Rakesh Jhunjhunwala: ಈ ಹಿರಿಯ ಹೂಡಿಕೆದಾರರ ಇನ್ವೆಸ್ಟ್​ಮೆಂಟ್​ನಿಂದ 9 ದಿನದಲ್ಲಿ ರೂ. 49.50 ಕೋಟಿ ಲಾಭ

ಹಿರಿಯ ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾ ಅವರು ತಮ್ಮ ಹೂಡಿಕೆಗೆ ಪ್ರತಿಯಾಗಿ ಈ ಷೇರಿನಿಂದ 9 ದಿನದಲ್ಲಿ 49.50 ಕೋಟಿ ರೂಪಾಯಿ ಲಾಭ ಮಾಡಿದ್ದಾರೆ.

Rakesh Jhunjhunwala: ಈ ಹಿರಿಯ ಹೂಡಿಕೆದಾರರ ಇನ್ವೆಸ್ಟ್​ಮೆಂಟ್​ನಿಂದ 9 ದಿನದಲ್ಲಿ ರೂ. 49.50 ಕೋಟಿ ಲಾಭ
ರಾಕೇಶ್ ಜುಂಜುನ್​ವಾಲಾ (ಸಂಗ್ರಹ ಚಿತ್ರ)

ಝೀ ಎಂಟರ್​ಟೇನ್​ಮೆಂಟ್ (Zee Entertainment) ಸ್ಟಾಕ್ ಮೇಲ್ಮುಖವಾಗಿ ಸಾಗುತ್ತಿರುವ ಟ್ರೆಂಡ್​ನಲ್ಲಿದೆ. ಇದೇ ಷೇರಿನಲ್ಲಿ ಹೂಡಿಕೆ ಮಾಡಿರುವ ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) 49.50 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಜುಂಜುನ್​ವಾಲಾ ಸೆಪ್ಟೆಂಬರ್ 14ರಂದು ಝೀ ಎಂಟರ್​ಟೇನ್​ಮೆಂಟ್​ನ 50 ಲಕ್ಷ ಷೇರುಗಳನ್ನು ಖರೀದಿಸಿದರು. ಅತಿದೊಡ್ಡ ಸಾಂಸ್ಥಿಕ ಷೇರುದಾರರಾದ ಇನ್ವೆಸ್ಕೋ ಒಪೆನ್‌ಹೈಮರ್​ನಿಂದ ಸಿಇಒ ಪುನಿತ್ ಗೋಯೆಂಕಾ ಅವರನ್ನು ಪದಚ್ಯುತಗೊಳಿಸಲು ಮತ್ತು ಜೀ ಎಂಟರ್‌ಟೈನ್‌ಮೆಂಟ್ ಮಂಡಳಿಯ ಪುನರ್​ರಚನೆಗೆ ಕರೆ ನೀಡಿದ ದಿನದಂದೇ ಷೇರು ಖರೀದಿಸಿದರು. ಜುಂಜುನ್‌ವಾಲಾ ಸೆ.14ರಂದು ಈ ಷೇರು ಖರೀದಿಸಿದ್ದು ರೂ. 220ರ ದರದಲ್ಲಿ. ಸೆ. 23ರ ಗುರುವಾರ ದಿನಾಂತ್ಯಕ್ಕೆ ಈ ಷೇರಿನ ಬೆಲೆ 318.95 ರೂಪಾಯಿ ಇದೆ.

ಅಂದರೆ ಪ್ರತಿ ಷೇರಿಗೆ 99 ರೂಪಾಯಿ ಲಾಭ ಸಿಕ್ಕಿದೆ. ರಾಕೇಶ್​ ಜುಂಜುನ್​ವಾಲಾ ಖರೀದಿ ಮಾಡಿದ್ದದ್ದು 50 ಲಕ್ಷ ಷೇರುಗಳನ್ನು ಬರೀ ಎಂಟೇ ಟ್ರೇಡಿಂಗ್ ಸೆಷನ್​ನಲ್ಲಿ ಜುಂಜುನ್​ವಾಲಾಗೆ ಬಂದಿರುವ ಒಟ್ಟು ಲಾಭ 50,00,000 X 99= 49,50,00,000 (49.50 ಕೋಟಿ) ರೂಪಾಯಿ. 9 ದಿನದಲ್ಲಿ ಬಂದಿರುವ ಲಾಭದ ಪ್ರಮಾಣವನ್ನು ಶೇಕಡಾವಾರು ಎಷ್ಟು ಅಂತ ನೋಡುವುದಾದರೆ ಶೇ 45ರಷ್ಟಾಗುತ್ತದೆ. ಇದನ್ನು ವಾರ್ಷಿಕ ಲೆಕ್ಕಾಚಾರಕ್ಕೆ ಹೇಳುವುದಾದರೆ ಶೇ 1825ರಷ್ಟಾಗುತ್ತದೆ. ನಿಮಗೆ ಗೊತ್ತಾ? ಈ ವರ್ಷ ಇಲ್ಲಿಯ ತನಕ ನಿಫ್ಟಿ ಶೇ 26.43ರಷ್ಟು ರಿಟರ್ನ್ಸ್ ನೀಡಿದ್ದು, ಕಳೆದ ಒಂದು ವರ್ಷದಿಂದ ಇಲ್ಲಿಯ ತನಕ ಶೇ 59.22ರಷ್ಟು ರಿಟರ್ನ್ಸ್ ನೀಡಿದೆ. ಇಂಥ ಹೂಡಿಕೆ ಅವಕಾಶ ಸಿಗುವುದು ಅಪರೂಪ. ಹೂಡಿಕೆದಾರರು ಕ್ಯಾಲ್ಕುಲೇಟೆಡ್ ಅಪಾಯ ತೆಗೆದುಕೊಳ್ಳಲು ಸಿದ್ಧರಿರಬೇಕು. ಅಂದಹಾಗೆ ಈ ರೀತಿಯ ನಡೆಗಳಿಗೆ ರಾಕೇಶ್​ ಜುಂಜುನ್​ವಾಲಾ ಕಳೆದ ಹಲವು ವರ್ಷಗಳಿಂದ ಹೆಸರಾಗಿದ್ದಾರೆ.

ಜುಂಜುನ್​ವಾಲಾ ಮಾತ್ರವಲ್ಲ, ಇತರ ಕೆಲವು ಫಂಡ್​ ಮ್ಯಾನೇಜರ್​ಗಳು ಕೂಡ ಸೆ.14ರಂದು ಝೀ ಎಂಟರ್​ಟೇನ್​ಮೆಂಟ್​ ಷೇರು ಖರೀದಿಸಿದ್ದರು. ಬ್ರೋಕರೇಜ್​ಗಳು ಶಿಫಾರಸು ಮಾಡಿದಂತೆ ಹೆಚ್ಚಿನ ಸಾಂಸ್ಥಿಕ ಹೂಡಿಕೆದಾರರು ಸಹ ಕೊಂಡರು. ಕಂಪೆನಿಗೆ ಅಗತ್ಯ ಇರುವ ಬಂಡವಾಳ ಪೂರೈಕೆಗೆ ಸೋನಿ ಪಿಕ್ಚರ್ಸ್ ಮುಂದಾಗಿದೆ. ಇದರಿಂದ ಝೀ ಎಂಟರ್​ಟೇನ್​ಮೆಂಟ್​ನ ಡಿಜಿಟಲ್ ವ್ವವಹಾರದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ. ಲಾಭದ ದೃಷ್ಟಿಯಿಂದ ನೋಡಿದರೆ FY21ರಲ್ಲಿ ಸೋನಿ ಪಿಕ್ಚರ್ಸ್ 582 ಕೋಟಿ ರೂ. ಲಾಭ ಮಾಡಿದೆ. ಅದಕ್ಕೂ ಮುಂಚೆ 896 ಕೋಟಿ ಲಾಭ ಮಾಡಿತ್ತು. ಒಂದು FY23ರಲ್ಲಿ ಆ ಸಂಖ್ಯೆ ಪುನರಾವರ್ತನೆ ಆದಲ್ಲಿ ಝೀ ಹಾಗೂ ಸೋನಿ ಕಂಪೆನಿಯ ಒಟ್ಟು ಲಾಭ 2500 ಕೋಟಿ ರೂ. ಹತ್ತಿರ ಆಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಶೇ 10ರಷ್ಟು ಲಾಭದ ಪ್ರಮಾಣ ಹೆಚ್ಚಾದರೂ 2750 ಕೋಟಿ ಲಾಭ ಬರುತ್ತದೆ.

ಇದನ್ನೂ ಓದಿ: Sensex Stocks: ಸೆನ್ಸೆಕ್ಸ್ ಲಿಸ್ಟೆಡ್ ಷೇರುಗಳ ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರೂಪಾಯಿ ಏರಿಕೆ

(Rakesh Jhunjhunwala Investment Gains Profit Of Rs 49.50 Crore Within 9 Days Here Is The Details)

Read Full Article

Click on your DTH Provider to Add TV9 Kannada