AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಬಿಸಿ ಪಾಸ್ತಾ ತಿನ್ನುವ ಬದಲು, ತಣ್ಣಗಾಗಿಸಿ ತಿಂದರೆ ಹಲವು ಪ್ರಯೋಜನ, ಇಲ್ಲಿದೆ ನೋಡಿ

ಪಾಸ್ತಾದ ಬಗ್ಗೆ ಕೆಲವರಿಗೆ ತಪ್ಪು ಭಾವನೆ ಇದೆ. ಆದರೆ ಪಾಸ್ತಾವನ್ನು ಬಿಸಿ ಬದಲು ತಣ್ಣಗಾಗಿಸಿ ತಿಂದರೆ ಹಲವು ಪ್ರಯೋಜನಗಳು ಇದೆ. ಅದಕ್ಕಾಗಿ ಪಾಸ್ತಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡದಂತೆ ಇದನ್ನು ಸೇವನೆ ಮಾಡಿದ್ರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಪಾಸ್ತಾ ಒಂದು ಕಾರ್ಬೋಹೈಡ್ರೇಟ್-ಭರಿತ ಆಹಾರ, ಇದನ್ನು ಹಿಟ್ಟು, ಬೆಣ್ಣೆ ಮತ್ತು ಚೀಸ್‌ನಿಂದ ತಯಾರಿಸಲಾಗುತ್ತದೆ. ತೂಕ ಕಳೆದುಕೊಳ್ಳುವವರಿಗೆ ಹಾಗೂ ಮಧುಮೇಹಿಗಳಿಗೆ ಇದು ನಿಷೇಧ. ಆದರೆ ಉಳಿದವರು ಇದನ್ನು ಹೇಗೆ ತಿನ್ನಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಬಿಸಿಬಿಸಿ ಪಾಸ್ತಾ ತಿನ್ನುವ ಬದಲು, ತಣ್ಣಗಾಗಿಸಿ ತಿಂದರೆ ಹಲವು ಪ್ರಯೋಜನ, ಇಲ್ಲಿದೆ ನೋಡಿ
ಪಾಸ್ತಾ Image Credit source: pinterest
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 19, 2025 | 4:00 PM

Share

ಕೆಲವೊಂದು ಆಹಾರಗಳು ದೇಹದ ಮೇಲೆ ಕಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ಇದರ ಬಗ್ಗೆ ನಮಗೆ ಅರಿವು ಇರುವುದಿಲ್ಲ. ಪ್ರತಿದಿನ ಬೆಳಗ್ಗಿನ ತಿಂಡಿಯಿಂದ ಹಿಡಿದು, ರಾತ್ರಿ ಊಟದವರೆಗೂ ಎಲ್ಲವನ್ನು ಎಚ್ಚರಿಕೆಯಿಂದ ಸೇವನೆ ಮಾಡಬೇಕು. ಈ ಬೆಂಗಳೂರಿನಂತಹ ನಗರಗಳಲ್ಲಿ ಬೆಳಗ್ಗಿನ ತಿಂಡಿಗೆ ಪಾಸ್ತಾ ಸೇವನೆ ಮಾಡುವುದು ಸಹಜ, ಏಕೆಂದರೆ ಬೆಳಗ್ಗೆ ಕೆಲಸಕ್ಕೆ ಹೋಗುವ ಒತ್ತಡ, ಮಕ್ಕಳನ್ನು ಬೇಗ ಸ್ಕೂಲ್​​​ಗೆ ಕಳುಹಿಸಬೇಕು, ಹೀಗೆಲ್ಲ ಒತ್ತಡಗಳನ್ನು ಇರುತ್ತದೆ. ಜತೆಗೆ ಇದು ತಕ್ಷಣದಲ್ಲಾಗುವ ತಿಂಡಿ ಕೂಡ ಹೌದು. ಪಾಸ್ತಾ (pasta) ಒಂದು ಕಾರ್ಬೋಹೈಡ್ರೇಟ್-ಭರಿತ (Carbohydrate-rich) ಆಹಾರ, ಇದನ್ನು ಹಿಟ್ಟು, ಬೆಣ್ಣೆ ಮತ್ತು ಚೀಸ್‌ನಿಂದ ತಯಾರಿಸಲಾಗುತ್ತದೆ. ತೂಕ ಕಳೆದುಕೊಳ್ಳುವವರಿಗೆ ಹಾಗೂ ಮಧುಮೇಹಿಗಳಿಗೆ ಇದು ನಿಷೇಧ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಭಿನ್ನವಾದ ರೆಸಿಪಿಗಳನ್ನು ನೀಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹೇಗೆ ಶಕ್ತಿಯನ್ನು ನೀಡುತ್ತದೆ. ಇದು ಆರೋಗ್ಯಕ್ಕೆ ಹೇಗೆ ಪರಿಣಾಮಕಾರಿ, ಪಾಸ್ತಾವನ್ನು ಬಿಸಿ ತಿನ್ನುವ ಬದಲು, ತಣ್ಣಗಾಗಿಸಿ ತಿಂದರೆ ಪ್ರಯೋಜನ ಏನು? ಎಂಬುದನ್ನು ತಜ್ಞರು ಇಂಡಿಯಾನ್ ಎಕ್ಸ್​​​ಪ್ರಸ್​​​​​ಗೆ ಮಾಹಿತಿ ನೀಡಿದ್ದಾರೆ.

ಪಾಸ್ತಾದಲ್ಲಿರುವ ಗ್ಲೈಸೆಮಿಕ್ ಮಧುಮೇಹ ಮತ್ತು ತೂಕ ಹೆಚ್ಚಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ಅದನ್ನು ಬೇಯಿಸಿ ತಣ್ಣಗಾದ ನಂತರ ರೆಫ್ರಿಜರೇಟರ್‌ನಲ್ಲಿಟ್ಟರೆ ಅದು ನಿರೋಧಕ ಪಿಷ್ಟವನ್ನು ನೀಡುತ್ತದೆ. ಪಾಸ್ಟಾವನ್ನು ಕನಿಷ್ಠ 7-8 ಗಂಟೆಗಳ ಕಾಲ ಬೇಯಿಸಿ ತಣ್ಣಗಾಗಿಸುವುದರಿಂದ ಅದು ಹೆಚ್ಚು ಆರೋಗ್ಯಕರ ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಮುಂಬೈ ಮೂಲದ ಪೌಷ್ಟಿಕತಜ್ಞೆ ದೀಪ್ಸಿಖಾ ಜೈನ್ ಹೇಳುವ ಪ್ರಕಾರ, ಪಾಸ್ಟಾವನ್ನು ಕನಿಷ್ಠ 7-8 ಗಂಟೆಗಳ ಕಾಲ ಬೇಯಿಸಿ ತಣ್ಣಗಾಗಿಸಿ ಸೇವನೆ ಮಾಡುವುದರಿಂದ, ಅದರಲ್ಲಿ ಉಂಟಾಗುವ ನಿರೋಧಕ ಪಿಷ್ಟವು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಖಾದ್ಯದ ಒಟ್ಟಾರೆ ಕ್ಯಾಲೋರಿ ಸಂಖ್ಯೆಯನ್ನು 30-50% ರಷ್ಟು ಕಡಿಮೆ ಮಾಡುತ್ತದೆ. ಜತೆಗೆ ಫೈಬರ್ ಅಂಶವನ್ನು ಹೆಚ್ಚಿಸುತ್ತದೆ, ಇದು ಮಧುಮೇಹದಿಂದ ಬಳಲುತ್ತಿರುವ ಮತ್ತು ತೂಕ ಇಳಿಸಿಕೊಳ್ಳಲು ಉತ್ತಮ ಎಂದು ಹೇಳಿದ್ದಾರೆ.

ನಿರೋಧಕ ಪಿಷ್ಟ ಹೇಗೆ ಕೆಲಸ ಮಾಡುತ್ತದೆ?

ಇದು ಸಣ್ಣ ಕರುಳಿನಲ್ಲಿ ಪಿಷ್ಟವು ಸಕ್ಕರೆಯಾಗಿ ವಿಭಜನೆಯಾಗುವುದನ್ನು ತಪ್ಪಿಸುತ್ತದೆ. ಇದು ನೇರವಾಗಿ ದೊಡ್ಡ ಕರುಳಿಗೆ ಚಲಿಸುತ್ತದೆ. ಇದು ಸಣ್ಣ-ಸರಪಳಿ ಕೊಬ್ಬಿನಾಮ್ಲಗಳನ್ನು (SCFA) ಉತ್ಪಾದಿಸಲು ಕರುಳಿನ ಉತ್ತಮ ಬ್ಯಾಕ್ಟೀರಿಯಾ ಹೆಚ್ಚು ಉತ್ತೇಜನವನ್ನು ನೀಡುತ್ತದೆ. ಇದು ಕರುಳಿನ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಇದರ ಜತೆಗೆ ಉರಿಯೂತವನ್ನು ಕಡಿಮೆ ಮಾಡಲು ಸಹಾಯವನ್ನು ಮಾಡುತ್ತದೆ.

ಇದನ್ನೂ ಓದಿ
Image
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
Image
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
Image
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
Image
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ಇದನ್ನೂ ಓದಿ: ಮನೆಯಲ್ಲೇ ಥಟ್ಟಂತ ಮಾಡಿ ರುಚಿಕರವಾದ ದ್ರಾಕ್ಷಿ ಉಪ್ಪಿನಕಾಯಿ; ಸಿಂಪಲ್‌ ರೆಸಿಪಿ ಇಲ್ಲಿದೆ

ಆರೋಗ್ಯ ಪ್ರಯೋಜನಗಳೇನು?

ನಿರೋಧಕ ಪಿಷ್ಟವು ಕಡಿಮೆ ಗ್ಲೈಸೆಮಿಕ್ ಸಾಂದ್ರತೆಯನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗಲು ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಸಹಾಯ ಮಾಡುತ್ತದೆ. ಊಟದ ನಂತರ ರಕ್ತದಲ್ಲಿ ಉಂಟಾಗುವ ಗ್ಲೂಕೋಸ್ ಮಟ್ಟದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದು ಹಾಗೂ ಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಜತೆಗೆ ಇದು ಬೊಜ್ಜು, ಮೆಟಾಬಾಲಿಕ್ ಸಿಂಡ್ರೋಮ್, ಕರುಳಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ವಿ ಹೆಲ್ತ್ ಬೈ ಅಟ್ನಾ ನ ಹಿರಿಯ ಆಹಾರ ತಜ್ಞ ಡಾ. ವಿಧಿ ಧಿಂಗ್ರಾ ಅವರು ಇಂಡಿಯಾನ್ ಎಕ್ಸ್​ಪ್ರಸ್ಸ್ ನೊಂದಿಗೆ ಮಾತನಾಡಿದ ಅವರು, ಪಾಸ್ತಾವನ್ನು ತಣ್ಣಗಾಗಿಸಿ ತಿನ್ನುವುದರಿಂದ ನಿರೋಧಕ ಪಿಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಗ್ಲೈಸೆಮಿಕ್ ಸೂಚಿಯನ್ನು ಕಡಿಮೆ ಮಾಡಬಹುದು ಹಾಗೂ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಬಹುದು. 8-10 ಗಂಟೆಗಳ ಕಾಲ ಬೇಯಿಸಿ ತಣ್ಣಗಾಗಿಸುವುದು ನಿಜಕ್ಕೂ ನಿಮಗೆ ಸಹಾಯ ಮಾಡುತ್ತದೆ. ನಿಜಕ್ಕೂ ನಿಮಗೆ ಸಹಾಯ ಮಾಡುತ್ತದೆ. ಹೊಸದಾಗಿ ಬೇಯಿಸಿದ ಪಾಸ್ತಾಕ್ಕಿಂತ ಎರಡು ಪಟ್ಟು ಹೆಚ್ಚು ನಿರೋಧಕ ಪಿಷ್ಟವನ್ನು ತಂಪಾಗಿಸಿದ ಪಾಸ್ತಾ ಹೊಂದಿದೆ. ಪ್ರತಿರೋಧಕ ಪಿಷ್ಟವು ಕರುಳಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಉತ್ತಮ ಬ್ಯಾಕ್ಟೀರಿಯಾದ ಹೆಚ್ಚಳ ಮಾಡುತ್ತದೆ. ಇದು ಇನ್ಸುಲಿನ್‌ಗೆ ಪ್ರತಿಕ್ರಿಯಿಸುವ ದೇಹದ ಸಾಮರ್ಥ್ಯವನ್ನು ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ