ನೆಲಮಂಗಲ: ಬೆಂಗಳೂರು ತುಮಕೂರು ಹೆದ್ದಾರಿ ಜಲಾವೃತ, ನೀರಿನಲ್ಲಿ ಬಂದ ಬೈಕ್ ಸವಾರನ ಸ್ಥಿತಿ ನೋಡಿ!
ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸತತ ಮೂರು ಗಂಟೆಗಳಿಂದ ಮಳೆ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡಿವೆ. ದಾಸರಹಳ್ಳಿ, ಬಾಗಲಗುಂಟೆ, ಹೆಸರಘಟ್ಟ, ಮಾದನಾಯಕನಹಳ್ಳಿಯಲ್ಲಿ ಭಾರಿ ಮಳೆಯಾಗಿದೆ. ನಿರಂತರ ಮಳೆಯಿಂದ ಅರ್ಕಾವತಿ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ನೆಲಮಂಗಲದಲ್ಲಿ ಸರ್ವೀಸ್ ರಸ್ತೆ, ಹೆದ್ದಾರಿ ಜಲಾವೃತಗೊಂಡಿದೆ. ವಿಡಿಯೋ ಇಲ್ಲಿದೆ.
ನೆಲಮಂಗಲ, ಮೇ 19: ಕೆಲವು ಗಂಟೆಗಳ ಕಾಲ ಸತತ ಸುರಿದ ಮಳೆಯಿಂದ ನೆಲಮಂಗಲ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಅಂಡರ್ಪಾಸ್ಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಜೈನ್ ಟೆಂಪಲ್ ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ವಿಡಿಯೋ: ಮಂಜುನಾಥ್, ಟಿವಿ9, ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ