ನಗರದಲ್ಲಿ ರಾತ್ರಿ ಸುರಿದ ಮಳೆಗೆ ಕಂಠೀರವ ಕ್ರೀಡಾಂಗಣದ ಗೇಟುಗಳು ಜಲಾವೃತ, ಅಭ್ಯಾಸಕ್ಕೆ ಬಂದೋರು ವಾಪಸ್
ಮಳೆಯಾದಾಗ ಕ್ರೀಡಾಂಗಣದೊಳಗೆ ಹರಿದು ಬರುವ ನೀರು ಹೊರಗೆ ಹೊಗಲು ಔಟ್ಲೆಟ್ ಗಳನ್ನು ಕಲ್ಪಿಸಿಲ್ಲ ಎಂದು ಭಾಸವಾಗುತ್ತಿದೆ. ಕ್ರೀಡಾಗಂಣವನ್ನು ಈ ಅವಸ್ಥೆಯಲ್ಲಿ ಬಿಡೋದು ಅವಮಾನಕರ. ಕಂಠೀರವ ಕ್ರೀಡಾಂಗಣ ತಗ್ಗು ಪ್ರದೇಶದಲ್ಲಿರುವುದರಿಂದ ನೀರು ನುಗ್ಗೋದು ಅಸ್ವಾಭಾವಿಕವೇನಲ್ಲ. ನಗರದ ಐಕಾನಿಕ್ ಮತ್ತು ಲ್ಯಾಂಡ್ ಮಾರ್ಕ್ ಎನಿಸಿಕೊಂಡಿರುವ ಜಾಗಗಳನ್ನು ಈ ಸ್ಥಿತಿಯಲ್ಲಿ ಹೇಗೆ ನೋಡೋದು ಸ್ವಾಮೀ?
ಬೆಂಗಳೂರು, ಮೇ 19: ಬೇರೆ ಯಾರಾದರೂ ನಂಬಲಿ ಬಿಡಲಿ, ಬೆಂಗಳೂರು ಮತ್ತು ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಗಾಲ (monsoon season) ಶುರುವಾಗಿದೆ. ಕಳೆದೊಂದು ವಾರದಿಂದ ರಾಜಧಾನಿ ಮತ್ತು ಇತರ ಕೆಲಭಾಗಗಳಲ್ಲಿ ಮಳೆ ಪ್ರತಿದಿನ ಸುರಿಯುತ್ತಿದೆ. ನಿನ್ನೆ ರಾತ್ರಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ ಮತ್ತು ಎಂದಿನಂತೆ ಜನ ಪರದಾಡುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ನೀರು ನುಗ್ಗಿದೆ. ಕ್ರೀಡಾಂಗಣಕ್ಕಿರುವ 4 ಪ್ರವೇಶ ದ್ವಾರಗಳ ಪೈಕಿ ಎರಡು ಜಲಾವೃತಗೊಂಡಿವೆ. ಬೆಳಗ್ಗೆ ಅಭ್ಯಾಸಕ್ಕೆಂದು ಬರುವ ಅಥ್ಲೀಟ್, ಹವ್ಯಾಸಿಗಳು ವಾಪಸ್ಸು ಹೋಗಿದ್ದಾರೆ.
ಇದನ್ನೂ ಓದಿ: Bangalore Rains: ಮಳೆ ಅಬ್ಬರಕ್ಕೆ ಶಾಂತಿನಗರದಲ್ಲಿ ಭಾಗಶಃ ಮುಳುಗಿದ ಬಸ್ಗಳು, ಡಿಪೋದಿಂದ ಹೊರ ತೆಗೆಯಲಾಗದೆ ಹೈರಾಣಾದ ಸಿಬ್ಬಂದಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos