AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment tips: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು

How to invest smartly in the market: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲ ಎನ್ನುವ ಗಾದೆ ಮಾತನ್ನು ಹೊಸದಾಗಿ ಸೇರಿಸಬಹುದು. ಬುರ್ಟನ್ ಮಾಲ್ಕಿಯೆಲ್ ಅವರ ‘ಎ ರಾಂಡಂ ವಾಕ್ ಡೌನ್ ವಾಲ್ ಸ್ಟ್ರೀಟ್’ ಪುಸ್ತಕದಲ್ಲಿ ಕೆಲ ವಾಸ್ತವ ಹೂಡಿಕೆ ತಂತ್ರಗಳನ್ನು ತಿಳಿಸಲಾಗಿದೆ. ಎಷ್ಟೇ ಪರಿಣಿತಿಯಿಂದ ಷೇರುಗಳನ್ನು ಆಯ್ದುಕೊಂಡರೂ ಒಟ್ಟಾರೆ ಮಾರುಕಟ್ಟೆ ನೀಡುವುದಕ್ಕಿಂತ ಹೆಚ್ಚಿನ ರಿಟರ್ನ್ ಪಡೆಯುವುದು ಕಷ್ಟ ಎನ್ನುತ್ತಾರೆ ಬುರ್ಟನ್.

Investment tips: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ...! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2025 | 11:52 AM

Share

ಬಹಳ ಜನಪ್ರಿಯ ಹೂಡಿಕೆ ಸ್ಥಳಗಳಲ್ಲಿ ಷೇರು ಮಾರುಕಟ್ಟೆಯೂ (stock market) ಒಂದು. ಹೇಗೆ ಹೂಡಿಕೆ ಮಾಡಬೇಕು, ಷೇರುಗಳ ಆಯ್ಕೆಗೆ ಯಾವ ಮಾನದಂಡ ಬಳಸಬೇಕು ಇತ್ಯಾದಿ ಸಲಹೆಗಳನ್ನು ಇಂಟರ್ನೆಟ್​​​ನಲ್ಲಿ ಪಡೆಯಬಹುದು. ಬೆಂಜಮಿನ್ ಗ್ರಹಾಂ ಅವರ ‘ಇಂಟೆಲಿಜೆಂಟ್ ಇನ್ವೆಸ್ಟರ್’, ಮಾರ್ಗನ್ ಹೌಸೆಲ್ ಅವರ ‘ದಿ ಸೈಕಾಲಜಿ ಆಫ್ ಮನಿ’, ರಾಬರ್ಟ್ ಕಿಯಾಸಕಿ ಅವರ ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಇತ್ಯಾದಿ ಹಲವಾರು ಮಹತ್ವದ ಪುಸ್ತಕಗಳಿವೆ. ಇಂಟೆಲಿಜೆಂಟ್ ಇನ್ವೆಸ್ಟರ್​​​ನಲ್ಲಿ ಬೆಂಜಮಿನ್ ಗ್ರಹಾಂ ಅವರು ಒಂದು ಬ್ಯುಸಿನೆಸ್ ಸಂಸ್ಥೆಯ ಮೌಲ್ಯಮಾಪನ ಹೇಗೆ ಮಾಡುವುದು ಎಂದು ವಿವರಿಸುತ್ತಾರೆ. ಆದರೆ, ಬುರ್ಟನ್ ಮಾಲ್ಕಿಯೆಲ್ ಅವರು ಬರೆದ ‘ಎ ರಾಂಡಂ ವಾಕ್ ಡೌನ್ ವಾಲ್ ಸ್ಟ್ರೀಟ್’ ಪುಸ್ತಕದಲ್ಲಿ ಇದಕ್ಕೆ ವಿರುದ್ಧವಾದ ಥಿಯರಿ ಇದೆ. 1973ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಸರಳವಾಗಿ ಮತ್ತು ಗೊಂದಲರಹಿತವಾಗಿ ಹೇಗೆ ಹೂಡಿಕೆ ಮಾಡಬಹುದು ಎಂಬುದನ್ನು ತಿಳಿಸುತ್ತದೆ. ಅದರ ಮುಖ್ಯ ಅಂಶಗಳು ಇಲ್ಲಿವೆ…

ಮಾರುಕಟ್ಟೆಗಳನ್ನು ನಂಬಿರಿ…

ತಜ್ಞರು ಅಧ್ಯಯನ ನಡೆಸಿ ರೂಪಿಸಿದ ಪೋರ್ಟ್​​ಫೋಲಿಯೋ ಎಷ್ಟು ರಿಟರ್ನ್ ನೀಡುತ್ತದೋ, ನೀವು ಕಣ್ಮುಚ್ಚಿ ಯಾವುದೇ ಷೇರುಗಳನ್ನು ಆಯ್ದುಕೊಂಡು ಮಾಡುವ ಪೋರ್ಟ್​​ಫೋಲಿಯೋ ಕೂಡ ಅಷ್ಟೇ ರಿಟರ್ನ್ ನೀಡುತ್ತದೆ. ಜಾಗ್ರತೆಯಿಂದ ಷೇರುಗಳನ್ನು ಆಯ್ದುಕೊಳ್ಳುವುದು, ಸಮಯ ನೋಡಿ ಷೇರು ಆಯ್ದುಕೊಳ್ಳುವುದು ಇತ್ಯಾದಿ ಮಾಡುವುದರಿಂದ ಮಾರುಕಟ್ಟೆಗಿಂತ ಉತ್ತಮ ರಿಟರ್ನ್ ಪಡೆಯುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ: ಸದಸ್ಯರ ಸಂಖ್ಯೆ 7.65 ಲಕ್ಷಕ್ಕೆ ಏರಿಕೆ; ಯಾರಿಗೆ ಲಾಭ ಈ ಪಿಂಚಣಿ? ಇಲ್ಲಿದೆ ಮಾಹಿತಿ

ಇದನ್ನೂ ಓದಿ
Image
ಎಪಿವೈ ಪೆನ್ಷನ್ ಸ್ಕೀಮ್; ಅರ್ಹತೆ, ವಯಸ್ಸು ಇತ್ಯಾದಿ ಮಾಹಿತಿ
Image
ಪರ್ಸನಲ್ ಲೋನ್; ಕಣ್ಣಿಗೆ ಕಾಣದ ಶುಲ್ಕಗಳಿವು..
Image
ನೀವೆಷ್ಟು ಅನುಕೂಲಸ್ಥರು? ಇಗೋ ನೋಡಿ 4 ಪರ್ಸೆಂಟ್ ಸೂತ್ರ
Image
ಸಾಲ ಉಪಯೋಗಿಸಿ ಶ್ರೀಮಂತರಾಗೋದು ಹೇಗೆ?

ಷೇರು ಹೂಡಿಕೆ ಸಮಯ ನಿರ್ಧರಿಸುವುದು ನಿರರ್ಥಕ

ಷೇರುಬೆಲೆ ಇಳಿಕೆ ಆದ ಬಳಿಕ ಆ ಷೇರಿಗೆ ಹೂಡಿಕೆ ಮಾಡುತ್ತೇನೆಂದು ಭಾವಿಸಿದ್ದರೆ ಅದನ್ನು ಬದಲಾಯಿಸಿಕೊಳ್ಳಿ. ಮಾರ್ಕೆಟ್ ಟೈಮಿಂಗ್ ಮಾಡುವುದು ನಿರರ್ಥಕ ಎನ್ನುತ್ತದೆ ಬುರ್ಟ್ ಮಾಲ್ಕಿಯೆಲ್ ಅವರ ಪುಸ್ತಕ. ಮಾರ್ಕೆಟ್ ಕರೆಕ್ಷನ್ ಇತ್ಯಾದಿಗೆ ತಲೆಕೆಡಿಸಿಕೊಳ್ಳುವ ಬದಲು ಹೂಡಿಕೆದಾರರು ಒಟ್ಟಾರೆ ಮಾರುಕಟ್ಟೆಯನ್ನು ಸ್ಥೂಲ ದೃಷ್ಟಿಯಿಂದಷ್ಟೇ ಗಮನಿಸಬೇಕು.

ಹೂಡಿಕೆ ವೈವಿಧ್ಯವಾಗಿರಬೇಕು…

ಎಲ್ಲಾ ಸೆಕ್ಟರ್​​ಗಳು ಹಾಗೂ ಭೌಗೋಳಿಕ ಭಾಗಗಳಲ್ಲಿ ಹೂಡಿಕೆಗಳು ಹರಡಿರಬೇಕು. ಇದರಿಂದ ರಿಸ್ಕ್ ಬಹಳ ಕಡಿಮೆ ಆಗುತ್ತದೆ. ಸರಾಸರಿಯಾಗಿ ಉತ್ತಮ ರಿಟರ್ನ್ ಪಡೆಯಬಹುದು. ಉದಾಹರಣೆಗೆ, ಇಂಡೆಕ್ಸ್ ಫಂಡ್, ಲಾರ್ಜ್ ಕ್ಯಾಪ್ ಸ್ಟಾಕ್, ಮಿಡಲ್ ಕ್ಯಾಪ್, ಸ್ಮಾಲ್ ಕ್ಯಾಪ್ ಷೇರುಗಳು, ಡೆಟ್ ಫಂಡ್​ಗಳು, ಚಿನ್ನ ಇತ್ಯಾದಿಯಲ್ಲಿ ಹೂಡಿಕೆ ಮಾಡಬಹುದು. ಅಂತಾರಾಷ್ಟ್ರೀಯ ಹೂಡಿಕೆದಾರರು ಅಮೆರಿಕದ ಮಾರುಕಟ್ಟೆ, ಚೀನಾ ಮಾರುಕಟ್ಟೆ, ಭಾರತದ ಮಾರುಕಟ್ಟೆ, ಯೂರೋಪ್ ಮಾರುಕಟ್ಟೆ ಹೀಗೆ ಬೇರೆ ಬೇರೆ ಕಡೆ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ

ಇಂಡೆಕ್ಸ್ ಫಂಡ್​​ಗಳು ಹೆಚ್ಚು ಲಾಭದಾಯಕ

ಆ್ಯಕ್ಟಿವ್ ಆಗಿ ನಿರ್ವಹಿಸಲಾಗುವ ಫಂಡ್​​ಗಳಿಗಿಂತ ಇಂಡೆಕ್ಸ್ ಫಂಡ್​​ಗಳು ಹೆಚ್ಚು ಪರಿಣಾಮಕಾರಿ ಎನಿಸುತ್ತವೆ. ಹೆಚ್ಚು ರಿಟರ್ನ್ ಕೊಡಬಹುದು. ಜೊತೆಗೆ, ನಿರ್ವಹಣಾ ವೆಚ್ಚವೂ ಕಡಿಮೆ ಇರುತ್ತದೆ.

ಮಾರುಕಟ್ಟೆಯ ಅಬ್ಬರ ಪ್ರಚಾರಕ್ಕೆ ಮರುಳಾಗದಿರಿ…

ಕೆಲ ಸ್ಟಾಕುಗಳು ಸಿಕ್ಕಾಪಟ್ಟೆ ಜನಪ್ರಿಯವಾಗಿರುತ್ತವೆ. ಅಂಥವುಗಳ ಹಿಂದೆ ಜನರು ಮುಗಿಬಿದ್ದು ಹೋಗಬಹುದು. ಕ್ರಿಪ್ಟೋದಂತಹ ಹೊಸ ಆಸ್ತಿಗಳೂ ಕ್ರೇಜ್ ಹುಟ್ಟಿಸಬಹುದು. ತಾವು ಅಲ್ಲಿ ಹೂಡಿಕೆ ಮಾಡದಿದ್ದರೆ ಏನೋ ಕಳೆದುಹೋದಂತೆ ಅನಿಸಬಹುದು. ಆದರೆ, ಅದೆಲ್ಲಾ ಬಬ್ಬಲ್. ಅಂಥವಕ್ಕೆ ತಲೆ ಕೆಡಿಸಿಕೊಳ್ಳಬಾರದು ಎನ್ನುತ್ತಾರೆ ಮಾಲ್ಕಿಯೆಲ್.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ