿದ್ದಾರಾ ಟ್ರಂಪ್; ಭಾರತದಿಂದ ಹೊರಬರುವಂತೆ ಆ್ಯಪಲ್​​ಗೆ ತಿಳಿಸಿದ ಅಮೆರಿಕ ಅಧ್ಯಕ್ಷ

ನ್ಯಾಟೋ ಮೈತ್ರಿಗುಂಪಿನಲ್ಲಿ ಟರ್ಕಿ

ಅಮೆರಿಕ ನೇತೃತ್ವದ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ಅಥವಾ ನ್ಯಾಟೋ ಮೈತ್ರಿಗುಂಪಿನಲ್ಲಿ 32 ರಾಷ್ಟ್ರಗಳಿವೆ. ಇದರಲ್ಲಿ ಟರ್ಕಿಯೂ ಒಂದು. ಫ್ರಾನ್ಸ್, ಬ್ರಿಟನ್, ಜರ್ಮನಿ, ಇಟಲಿ ಇತ್ಯಾದಿ ಬಹುತೇಕ ಬಲಿಷ್ಠ ಐರೋಪ್ಯ ದೇಶಗಳು ನ್ಯಾಟೋದ ಸದಸ್ಯರಾಗಿವೆ. ಹೀಗಾಗಿ, ಅಮೆರಿಕದ ಯುದ್ಧೋಪಕರಣಗಳನ್ನು ಈ ದೇಶಗಳು ಯಥೇಚ್ಛವಾಗಿ ಖರೀದಿಸಲು ಅವಕಾಶ ಸಿಗುತ್ತದೆ. ಈ ನ್ಯಾಟೋ ಗುಂಪಿನಲ್ಲಿ ಅಮೆರಿಕ ಬಿಟ್ಟರೆ ಟರ್ಕಿಯದ್ದೇ ಅತಿದೊಡ್ಡ ಸೇನೆ.

2019ರಲ್ಲಿ ಟರ್ಕಿಯನ್ನು ನಿರ್ಬಂಧಿಸಿದ್ದ ಅಮೆರಿಕದ ನಿಲುವು ಈಗ ಬದಲು

ಭಾರತದಂತೆ ಟರ್ಕಿ ಕೂಡ 2019ರಲ್ಲಿ ರಷ್ಯಾ ನಿರ್ಮಿತ ಎಸ್-400 ಏರ್ ಡಿಫೆನ್ಸ್ ಸಿಸ್ಟಂ ಅನ್ನು ಖರೀದಿಸಿತ್ತು. ಆದರೆ, ಭಾರತಕ್ಕೆ ಸಿಕ್ಕಂತೆ ಟರ್ಕಿಗೆ ಅಮೆರಿಕದಿಂದ ವಿನಾಯಿತಿ ಸಿಗಲಿಲ್ಲ. ಟರ್ಕಿಯ ಮೇಲೆ ಅಮೆರಿಕ ಕೆಲ ನಿರ್ಬಂಧಗಳನ್ನು ಹೇರಿತ್ತು. ಅಮೆರಿಕ ಅಭಿವೃದ್ಧಪಡಿಸುತ್ತಿದ್ದ ಎಫ್-35 ಫೈಟರ್ ಜೆಟ್ ಪ್ರೋಗ್ರಾಮ್​​ನಿಂದ ಟರ್ಕಿಯನ್ನು ಹೊರಹಾಕಿತು.

ಇದನ್ನೂ ಓದಿ: ಭಾರತದೊಂದಿಗೆ ‘ಶಾಂತಿ ಮಾತುಕತೆ’ಗೆ ಸಿದ್ಧ ಎಂದ ಪಾಕ್ ಪ್ರಧಾನಿ ಶೆಹಬಾಜ್

ಆದರೆ, ಈಗ ಕಾಲ ಬದಲಾಗಿದೆ. ಜಾಗತಿಕ ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಟರ್ಕಿ ಜೊತೆ ಅಮೆರಿಕದ ಸ್ನೇಹ ಹೆಚ್ಚುತ್ತಿದೆ. ಸಿರಿಯಾದಲ್ಲಿ ಹೊಸ ನಾಯಕತ್ವವನ್ನು ಅಮೆರಿಕ ಕೂರಿಸಿದೆ. ಹಿಂದಿನ ರಷ್ಯಾ ಬೆಂಬಲಿತದ ಆಡಳಿತದ ವಿರುದ್ಧ ಕಠೋರವಾಗಿ ಯುದ್ಧ ಮಾಡಿದ್ದ ಕುರ್ಡಿಶ್ ಹೋರಾಟಗಾರರನ್ನು (Kurdish fighters) ಶಾಂತಗೊಳಿಸಿ, ಹೊಸ ಆಡಳಿತಕ್ಕೆ ಹೊಂದಾಣಿಕೆಯಾಗುವಂತೆ ಮಾಡಲು ಟರ್ಕಿ ಪಾತ್ರ ಇದೆ. ತನ್ನ ಸಾವಿರಾರು ಸೈನಿಕರನ್ನು ಸಿರಿಯಾದಲ್ಲಿ ಇರಿಸಿ, ಆಡಳಿತ ವ್ಯವಸ್ಥೆ ಮತ್ತು ಸುರಕ್ಷತೆ ಪಾಲಿಸುವುದಾಗಿ ಟರ್ಕಿ ಹೇಳಿದೆ. ಇದರಿಂದ ಅಮೆರಿಕಕ್ಕೆ ಒಂದು ತಲೆನೋವು ಕಡಿಮೆ ಆಗಬಹುದು. ಈ ಕಾರಣಕ್ಕೆ ಟರ್ಕಿಯೊಂದಿಗೆ ಅಮೆರಿಕ ಸಂಬಂಧ ಹೆಚ್ಚಿಸಿಕೊಳ್ಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ