GST Filing: ಜಿಎಸ್​ಟಿ ಮರುಪಾವತಿಗೆ ಕ್ಲೇಮ್​ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ​

ಜಿಎಸ್​ಟಿ ಮರುಪಾವತಿಗೆ ಆಧಾರ್​ ದೃಢೀಕರಣ ಕಡ್ಡಾಯಗೊಳಿಸಿ ಸಿಬಿಐಸಿ ಕಡ್ಡಾಯಗೊಳಿಸಿದೆ. ಆ ಬಗ್ಗೆ ಮಾಹಿತಿ ಈ ವರದಿಯಲ್ಲಿದೆ.

GST Filing: ಜಿಎಸ್​ಟಿ ಮರುಪಾವತಿಗೆ ಕ್ಲೇಮ್​ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 25, 2021 | 9:03 PM

ಜಿಎಸ್‌ಟಿ ಮರುಪಾವತಿಯನ್ನು ಪಡೆಯಲು ತೆರಿಗೆದಾರರ ಆಧಾರ್ ದೃಢೀಕರಣವನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಜಿಎಸ್‌ಟಿ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರೀಫಂಡ್​ ಅನ್ನು ನೋಂದಣಿ ಮಾಡಿದ ಬ್ಯಾಂಕ್ ಖಾತೆಯಲ್ಲಿ ಮಾತ್ರ ಮಾಡುವಂತೆ ಹಾಗೂ ಆ ಖಾತೆಗೆ ಜೋಡಣೆ ಮಾಡಿದ ಪ್ಯಾನ್​ ಕೂಡ ಜಿಎಸ್​ಟಿ ನೋಂದಣಿ ಯಾವುದರಲ್ಲಿ ಮಾಡಲಾಗಿರುತ್ತದೋ ಅದನ್ನೇ ಬಳಸಿರಬೇಕು ಎನ್ನಲಾಗಿದೆ. ವಿವಿಧ ವಂಚನೆ ವಿರೋಧಿ ಕ್ರಮಗಳನ್ನು ಸಿಬಿಐಸಿಯಿಂದ ತರಲಾಗಿದೆ. ಅಧಿಸೂಚನೆ ಹೊರಡಿಸಿರುವಂತೆ, ಜನವರಿ 1, 2022ರಿಂದ ಅನ್ವಯ ಆಗುವಂತೆ ಮಾಸಿಕ ಜಿಎಸ್‌ಟಿ ಪಾವತಿಸಲು ವಿಫಲವಾಗುವ ಉದ್ಯಮಗಳು ಅದರ ಮುಂದಿನ ತಿಂಗಳಿಂದ ಜಿಎಸ್‌ಟಿಆರ್-1 ಮಾರಾಟ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 17ರಂದು ಲಖನೌದಲ್ಲಿ ನಡೆದ ಜಿಎಸ್‌ಟಿ ಸಮಿತಿ ಸಭೆಯಲ್ಲಿ ತೆಗೆದುಕೊಂ ಡ ನಿರ್ಧಾರಗಳನ್ನು ಅಧಿಸೂಚನೆಯು ಅನುಸರಿಸುತ್ತದೆ. AMRG ಮತ್ತು ಅಸೋಸಿಯೇಟ್ಸ್ ಹಿರಿಯ ಪಾಲುದಾರ ರಜತ್ ಮೋಹನ್ ಮಾತನಾಡಿ, “ತೆರಿಗೆ ವಂಚಿಸುವವರನ್ನು ಬಂಧಿಸಲು ಸರ್ಕಾರವು ಮಾಲೀಕ, ಪಾಲುದಾರ, ಕರ್ತ, ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರು ಮತ್ತು ರದ್ದತಿ ನೋಂದಣಿ ಹಾಗೂ ಮರುಪಾವತಿ ರದ್ದುಗೊಳಿಸುವಿಕೆಗೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಸಹಿ ಕಡ್ಡಾಯವಾಗಿದೆ” ಎಂದಿದ್ದಾರೆ. EY ತೆರಿಗೆ ಪಾಲುದಾರ ಅಭಿಷೇಕ್ ಜೈನ್ ಮಾತನಾಡಿ, ಆದಾಯ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ, ತೆರಿಗೆದಾರರು ಮರುಪಾವತಿ ಪಡೆಯಲು ಸರ್ಕಾರವು ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಿದೆ ಎಂದಿದ್ದಾರೆ.

“ಮೋಸದ ಮರುಪಾವತಿ ಪ್ರಕರಣಗಳನ್ನು ಕಡಿಮೆ ಮಾಡಲು ಈ ಕ್ರಮವು ಸಹಾಯ ಮಾಡುತ್ತದೆ. ಏಕೆಂದರೆ ಪರಿಶೀಲಿಸಿದ ತೆರಿಗೆದಾರರು ಮಾತ್ರ ಈಗ ಮರುಪಾವತಿಯನ್ನು ಪಡೆಯುತ್ತಾರೆ,” ಎಂದು ಜೈನ್ ಹೇಳಿದ್ದಾರೆ. ತೆರಿಗೆದಾರರು ಹಿಂದಿನ ತಿಂಗಳಿನ ಜಿಎಸ್‌ಟಿಆರ್ -3B ಸಲ್ಲಿಸದಿದ್ದಲ್ಲಿ ಅವರ ಜಿಎಸ್‌ಟಿಆರ್ -1 ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ, ಎನ್ನುತ್ತಾರೆ ಜೈನ್. ಇದು ಉತ್ತಮ ಚಿಂತನೆಯ ನಿರ್ಬಂಧ ಮತ್ತು ತೆರಿಗೆದಾರರು ತಮ್ಮ ಪೂರೈಕೆಯನ್ನು (Supply) ವರದಿ ಮಾಡಿದರೂ ಪ್ರಕರಣಗಳನ್ನು ನಿವಾರಿಸಲು ಅಗತ್ಯವಾದ ನಿಯಂತ್ರಣ ಪರಿಶೀಲನೆ ಎಂದು ಹೇಳಿದ್ದಾರೆ. ಜಿಎಸ್‌ಟಿಆರ್ -1ರಲ್ಲಿ ಇನ್​ವಾಯ್ಸ್‌ಗಳು (ಸ್ವೀಕರಿಸುವವರ ಕಡೆಯಿಂದ ನಿರಂತರ ಫಾಲೋ ಅಪ್​) ಆದರೆ ಅವರು ಅನುಗುಣವಾದ ಜಿಎಸ್‌ಟಿಆರ್ -3ಬಿ ರಿಟರ್ನ್ ಅನ್ನು ಸಲ್ಲಿಸುವುದಿಲ್ಲ, ಅದರ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿಸಲಾಗುತ್ತದೆ.

“ಜಿಎಸ್‌ಟಿಆರ್ -2ಎಯಲ್ಲಿ ಮಾರಾಟಗಾರರು ತಮ್ಮ ಜಿಎಸ್‌ಟಿಆರ್ -3ಬಿಯನ್ನು ಸಲ್ಲಿಸದಿದ್ದಲ್ಲಿ ಅವರ ಇನ್​ಪುಟ್ ತೆರಿಗೆ ಕ್ರೆಡಿಟ್ ಕೂಡ ಅಪಾಯದಲ್ಲಿ ಇರುತ್ತದೆ ಎಂದು ದೂರು ನೀಡುವ ತೆರಿಗೆದಾರರು ಈ ಕ್ರಮವನ್ನು ಮೆಚ್ಚುತ್ತಾರೆ,” ಎಂದು ಜೈನ್ ಹೇಳಿದ್ದಾರೆ. ಸದ್ಯಕ್ಕೆ, ವ್ಯಾಪಾರವು ಎರಡು ತಿಂಗಳ ಹಿಂದಿನ ಜಿಎಸ್‌ಟಿಆರ್-3ಬಿ ಸಲ್ಲಿಸಲು ವಿಫಲವಾದರೆ ಬಾಹ್ಯ ಸರಬರಾಜು ಅಥವಾ ಜಿಎಸ್‌ಟಿಆರ್ -1 ರಿಟರ್ನ್ ಸಲ್ಲಿಸುವುದನ್ನು ಕಾನೂನು ನಿರ್ಬಂಧಿಸುತ್ತದೆ. ಮುಂದಿನ ತಿಂಗಳಿನ 11ನೇ ದಿನದೊಳಗೆ ವ್ಯಾಪಾರಗಳು ನಿರ್ದಿಷ್ಟ ತಿಂಗಳಿನ ಜಿಎಸ್‌ಟಿಆರ್ -1 ಅನ್ನು ಸಲ್ಲಿಸಿದರೆ, ಜಿಎಸ್‌ಟಿಆರ್ -3ಬಿ, ಅದರ ಮೂಲಕ ವ್ಯವಹಾರಗಳು ತೆರಿಗೆಯನ್ನು ಪಾವತಿಸುತ್ತವೆ. ಮುಂದಿನ ತಿಂಗಳಿನ 20-24ನೇ ದಿನದ ನಡುವೆ ಹಂತಹಂತವಾಗಿ ಅಚ್ಚರಿಯ ರೀತಿಯಲ್ಲಿ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: GST Rate: ಜಿಎಸ್​ಟಿ ಸಮಿತಿ ಸಭೆಯ ನಂತರ ಯಾವ ಸರಕು ತೆರಿಗೆ ದರ ಎಷ್ಟಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

(Aadhaar Authentication Mandatory For GST Refund According To CBIC Here Is The Details)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ