AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prostate Cancer: ಪುರುಷರಲ್ಲಿ ಹೆಚ್ಚಾಗುತ್ತಿದೆ ಪ್ರಾಸ್ಟೇಟ್ ಕ್ಯಾನ್ಸರ್, ಏನಿದರ ಲಕ್ಷಣಗಳು? ತಡೆಯುವುದು ಹೇಗೆ?

ಇತ್ತೀಚೆಗಿನ ದಿನಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕ್ಯಾನ್ಸರ್ ಒಮ್ಮೆ ದೇಹವನ್ನು ಒಕ್ಕರಿಸಿ ಬಿಟ್ಟರೆ ಸಾಕು, ಗುದನಾಳದ ಹತ್ತಿರದ ಅಂಗಗಳಿಗೆ ಸೇರಿದಂತೆ ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೌದು, ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಹಾಗಾದ್ರೆ ಈ ಪ್ರಾಸ್ಟೇಟ್ ಕ್ಯಾನ್ಸರ್ ಎಂದರೇನು? ಕ್ಯಾನ್ಸರ್ ನ ಲಕ್ಷಣಗಳು ಹಾಗೂ ಇದರ ಚಿಕಿತ್ಸಾ ವಿಧಾನ ಹೇಗಿರುತ್ತದೆ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

Prostate Cancer: ಪುರುಷರಲ್ಲಿ ಹೆಚ್ಚಾಗುತ್ತಿದೆ ಪ್ರಾಸ್ಟೇಟ್ ಕ್ಯಾನ್ಸರ್, ಏನಿದರ ಲಕ್ಷಣಗಳು? ತಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ Image Credit source: Tv9 kannada
ಸಾಯಿನಂದಾ
|

Updated on:May 21, 2025 | 7:14 PM

Share

ಶತ್ರುವಂತೆ ಕಾಡುವ ಕ್ಯಾನ್ಸರ್ ಹೆಸರು ಕೇಳಿದರೆ ಸಾಕು, ಈ ಮಾರಾಣಾಂತಿಕ ಕಾಯಿಲೆ ಯಾರಿಗೂ ಬರದಿರಲಿ ಎಂದು ಬೇಡುವವರೇ ಹೆಚ್ಚು. ನೀವು ಈ ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ಹೆಸರನ್ನು ಕೇಳಿರಬಹುದು. ಹೌದು, ಪುರುಷರಲ್ಲಿ ಮಾರಣಾಂತಿಕ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತಿದೆ. 50 ವರ್ಷ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಪುರುಷರಲ್ಲಿ ಮೂತ್ರಕೋಶದ ಕೆಳಗೆ ಇರುವ ಪ್ರಾಸ್ಟೇಟ್ ಗ್ರಂಥಿಯಲ್ಲಿ ಕಂಡುಬರುವ ಮಾರಣಾಂತಿಕ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ನೀವು ತಿಳಿದುಕೊಳ್ಳುವುದು ಒಳ್ಳೆಯದು.

ಏನಿದು ಪ್ರಾಸ್ಟೇಟ್ ಕ್ಯಾನ್ಸರ್?

ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗಿ ಪುರುಷರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ. ಪ್ರಾಸ್ಟೇಟ್ ಪುರುಷರ ಜನನೇಂದ್ರಿಯದ ಒಂದು ಗ್ರಂಥಿಯಾಗಿದ್ದು, ಮೂತ್ರಕೋಶದ ಕೆಳಗೆ ಇರುವ ಪ್ರಾಸ್ಟೇಟ್ ಗ್ರಂಥಿಯಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಈ ಗ್ರಂಥಿಯಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯೂ ಪ್ರಾಸ್ಟೇಟ್ ಕ್ಯಾನ್ಸರ್ ಆಗಿ ಮಾರ್ಪಡಾಗುತ್ತದೆ. ಪ್ರಾರಂಭದಲ್ಲೇ ಇದರ ರೋಗಲಕ್ಷಣಗಳನ್ನು ಗುರುತಿಸುವುದು ಕಷ್ಟಕರವಾಗಿದ್ದು, ಸರಿಯಾದ ಚಿಕಿತ್ಸೆ ನೀಡಿದರೆ ಈ ಕಾಯಿಲೆಯಿಂದ ಗುಣಮುಖವಾಗಬಹುದು.

ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು

* ಮೂತ್ರ ವಿಸರ್ಜನೆಯ ವೇಳೆ ಅಸ್ವಸ್ಥತೆ

ಇದನ್ನೂ ಓದಿ
Image
ಆನೆ ನೋಡೋಕೆ ಮಾತ್ರ ದೊಡ್ಡದು, ಇದ್ರ ಕಿವಿ ಎಷ್ಟು ಚಿಕ್ಕದಿದೆ ನೋಡಿ
Image
ಈ ಕಂಪನಿಯಲ್ಲಿ ಉಚಿತ ಶೌಚಾಲಯ, ಉಚಿತ ಲಿಫ್ಟ್, ನೈಟ್ ಸ್ನಾಕ್ಸ್
Image
ಖರ್ಚು ಮಾಡಿದ ದುಡ್ಡನ್ನೆಲ್ಲಾ ವಾಪಸ್ಸು ಕೊಡು ಎಂದ ಮಾಜಿ ಪ್ರಿಯಕರ
Image
ಪ್ಲೀಸ್ ನಾನು ನೀನು ಅಣ್ಣ ತಂಗಿಯಂತೆ ಇರೋಣ, ಮದುವೆ ಬೇಡ ಶಾಕ್ ಆದ ವರ

* ಮೂತ್ರವಿಸರ್ಜನೆಯಾದ ಬಳಿಕ ಮೂತ್ರಕೋಶ ಖಾಲಿಯಾಗಿಲ್ಲ ಎನ್ನುವ ಭಾವನೆ

* ರಾತ್ರಿಯ ವೇಳೆ ಪದೇ ಪದೇ ಎಚ್ಚರವಾಗುವುದು

* ಮೂತ್ರದಲ್ಲಿ ರಕ್ತಸ್ರಾವ

* ಸೊಂಟ ಅಥವಾ ಜನನಾಂಗಗಳಲ್ಲಿ ತೀವ್ರ ನೋವು

* ವೀರ್ಯದಲ್ಲಿ ರಕ್ತ

* ಶಿಶ್ನದ ನಿಮಿರುವಿಕೆ

* ಬೆನ್ನುಹುರಿಯಲ್ಲಿ ವಿಪರೀತ ನೋವು

* ಆಯಾಸ, ದುರ್ಬಲ ಭಾವನೆ

* ತೂಕ ನಷ್ಟ

ಪ್ರಾಸ್ಟೇಟ್ ಕ್ಯಾನ್ಸರ್ ಗೆ ಚಿಕಿತ್ಸೆ ಹೇಗೆ?

ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡ ಪ್ರಾರಂಭದಲ್ಲಿ ಸರಿಯಾದ ಚಿಕಿತ್ಸೆ ಪಡೆದರೆ ಈ ಕಾಯಿಲೆಯನ್ನು ಗುಣಪಡಿಸಬಹುದು. ಪಿಎಸ್ಎ ರಕ್ತ ಪರೀಕ್ಷೆ, ಡಿಜಿಟಲ್ ಗುದನಾಳ ಪರೀಕ್ಷೆ ಸೇರಿದಂತೆ ಇನ್ನಿತರ ಪರೀಕ್ಷೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಇದೆಯೇ ಎಂದು ಪತ್ತೆ ಹಚ್ಚಬಹುದು. ಈ ಕ್ಯಾನ್ಸರ್ ಕಾಣಿಸಿಕೊಂಡ ವ್ಯಕ್ತಿಗೆ ರೇಡಿಯೋಥೆರಪಿ, ಶಸ್ತ್ರಚಿಕಿತ್ಸೆ, ಆಂಡ್ರೊಜೆನ್ ನಿವಾರಣಾ ಚಿಕಿತ್ಸೆ ಸೇರಿದಂತೆ ಇನ್ನಿತ್ತರ ಚಿಕಿತ್ಸಾ ವಿಧಾನಗಳನ್ನು ವೈದ್ಯರು ಅನುಸರಿಸುತ್ತಾರೆ.

  •  ಹಾರ್ಮೋನ್ ಚಿಕಿತ್ಸೆ : ಈ ಚಿಕಿತ್ಸೆಯಲ್ಲಿ, ದೇಹವು ಟೆಸ್ಟೋಸ್ಟೆರಾನ್ ಉತ್ಪಾದಿಸುವುದನ್ನು ನಿಲ್ಲಿಸಲು ಔಷಧಿಗಳನ್ನು ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಉತ್ಪಾದನೆ ಕಡಿಮೆಯಾದಾಗ ಕ್ಯಾನ್ಸರ್ ಕೋಶಗಳ ಬೆಳವಣಿಗೆಯೂ ಕ್ರಮೇಣ ಕಡಿಮೆಯಾಗುತ್ತದೆ.
  • ವಿಕಿರಣ ಚಿಕಿತ್ಸೆ: ಇದು ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಹೆಚ್ಚಿನ ಶಕ್ತಿಯ ವಿಕಿರಣವನ್ನು ಬಳಸಲಾಗುತ್ತದೆ.  ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಬಾಹ್ಯ ಹಾಗೂ ಆಂತರಿಕ ವಿಕಿರಣ ಚಿಕಿತ್ಸೆಗಳಿವೆ.
  • ರಾಡಿಕಲ್ ಪ್ರಾಸ್ಟೇಟೆಕ್ಟಮಿ ಚಿಕಿತ್ಸೆ : ಈ ಶಸ್ತ್ರಚಿಕಿತ್ಸೆಯಲ್ಲಿ, ಪ್ರಾಸ್ಟೇಟ್ ಗ್ರಂಥಿ ಮತ್ತು ಸುತ್ತಮುತ್ತಲಿನ ಅಂಗಾಂಶಗಳು ಮತ್ತು ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕಲಾಗುತ್ತದೆ.
  • ಕಿಮೋಥೆರಪಿ : ಈ ಚಿಕಿತ್ಸೆಯ ಮೂಲಕ ಮೂಲಕ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲಾಗುತ್ತದೆ. ಈ ಕ್ಯಾನ್ಸರ್ ಕೋಶಗಳು ದೇಹದ ಇತರ ಭಾಗಗಳಿಗೆ ಹರಡಿದ್ದರೆ ಈ ಕಿಮೋಥೆರಪಿಯನ್ನು ನೀಡಲಾಗುತ್ತದೆ.

ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಯುವುದು ಹೇಗೆ?

* ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

* ದೇಹದ ರಕ್ತದಲ್ಲಿ ಅಸಮತೋಲನ ಉಂಟುಮಾಡುವ ಆಹಾರಗಳನ್ನು ಹಾಗೂ ಕೆಫೀನ್ ಯುಕ್ತ ಆಹಾರಗಳನ್ನು ಆದಷ್ಟು ಸೇವಿಸದೆ ಇರುವುದು.

* ನಿಯಮಿತ ವ್ಯಾಯಾಮ ಹಾಗೂ ಬಾದಾಮಿ, ಅಕ್ರೋಟ್, ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.

* ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳುವುದು.

* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವತ್ತ ಗಮನ ಕೊಡುವುದು.

* ಅತಿಯಾದ ಆಲ್ಕೋಹಾಲ್ ಸೇವನೆಯನ್ನು ತಪ್ಪಿಸುವುದು ಪ್ರಯೋಜನಕಾರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Mon, 19 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ