Bangalore Rains: ಮಳೆ ಅಬ್ಬರಕ್ಕೆ ಶಾಂತಿನಗರದಲ್ಲಿ ಭಾಗಶಃ ಮುಳುಗಿದ ಬಸ್ಗಳು, ಡಿಪೋದಿಂದ ಹೊರ ತೆಗೆಯಲಾಗದೆ ಹೈರಾಣಾದ ಸಿಬ್ಬಂದಿ
ಬೆಂಗಳೂರು ಮಳೆ: ಒಂದೆರಡು ದಿನ ಸುರಿದ ಮಳೆ ಬೆಂಗಳೂರಿನಲ್ಲಿ ಭಾರಿ ಅನಾಹುತಗಳನ್ನೇ ಸೃಷ್ಟಿಸಿದೆ. ಭಾನುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರಿನ ಶಾಂತಿನಗರ ಬಸ್ ಡಿಪೋ ಜಲಾವೃತಗೊಂಡಿದೆ. ಬಿಎಂಟಿಸಿ ಬಸ್ಗಳು ಭಾಗಶಃ ಮುಳುಗಡೆಯಾಗಿದ್ದರಿಂದ ಬೆಳಗ್ಗೆ ಕರ್ತವ್ಯಕ್ಕೆಂದು ಬಂದ ಸಿಬ್ಬಂದಿ ಬಸ್ಗಳನ್ನು ಹೊರ ತೆಗೆಯಲಾಗದೆ ಒದ್ದಾಡಿದರು. ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಮೇ 19: ಬೆಂಗಳೂರು ನಗರದಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ವರುಣಾರ್ಭಟಕ್ಕೆ ಶಾಂತಿನಗರ ಬಸ್ ಡಿಪೋದಲ್ಲಿ ಬಿಎಂಟಿಸಿ ಬಸ್ಗಳು ಭಾಗಶಃ ಮುಳುಗಿವೆ. ಶಾಂತಿ ನಗರ ಬಸ್ ಡಿಪೋ ಪೂರ್ತಿ ಜಲಾವೃತಗೊಂಡಿದೆ. ಇದರಿಂದಾಗಿ ಬೆಳಗ್ಗೆ ಡ್ಯೂಟಿಗೆ ಬಂದ ಬಿಎಂಟಿಸಿ ಸಿಬ್ಬಂದಿಗೆ ಶಾಕ್ ಎದುರಾಗಿದೆ. ಡಿಪೋದಿಂದ ಬಸ್ ಹೊರ ತೆಗೆಯಲಾಗದೆ ಸಂಕಷ್ಟ ಅನುಭವಿಸಬೇಕಾಗಿ ಬಂತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

