GST Rate: ಜಿಎಸ್​ಟಿ ಸಮಿತಿ ಸಭೆಯ ನಂತರ ಯಾವ ಸರಕು ತೆರಿಗೆ ದರ ಎಷ್ಟಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

ಜಿಎಸ್​ಟಿ ಸ್ಲ್ಯಾಬ್​ ದರಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆ ಬಗ್ಗೆ ಮಾಹಿತಿ ನೀಡಿದ್ದಾರೆ.

GST Rate: ಜಿಎಸ್​ಟಿ ಸಮಿತಿ ಸಭೆಯ ನಂತರ ಯಾವ ಸರಕು ತೆರಿಗೆ ದರ ಎಷ್ಟಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Sep 18, 2021 | 1:20 PM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರದಂದು ನಡೆದ ಜಿಎಸ್​ಟಿ ಸಮಿತಿ ಸಭೆಯ ಗಂಟೆಗಳ ಬಳಿಕ ಅಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಕೊರೊನಾ ಔಷಧಗಳ ಮೇಲಿನ ರಿಯಾಯಿತಿ ತೆರಿಗೆ ದರಗಳನನ್ನು ಸಮಿತಿಯಿಂದ ಡಿಸೆಂಬರ್ 31ರ ತನಕ ವಿಸ್ತರಿಸಿದರೂ ಸಭೆಯ ಮುಂಚೆ ಊಹಿಸಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಬಗ್ಗೆ ನಿರ್ಧಾರ ಮಾಡಲಿಲ್ಲ. ಹಾಗೆ ಸೇರಿಸುವುದಕ್ಕೆ ಇದು ಸಮಯ ಅಲ್ಲ ಎಂದು ಜಿಎಸ್​ಟಿ ಸಮಿತಿಯು ಭಾವಿಸಿದೆ. ಜಿಎಸ್​ಟಿ ಸಮಿತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಹುದೇ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಊಹಾಪೋಹಗಳು ಬಂದಿವೆ ಎಂದು ಹೇಳಿದರು.

“ಇದು ಇಂದಿನ ಕಾರ್ಯಸೂಚಿಯಲ್ಲಿ ಬಂದಿದ್ದು, ಕೇರಳ ಹೈಕೋರ್ಟ್ ಆದೇಶದಿಂದಾಗಿ ಈ ವಿಷಯವನ್ನು ಜಿಎಸ್‌ಟಿ ಸಮಿತಿ ಮುಂದೆ ಇರಿಸಲು ಸೂಚಿಸಲಾಗಿತ್ತು. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ಸೇರಿಸುವುದನ್ನು ಬಯಸುವುದಿಲ್ಲ ಎಂದು ಸಮಿತಿ ಸದಸ್ಯರು ಸ್ಪಷ್ಟಪಡಿಸಿದರು. ಈ ವಿಷಯವನ್ನು ಚರ್ಚಿಸಲಾಗಿದೆ ಮತ್ತು ಸಮಿತಿಯು ತೀರ್ಮಾನ ಕೈಗೊಂಡಂತೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಮಯ ಇದಲ್ಲ ಎಂದು ಭಾವಿಸುತ್ತೇವೆ ಎಂಬುದನ್ನು ಕೇರಳ ಹೈಕೋರ್ಟ್​ಗೆ ವರದಿ ಮಾಡಲು ನಾವು ನಿರ್ಧರಿಸಿದ್ದೇವೆ ಎಂಬುದನ್ನು ತಿಳಿಸಿದ್ದಾರೆ,” ಎಂದು ನಿರ್ಮಲಾ ತಿಳಿಸಿದ್ದಾರೆ.

ದರ ರಿಯಾಯಿತಿ ರೂಪದಲ್ಲಿ ಕೊವಿಡ್ ಪರಿಹಾರ ಕ್ರಮ ಸಮಿತಿಯು ಕೊವಿಡ್ -19 ಚಿಕಿತ್ಸಾ ಔಷಧಗಳ ಮೇಲಿನ ರಿಯಾಯಿತಿ ಜಿಎಸ್‌ಟಿ ದರಗಳನ್ನು 2021ರ ಡಿಸೆಂಬರ್ 31ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಈ ಔಷಧದಲ್ಲಿ ಆಂಫೋಟೆರಿಸಿನ್ B (ಶೂನ್ಯ), ರೆಮಿಡೆಸಿವಿರ್ (ಶೇ 5), Tocilixumab (ಶೂನ್ಯ), ಹೆಪರಿನ್​ನಂಥವು (ಶೇ 5).

ಜಿಎಸ್​ಟಿಯನ್ನು ಶೇ 5ಕ್ಕೆ ಇಳಿಸಿರುವುದು – Itolizumab – Posaconazole – Infliximab * Favipiravir – Casirvimab & Imdevimab -2-Deoxy-D-Glucose – Bamlanivimab and Etesevimab

ಸರಕುಗಳಿಗೆ ಸಂಬಂಧಿಸಿದಂತೆ ಜಿಎಸ್​ಟಿ ದರ ಬದಲಾವಣೆಯ ಪ್ರಮುಖ ಶಿಫಾರಸುಗಳು – ಅಂಗವಿಕಲರು ಬಳಸುವ ವಾಹನಗಳಿಗೆ ರೆಟ್ರೊ ಫಿಟ್ಮೆಂಟ್ ಕಿಟ್ – ಶೇ 5ಕ್ಕೆ ಇಳಿಕೆ – ICDS ಇತ್ಯಾದಿ ಯೋಜನೆಗಳಿಗೆ ಬಲವರ್ಧಿತ ಅಕ್ಕಿ ಕಾಳುಗಳು – ಶೇ 18ರಿಂದ ಶೇ 5ಕ್ಕೆ – ಕ್ಯಾನ್ಸರ್ ಚಿಕಿತ್ಸೆಗಾಗಿ ಕೀಟ್ರುಡ ಔಷಧ – ಶೇ 12ರಿಂದ ಶೇ 5ಕ್ಕೆ – ಡೀಸೆಲ್‌ನೊಂದಿಗೆ ಮಿಶ್ರಣಕ್ಕಾಗಿ ಓಎಂಸಿಗಳಿಗೆ ಸರಬರಾಜು ಮಾಡುವ ಬಯೋಡೀಸೆಲ್ ಸರಬರಾಜು- ಶೇ 12ರಿಂದ ಶೇ 5ಕ್ಕೆ – ಕಬ್ಬಿಣ, ತಾಮ್ರ, ಅಲ್ಯೂಮಿನಿಯಂ, ಸತು ಮತ್ತು ಇತರ ಕೆಲವು ಲೋಹಗಳ ಅದಿರುಗಳು ಮತ್ತು ಸಾಂದ್ರತೆಗಳು – ಶೇ 5ರಿಂದ ಶೇ 18ಕ್ಕೆ ಹೆಚ್ಚಳ – ನಿರ್ದಿಷ್ಟ ನವೀಕರಿಸಬಹುದಾದ ಇಂಧನ ಸಾಧನಗಳು ಮತ್ತು ಭಾಗಗಳು – ಶೇ 5ರಿಂದ ಶೇ 12ಕ್ಕೆ ಏರಿಕೆ – ಕಾರ್ಟನ್​ಗಳು, ಪೆಟ್ಟಿಗೆಗಳು, ಚೀಲಗಳು, ಕಾಗದದ ಪ್ಯಾಕಿಂಗ್ ಪಾತ್ರೆಗಳು ಇತ್ಯಾದಿ- ಶೇ 12/18ರಿಂದ ಶೇ 18ಕ್ಕೆ ಏರಿಕೆ – ಪಾಲಿಯುರೆಥೇನ್ ಮತ್ತು ಇತರ ಪ್ಲಾಸ್ಟಿಕ್‌ಗಳ ತ್ಯಾಜ್ಯ ಮತ್ತು ಸ್ಕ್ರ್ಯಾಪ್ – ಶೇ 5ರಿಂದ ಶೇ 18ಕ್ಕೆ ಏರಿಕೆ – ಎಲ್ಲ ರೀತಿಯ ಪೆನ್​ಗಳು – ಶೇ 12/18ರಿಂದ ಶೇ 18ಕ್ಕೆ ಏರಿಕೆ – ಅಧ್ಯಾಯ 86ರಲ್ಲಿನ ರೈಲ್ವೆ ಭಾಗಗಳು, ಲೋಕೋಮೋಟಿವ್‌ಗಳು ಮತ್ತು ಇತರ ಸರಕುಗಳು – ಶೇ 12ರಿಂದ 18ಕ್ಕೆ – ಕಾರ್ಡ್‌ಗಳು, ಕ್ಯಾಟಲಾಗ್, ಮುದ್ರಿತ ವಸ್ತುಗಳು (ಸುಂಕದ ಅಧ್ಯಾಯ 49) ನಂತಹ ಕಾಗದದ ವಿವಿಧ ಸರಕುಗಳು – ಶೇ 12ರಿಂದ ಶೇ 18ಕ್ಕೆ ಹೆಚ್ಚಳ – ಇಂಡೋ -ಬಾಂಗ್ಲಾದೇಶದಲ್ಲಿ (ಗಡಿ ಪ್ರದೇಶದಲ್ಲಿ) ಪೂರೈಕೆಯಾಗುವ ಸರಕುಗಳ ಮೇಲೆ ಐಜಿಎಸ್‌ಟಿ ವಿನಾಯಿತಿ – ಶೂನ್ಯ ಜಿಎಸ್‌ಟಿ – ಫಿಶ್ ಆಯಿಲ್ ಹೊರತುಪಡಿಸಿ ಮೀನಿನ ಊಟ ಉತ್ಪಾದನೆಯ ಸಮಯದಲ್ಲಿ ಉತ್ಪತ್ತಿಯಾಗುವ ನಿರುದ್ದಿಶ್ಯ ತ್ಯಾಜ್ಯ – ಶೂನ್ಯ ಜಿಎಸ್‌ಟಿ

ಶೂನ್ಯ ಜಿಎಸ್​ಟಿ ವೈಯಕ್ತಿಕ ಬಳಕೆಗಾಗಿ ಔಷಧಿಗಳ ಆಮದು ಮೇಲೆ IGST, ಅವುಗಳೆಂದರೆ: – ಬೆನ್ನುಮೂಳೆಯ ಸ್ನಾಯು ಕ್ಷೀಣತೆಗಾಗಿ Zolgensma – ಡುಷೆನ್ ಮಸ್ಕ್ಯುಲರ್ ಡಿಸ್ಟ್ರೋಫಿಗಾಗಿ ವಿಲ್ಟೆಪ್ಸೊ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಔಷಧೀಯ ಇಲಾಖೆಯಿಂದ ಶಿಫಾರಸು ಮಾಡಲಾದ ಸ್ನಾಯು ಕ್ಷೀಣತೆಯ ಚಿಕಿತ್ಸೆಯಲ್ಲಿ ಬಳಸುವ ಇತರ ಔಷಧಗಳು.

ಆಹಾರ ವಿತರಣಾ ವೇದಿಕೆಗಳಾದ ಸ್ವಿಗ್ಗಿ ಮತ್ತು ಝೊಮ್ಯಾಟೋಗೆ ತೆರಿಗೆ ವಿಧಿಸಲು ಸಮಿತಿ ಸಭೆಯು ನಿರ್ಧರಿಸಿದೆ. ಸ್ವಿಗ್ಗಿ ಮತ್ತು ಝೊಮಾಟೊ ವಿತರಣೆಯನ್ನು ಮಾಡಿದ ಸ್ಥಳದಲ್ಲಿ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುವುದು ಎಂದು ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಇದರರ್ಥ ಏನೆಂದರೆ, ಇನ್ನು ಆಹಾರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ದುಬಾರಿಯಾಗುತ್ತದೆ.

ಅದಿರುಗಳು ಮತ್ತು ನಿಗದಿತ ಲೋಹಗಳಿಗೆ ಇರುವ ವೈಪರೀತ್ಯಗಳನ್ನು ಸರಿಪಡಿಸಲಾಗುವುದು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ. ಆದರೆ ಕೌನ್ಸಿಲ್ ಇದಕ್ಕಾಗಿ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ. ಜಿಎಸ್‌ಟಿಯನ್ನು ಪರಿಚಯಿಸುವ ಸಮಯದಲ್ಲಿ ಶೇ 15.5 ಇದ್ದ ಆದಾಯ ತಟಸ್ಥ ಸ್ಥಾನವು ಸ್ಥಿರವಾಗಿ ಸುಮಾರು ಶೇ 11.6 ಕ್ಕೆ ಇಳಿದಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಗಿದೆ.

ಇದನ್ನೂ ಓದಿ: GST Council Meeting: ಜಿಎಸ್​ಟಿ ಮಂಡಳಿ ಸಭೆ: ಕೈಗೊಂಡ ಪ್ರಮುಖ ನಿರ್ಣಯಗಳು ಇಲ್ಲಿವೆ, ಓದಿ

(Various GST Slab Rate Changes Announced By Nirmala Sitharaman After 45th Council Meet)

Published On - 1:18 pm, Sat, 18 September 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್