ಹೆಚ್ಬಿಅರ್ ಲೇಔಟ್ನಲ್ಲಿ ಮಳೆಯಿಂದಾಗಿ ರಾಜಾ ಕಾಲುವೆಯ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅಸಹನೀಯ ಸನ್ನಿವೇಶ
ನಗರದ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಸರ್ಕಾರ ಇದನ್ನು ಗ್ರೇಟರ್ ಬೆಂಗಳೂರು ಅಂತ ಮಾಡಿರುವುದಲ್ಲಿ ಏನಾದರೂ ಅರ್ಥವಿದೆಯಾ ಎಂದು ಮನೆಯ ಯಜಮಾನಿ ಹೇಳುತ್ತಾರೆ. ಅವರು ಮತ್ತು ಅವರ ಪತಿ ಇಬ್ಬರೂ ಸಾಫ್ಟ್ವೇರ್ ಇಂಜಿನೀಯರ್ಗಳು, ಅದರೆ ಚರಂಡಿ ನೀರು ಮನೆಯಲ್ಲಿ ನುಗ್ಗಿರುವುದರಿಂದ ರಜಾ ಹಾಕಿ ಮನೆಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದಾರಂತೆ.
ಬೆಂಗಳೂರು, ಮೇ 19: ಬೆಂಗಳೂರಲ್ಲಿ ಮಳೆಯಾದರೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಅವಾಂತರ. ಹೆಬಿಅರ್ ಲೇಔಟ್ (HBR layout) ಐದನೇ ಬ್ಲಾಕ್ನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಾಜಾಕಾಲುವೆಯಲ್ಲಿ ನೀರು ಉಕ್ಕಿ ಮನೆಗಳಲೆಲ್ಲ ಕೊಳಚೆ ಚರಂಡಿ ನೀರು ನುಗ್ಗಿದೆ. ನಮ್ಮ ಬೆಂಗಳೂರು ವರದಿಗಾರ ಏರಿಯಾದಲ್ಲಿನ ಮನೆಯೊಂದರಲ್ಲಿರುವ ಸಂಪುಗಳಲ್ಲಿ ಚರಂಡಿ ನೀರು ತುಂಬಿರುವ ದೃಶ್ಯ ತೋರಿಸುತ್ತಿದ್ದಾರೆ. ಏರಿಯಾದಲ್ಲಿ ಹರಿಯುವ ರಾಜಾ ಕಾಲುವೆಯ ವಾಲ್ವ್ ಬಂದ್ ಮಾಡಿ ಅಂತ 6 ತಿಂಗಳಿಂದ ಹೇಳುತ್ತಿದ್ದರೂ ಬಿಡಿಎ ಅಧಿಕಾರಿಗಳು ಕಿವಿಗೆ ಹಾಕ್ಕೊಳ್ಳುತ್ತಿಲ್ಲವಂತೆ. ಅಂದಹಾಗೆ, ಇದು ಬಿಡಿಎ ಅಭಿವೃದ್ಧಿಗೊಳಿಸಿರುವ ಲೇಔಟ್.
ಇದನ್ನೂ ಓದಿ: ಮಳೆಗೆ ಸಣ್ಣಪುಟ್ಟ ಸಮಸ್ಯೆ ಆಗೇ ಆಗುತ್ತೆ: ಬಿಬಿಎಂಪಿ ಆಯುಕ್ತ ಉಡಾಫೆ ಮಾತು!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಮಾಧ್ಯಮದ ಕ್ಯಾಮೆರಾ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ

