Kill Switch: ಪಾಶ್ಚಿಮಾತ್ಯ ದೇಶಗಳನ್ನು ರಿಮೋಟ್ ಕಂಟ್ರೋಲ್ನಿಂದ ಅಲುಗಾಡಿಸಲಿದೆಯಾ ಚೀನಾ? ಇಲ್ಲಿದೆ ಸೋಲಾರ್ ಕಿಲ್ ಸ್ವಿಚ್ ತಂತ್ರ
USA vs China: ಅಮೆರಿಕಕ್ಕೆ ಚೀನಾ ಕಂಪನಿಗಳು ಸರಬರಾಜು ಮಾಡಿರುವ ಸೋಲಾರ್ ಇನ್ವರ್ಟರ್ಗಳಲ್ಲಿ ರಹಸ್ಯ ಕಿಲ್ ಸ್ವಿಚ್ ಸಾಧನಗಳು ಪತ್ತೆಯಾಗಿವೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ದೂರದಿಂದಲೇ ಈ ಕಿಲ್ ಸ್ವಿಚ್ಗಳನ್ನು ಬಳಸಿ ಸೌರ ವಿದ್ಯುತ್ ಸಂಪರ್ಕವನ್ನೇ ನಿಲ್ಲಿಸಬಹುದು. ಕಳೆದ 9 ತಿಂಗಳಲ್ಲಿ ಚೀನೀ ನಿರ್ಮಿತ ಬ್ಯಾಟರಿಗಳಲ್ಲೂ ಅನಧಿಕ ಸಂವಹನ ಸಾಧನಗಳು ಪತ್ತೆಯಾಗಿವೆಯಂತೆ.

ನವದೆಹಲಿ, ಮೇ 18: ಚೀನಾ ತಂತ್ರಜ್ಞಾನದಲ್ಲಿ ಅಮೆರಿಕಕ್ಕಿಂತ ಬಹಳ ಮುಂದಿದೆ ಎಂದು ಹೇಳುವವರು ಇದ್ದಾರೆ. ಬ್ರಿಟನ್ ಮೂಲದ ಡೈಲಿಮೇಲ್ ಪತ್ರಿಕೆಯಲ್ಲಿ ಬಂದ ವರದಿಯಲ್ಲಿರುವುದು ನಿಜವೇ ಆದಲ್ಲಿ ಚೀನಾ (China) ದೇಶವು ಪಾಶ್ಚಿಮಾತ್ಯ ದೇಶಗಳನ್ನು ರಿಮೋಟ್ನಿಂದಲೇ ಆಟವಾಡಿಸುವ ಅವಕಾಶ ಹೊಂದಿರಬಹುದು. ಈ ವರದಿ ಪ್ರಕಾರ, ಅಮೆರಿಕದ ಸೋಲಾರ್ ಫಾರ್ಮ್ಗಳಲ್ಲಿನ ಸೌರ ಫಲಕಗಳಲ್ಲಿ ರಹಸ್ಯ ಕಿಲ್ ಸ್ವಿಚ್ಗಳು ಕಂಡುಬಂದಿವೆಯಂತೆ. ಈ ಸೌರಫಲಕಗಳು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ಚೀನಾ ಈಗ ಇಡೀ ಪಾಶ್ಚಿಮಾತ್ಯ ದೇಶಗಳ ಪವರ್ ಕಟ್ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ.
ಚೀನಾದಿಂದ ಆಮದು ಮಾಡಿಕೊಳ್ಳಲಾದ ಸೋಲಾರ್ ಪವರ್ ಇನ್ವರ್ಟರ್ಗಳಲ್ಲಿ ಅನಧಿಕೃತ ಸಂವಹನ ಸಾಧನಗಳು ಪತ್ತೆಯಾಗಿವೆ. ಇನ್ವರ್ಟರ್ನ ಪ್ರಾಡಕ್ಟ್ ಡಾಕ್ಯುಮೆಂಟೇಶನ್ನಲ್ಲಿ ಈ ಸಾಧನದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಹೀಗಾಗಿ, ಅಮೆರಿಕದ ತಜ್ಞರು ಈ ಇನ್ವರ್ಟರ್ ಬಗ್ಗೆ ಸಂದೇಹ ಪಟ್ಟಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಗಡಿಯಲ್ಲಿ ಭಾರತದ್ದು ಉಕ್ಕಿನ ಕೋಟೆ; ಚೀನಾ, ಬಾಂಗ್ಲಾ ಗಡಿಯಲ್ಲಿ ಅಕ್ಷರಶಃ ಅಭೇದ್ಯ ಕೋಟೆ
ಸೌರಶಕ್ತಿ ಉತ್ಪಾದನಾ ವ್ಯವಸ್ಥೆಯಲ್ಲಿ ಪವರ್ ಇನ್ವರ್ಟರ್ಗಳು ಅತ್ಯವಶ್ಯಕ. ಅದಿಲ್ಲದೇ ಸೌರಶಕ್ತಿ ಬಳಕೆ ಅಸಾಧ್ಯ. ಈ ಇನ್ವರ್ಟರ್ಗಳು ಸೌರಶಕ್ತಿಯನ್ನು ಪವರ್ ಗ್ರಿಡ್ಗೆ ಕನೆಕ್ಟ್ ಮಾಡುತ್ತವೆ.
ಈ ಇನ್ವರ್ಟ್ಗಳನ್ನು ದೂರದಿಂದಲೇ ನಿಯಂತ್ರಿಸಬಹುದು. ಇದರ ಮೈಂಟೆನೆನ್ಸ್ ಮತ್ತು ಅಪ್ಡೇಟ್ ಮಾಡಲಾಗುವಂತೆ ಅವುಗಳನ್ನು ನಿರ್ಮಿಸಲಾಗಿದೆ. ಈ ಇನ್ವರ್ಟರ್ಗಳಲ್ಲಿ ಬಳಸಲಾಗಿರುವ ಸಾಧನಗಳನ್ನೂ ಕೂಡ ದೂರದಿಂದಲೇ ನಿಯಂತ್ರಿಸಬಹುದಾಗಿದೆ. ಇವುಗಲ ಸೆಟ್ಟಿಂಗ್ ಬದಲಾಯಿಸಿದರೂ ಸಾಕು ಪವರ್ ಗ್ರಿಡ್ ಅನ್ನು ನಿಷ್ಕ್ರಿಯಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ರಾಯ್ಟರ್ಸ್ ಸುದ್ದಿಸಂಸ್ಥೆಯು ಈ ವರದಿಯನ್ನು ಬರೆದಿದೆ. ಅಮೆರಿಕದ ಎಷ್ಟು ಸೋಲಾರ್ ಫಾರ್ಮ್ಗಳಲ್ಲಿ ಎಷ್ಟು ಕಿಲ್ ಸ್ವಿಚ್ಗಳು ಸಿಕ್ಕಿವೆ ಎನ್ನುವ ಮಾಹಿತಿ ಗೊತ್ತಿಲ್ಲ. ಚೀನಾ ದೇಶವು ಅಮೆರಿಕಕ್ಕೆ ಮಾತ್ರವಲ್ಲ, ಬ್ರಿಟನ್ ಸೇರಿದಂತೆ ಹಲವು ಐರೋಪ್ಯ ದೇಶಗಳಿಗೂ ಸೋಲಾರ್ ಇನ್ವರ್ಟರ್ಗಳನ್ನು ಕೊಟ್ಟಿದೆ. ಅಲ್ಲಿ ಈ ಕಿಲ್ ಸ್ವಿಚ್ ಪತ್ತೆಯಾಗಿರುವ ಬಗ್ಗೆ ವರದಿ ಬಂದಿಲ್ಲ.
ಇದನ್ನೂ ಓದಿ: ಭಾರತದ ಶಕ್ತಿಗೆ ಬೆಚ್ಚಿದವಾ ಜಾಗತಿಕ ಶಕ್ತಿಗಳು? ಉರಿದುಬೀಳುತ್ತಿವೆಯಾ ಚೀನಾ, ಅಮೆರಿಕ?
ಇತರ ಚೀನೀ ಉಪಕರಣಗಳಲ್ಲೂ ಅನಧಿಕೃತ ಸಾಧನಗಳು ಪತ್ತೆ?
ಚೀನೀ ಕಂಪನಿಗಳು ಸರಬರಾಜು ಮಾಡಿದ ಬ್ಯಾಟರಿಗಳಲ್ಲಿ ಸೆಲ್ಯೂಲಾರ್ ರೇಡಿಯೋಗಳಂತಹ ಸಂವಹನ ಸಾಧನಗಳು ಕಳೆದ 9 ತಿಂಗಳಲ್ಲಿ ಪತ್ತೆಯಾಗಿವೆ ಎಂದು ಮೂಲವೊಂದನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇವೆಲ್ಲಾ ಬೆಳವಣಿಗೆಗಳು ಮುಂಬರುವ ಜಾಗತಿಕ ಘರ್ಷಣೆಗೆ ಮುನ್ಸೂಚನೆಯಂತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ