Inox: ಥೇಟರ್ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್ ಸಹಯೋಗ
ಐನಾಕ್ಸ್ ಥೇಟರ್ನಲ್ಲಿ ಆಹಾರ ಹಾಗೂ ಪಾನೀಯ ಪೂರೈಕೆಗಾಗಿ ಐಟಿಸಿ ಕಂಪೆನಿ ಜತೆಗೆ ಸಹಯೋಗ ವಹಿಸಿಕೊಂಡು, ಐನಾಕ್ಸ್ ಲೀಷರ್ ಗುರುವಾರದಂದು ಘೋಷಣೆ ಮಾಡಿದೆ.
ಮಲ್ಟಿಪ್ಲೆಕ್ಸ್ ಆಪರೇಟರ್ ಆದ ಐನಾಕ್ಸ್ನಿಂದ ಆಹಾರ ಹಾಗೂ ಪಾನೀಯಕ್ಕಾಗಿ ಐಟಿಸಿ ಜತೆಗೆ ಸಹಯೋಗ ಆಗಿದೆ. ಐನಾಕ್ಸ್ ಲೀಷರ್ ಸೆಪ್ಟೆಂಬರ್ 30ರಂದು ಘೋಷಣೆ ಮಾಡಿರುವಂತೆ, ಐನಾಕ್ಸ್ನ ಥೇಟರ್ನಲ್ಲಿ ಐಟಿಸಿ ಲಿಮಿಟೆಡ್ ರೆಡಿ-ಟು-ಈಟ್ ಆಫರ್ ಮಾಡಲಾಗುವುದು. ಈ ಹೊಸ ಮೆನುವಿನ ಸೇರ್ಪಡೆಯೊಂದಿಗೆ ಐನಾಕ್ಸ್ ಗ್ರಾಹಕರಿಗೆ ಹೊಸದಾಗಿ ಮನೆಯ ಶೈಲಿ ಆಹಾರವನ್ನು ಒದಗಿಸುತ್ತದೆ. ಅದು ಥೇಟರ್ನಲ್ಲೇ ಆಗಲಿ ಅಥವಾ ಫುಡ್- ಆರ್ಡರಿಂಗ್ ಆ್ಯಪ್ ಮೂಲಕ ಮನೆಯಿಂದಾದರೂ ಸರಿ ಆರ್ಡರ್ ಮಾಡಬಹುದು ಎಂದು ಕಂಪೆನಿ ಹೇಳಿದೆ. ಹೊಸ ಆಹಾರ ಆಫರಿಂಗ್ನಲ್ಲಿ ವೆಜಿಟೆಬಲ್ ಪಲಾವ್, ಹೈದರಾಬಾದಿ ವೆಜಿಟೆಬಲ್ ಬಿರಿಯಾನಿ, ದಾಲ್ ಮಖನಿ, ರಾಜ್ಮ ಮಸಾಲ, ಪಿಂಡಿ ಚನ್ನ ಮತ್ತು ಸ್ಟೀಮ್ಡ್ ಬಾಸ್ಮತಿ ಅನ್ನ ಒಳಗೊಂಡಿದೆ. ಮಲ್ಟಿಪ್ಲೆಕ್ಸ್ನಿಂದ ಆಹಾರ ಮತ್ತು ಪಾನೀಯ ಸೆಗ್ಮೆಂಟ್ ಮೇಲೆ ಗಮನ ಹರಿಸಲಾಗುತ್ತಿದೆ. ಐನಾಕ್ಸ್ಗೆ 2020ರಲ್ಲಿ ಆಹಾರದ ವ್ಯವಹಾರ ಮೂಲಕ ಬಂದಿರುವ ಆದಾಯ 500 ಕೋಟಿ ರೂಪಾಯಿ. ಸಿಇಒ ಅಲೋಕ್ ಟಂಡನ್ ಸಂದರ್ಶನವೊಂದರಲ್ಲಿ ಮಾತನಾಡಿ, ಈ ಆದಾಯವನ್ನು ಹೆಚ್ಚಿಸಲು ಕಂಪೆನಿಯು ಸಾಕಷ್ಟು ಶ್ರಮ ಹಾಕುತ್ತಿದೆ ಎಂದಿದ್ದಾರೆ.
ಈಗ ಐನಾಕ್ಸ್ನ ಆದಾಯದಲ್ಲಿ ಆಹಾರ ಸೆಗ್ಮೆಂಟ್ನ ಪಾಲು ಶೇ 22ರಿಂದ 25ರಷ್ಟಿದೆ. ಅದನ್ನು ಇನ್ನೂ ಹೆಚ್ಚು ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ. ವಿಶ್ಲೇಷಕರ ಪ್ರಕಾರ, FY23ರಲ್ಲಿ ಮಲ್ಟಿಪ್ಲೆಕ್ಸ್ಗಳ ಆಹಾರ ಹಾಗೂ ಪಾನೀಯ ಸೆಗ್ಮೆಂಟ್ನ ಆದಾಯ ಕೊವಿಡ್ ಮುಂಚಿನ ಹಂತದ ಶೇ 90ರಷ್ಟು ಚೇತರಿಸಿಕೊಳ್ಳಲಿದೆ. ತಮ್ಮ ಆಹಾರಗಳು ಫುಡ್ ಆರ್ಡರ್ ಮಾಡುವ ಪ್ಲಾಟ್ಪಾರ್ಮ್ಗಳಾದ ಸ್ವಿಗ್ಗಿ, ಝೊಮ್ಯಾಟೋದಲ್ಲೂ ಸಿಗುವಂತೆ ಹೊಸ ಪ್ರಕ್ರಿಯೆ ಹಾಗೂ ಆವಿಷ್ಕಾರಗಳನ್ನು ಮಾಡುತ್ತಿರುವುದಾಗಿ ಐನಾಕ್ಸ್ ಹೇಳಿದೆ;. ಈಚೆಗೆ ಟೇಬಲ್ ಕಾಯ್ದಿರಿಸುವ ಹಾಗೂ ಆಹಾರ ಹುಡುಕುವ ಪ್ಲಾಟ್ಫಾರ್ಮ್ ಆದ EazyDinerನಲ್ಲಿ ಐನಾಕ್ಸ್ ಲಿಸ್ಟ್ ಆಯಿತು. ಸದ್ಯಕ್ಕೆ ಕಂಪೆನಿಯಿಂದ ಕೆಫೆ ಅನ್ವೈಂಡ್, ಇನ್ಸಿಗ್ನಿಯಾ ಮತ್ತು ಡಿಲೈಟ್ಸ್ ಈ ಮೂರು ಬ್ರ್ಯಾಂಡ್ಗಳಲ್ಲಿ ಆಹಾರ ಮಾರಾಟ ಮಾಡಲಾಗುತ್ತಿದೆ. ಇವುಗಳನ್ನು ಪೂರ್ಣ ಪ್ರಮಾಣದ ಸೇವೆ ನೀಡುವ ರೆಸ್ಟೋರೆಂಟ್ ಬ್ರ್ಯಾಂಡ್ಗಳಾಗಿ ಸಿನಿಮಾಯೇತರ ಗ್ರಾಹಕರಿಗೂ ತಲುಪಿಸುವ ಗುರಿ ಕಂಪೆನಿಗೆ ಇದೆ.
ಪ್ರೀಮಿಯಂ ಹಾಗೂ ಸೋರಿಕೆ ತಡೆಯ ಪ್ಯಾಕೇಜಿಂಗ್ನೊಂದಿಗೆ ನಮ್ಮ ಗ್ರಾಹಕರಿಗೆ ಸೇವೆ ಒದಗಿಸಿದರೆ ಸಿನಿಮಾ ನೋಡುತ್ತಲೇ ಆಹಾರವನ್ನು ಎಂಜಾಯ್ ಮಾಡಬಹುದು. ಈಗಿನ ಐಟಿಸಿಯೊಂದಿಗಿನ ಸಹಯೋಗದ ಮೂಲಕ ಐನಾಕ್ಸ್ನ ಆಹಾರ ಹಾಗೂ ಪಾನೀಯ ಸೆಗ್ಮೆಂಟ್ ಸೇವಾ ಬ್ರ್ಯಾಂಡ್ ಅನ್ನು ಇನ್ನಷ್ಟು ಬಲ ಪಡಿಸುವುದಕ್ಕೆ ಅನುಕೂಲ ಆಗುತ್ತದೆ. ಜತೆಗೆ ನಮ್ಮ ಗ್ರಾಹಕರಿಗೆ ಹೊಸ ಬಗೆಯ ಆಯ್ಕೆಗಳನ್ನು ನೀಡಿದಂತಾಗುತ್ತದೆ ಎಂದು ಐನಾಕ್ಸ್ ಲೀಷರ್ ಲಿಮಿಟೆಡ್ನ ಆಹಾರ ಹಾಗೂ ಪಾನೀಯ ಕಾರ್ಯಾಚರಣೆ ಉಪಾಧ್ಯಕ್ಷ ದಿನೇಶ್ ಹರಿಹರನ್ ಹೇಳಿದ್ದಾರೆ. ಐನಾಕ್ಸ್ ಲೀಷರ್ ಸದ್ಯಕ್ಕೆ 69 ನಗರಗಳಲ್ಲಿ 155 ಮಲ್ಟಿಪ್ಲೆಕ್ಸ್ಗಳು ಮತ್ತು 654 ಸ್ಕ್ರೀನ್ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ: Sunfeast Allrounder: ಬಾಂಗ್ಲಾದೇಶ್ನ ಪ್ರಾಣ್ ಆಲೂ ಬಿಸ್ಕೆಟ್ಗೆ ಟಕ್ಕರ್ ನೀಡಲು ಐಟಿಸಿ ಸನ್ಫೀಸ್ಟ್ನ ಚಟ್ಪಟ ಮಸಾಲ
Published On - 5:51 pm, Thu, 30 September 21