AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bitcoin Price Today: ಎವರ್​ಗ್ರ್ಯಾಂಡ್​ ಹೊಡೆತಕ್ಕೆ ಬಿಟ್​ಕಾಯಿನ್​ ಸೇರಿದಂತೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯೇ ಥಂಡಾ ಥಂಡಾ

ಚೀನಾದ ರಿಯಲ್​ ಎಸ್ಟೇಟ್​ ಕಂಪೆನಿಯಾದ ಎವರ್​ಗ್ರ್ಯಾಂಡ್​ ಬಿಕ್ಕಟ್ಟು ಆರ್ಥಿಕ ಜಗತ್ತಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ಕ್ರಿಪ್ಟೋಕರೆನ್ಸಿ ಕೂಡ ಹೊರತಾಗಿಲ್ಲ.

Bitcoin Price Today: ಎವರ್​ಗ್ರ್ಯಾಂಡ್​ ಹೊಡೆತಕ್ಕೆ ಬಿಟ್​ಕಾಯಿನ್​ ಸೇರಿದಂತೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯೇ ಥಂಡಾ ಥಂಡಾ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Sep 23, 2021 | 12:52 PM

Share

ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್​ ದರದಲ್ಲಿ ಇಳಿಕೆಯಾಗಿ, 42,155 ಯುಎಸ್​ಡಿಯಲ್ಲಿ ವಹಿವಾಟು ನಡೆಸಿತು. ಕಳೆದ 24 ಗಂಟೆಯಲ್ಲಿ ಶೇ 1.68ರಷ್ಟು ಕುಸಿತ ಕಂಡಿದೆ. ಈ ಕ್ರಿಪ್ಟೋಕರೆನ್ಸಿಯ ಜಾಗತಿಕ ಮಾರುಕಟ್ಟೆ ಮೌಲ್ಯ 789.89 ಬಿಲಿಯನ್ ಯುಎಸ್​ಡಿ ಇದೆ ಎಂದು coinsmarketcap.com ತಿಳಿಸಿದೆ. ಚೀನಾದ ರಿಯಲ್​ ಎಸ್ಟೇಟ್ ಕಂಪೆನಿ ಎವರ್​ಗ್ರ್ಯಾಂಡ್​ ಬಿಕ್ಕಟ್ಟಿನ ಪರಿಣಾಮ ಈ ಇಳಿಕೆ ಮೇಲೆ ಆಗಿದೆ. ಅಂದಹಾಗೆ ಎವರ್​ಗ್ರ್ಯಾಂಡ್​ ಪ್ರಭಾವ ಜಾಗತಿಕವಾಗಿ ಎಲ್ಲ ಮಾರ್ಕೆಟ್​ ಮೇಲೂ ಆಗಿದೆ. ಈ ಕುಸಿತದ ಹಾದಿಯು ಬಿಟ್​ಕಾಯಿನ್​ಗೆ ಮಾತ್ರ ಸೀಮಿತವಾಗಿಲ್ಲ. ಇತರ ಕ್ರಿಪ್ಟೋಕರೆನ್ಸಿಗಳಾದ ಎಥೆರಿಯಂ, Dogecoin ಮುಂತಾದವುಗಳ ಸಹ ಬೆಲೆ ಕಳೆದುಕೊಂಡಿವೆ. ಬಿಟ್​ಕಾಯಿನ್​ನ ಪ್ರತಿಸ್ಪರ್ಧಿಯಾದ ಎಥೆರಿಯಂ ಶೇ 5.23ರಷ್ಟು ಕುಸಿತ ಕಂಡು, 2,870.42 ಯುಎಸ್​ಡಿಯಲ್ಲಿ ವಹಿವಾಟು ನಡೆಸುತ್ತಿತ್ತು. ಮತ್ತು ಇದರ ಜಾಗತಿಕ ಮಾರುಕಟ್ಟೆ ಮೌಲ್ಯ 336.02 ಬಿಲಿಯನ್ ಇದೆ. ಇನ್ನು ಕಾರ್ಡಾನೋ ಬಗ್ಗೆ ಹೇಳುವುದಾದರೆ ಶೇ 4.31ರಷ್ಟು ಇಳಿದು, 2.05 ಡಾಲರ್​ನಲ್ಲಿ ವ್ಯವಹಾರ ಮಾಡುತ್ತಿದೆ. ಈ ಕ್ರಿಪ್ಟೋಕರೆನ್ಸಿ ಕಳೆದ ಒಂದು ವಾರದಲ್ಲಿ ಶೇ 14.32ರಷ್ಟು ಕುಸಿದಿದೆ. ಇದೇ ಹಾದಿಯನ್ನು ಅನುಸರಿಸಿರುವ ಬಿನಾನ್ಸ್ ಕಾಯಿನ್ ಶೇ 3.05ರಷ್ಟು ಇಳಿಕೆ ಕಂಡು, 354.96 ಯುಎಸ್​ಡಿಯಲ್ಲಿ ವಹಿವಾಟು ನಡೆಸಿದೆ. ಆದರೆ ಕಳೆದ ಒಂದು ವಾರದಲ್ಲಿ ಶೇ 14.48ರಷ್ಟು ಕುಸಿತ ಕಂಡಿದೆ.

“ಚೀನಾದ ಎವರ್​ಗ್ರ್ಯಾಂಡ್​ ಪ್ರಾಪರ್ಟಿ ಸಮೂಹದ ವೈಫಲ್ಯಕ್ಕೆ ಕಳೆದ 24 ಗಂಟೆಯಲ್ಲಿ ಮಾರುಕಟ್ಟೆಗಳು ಅಲುಗಾಡುತ್ತಿವೆ. ಅಂದಹಾಗೆ ಈಕ್ವಿಟಿ ಮಾರುಕಟ್ಟೆ ಹಾಗೂ ಕ್ರಿಪ್ಟೋ ಮಾರುಕಟ್ಟೆಗೂ ಸಂಬಂಧ ಇದ್ದು, ರೀಟೇಲ್ ಹೂಡಿಕೆದಾರರು ಭಾರೀ ಏರಿಳಿತದ ಕ್ರಿಪ್ಟೋದಿಂದ ವೇಗವಾಗಿ ಹೊರಬರುತ್ತಿದ್ದಾರೆ. ಎಥೆರಿಯಂ 3000 ಯುಎಸ್​ಡಿ ಮಟ್ಟದಿಂದ ಕೆಳಗೆ ಇಳಿದಿದೆ. ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ 42,000 ಯುಎಸ್​ಡಿ ಮಟ್ಟದಲ್ಲಿ ಸುತ್ತಾಡುತ್ತಿದೆ. ಇತರ ಸಣ್ಣ-ಪುಟ್ಟ ಪರ್ಯಾಯ ಆಯ್ಕೆಯ ಕ್ರಿಪ್ಟೋಕರೆನ್ಸಿಗಳು ಕೂಡ ಇಳಿಕೆ ಹಾದಿಯಲ್ಲೇ ಇವೆ,” ಎನ್ನುತ್ತಾರೆ ವಿಶ್ಲೇಷಕರು.

ಬಿಟ್​ಕಾಯಿನ್​ಗೆ 40,000 ಯುಎಸ್​ಡಿ ಪ್ರಮುಖವಾದ ಸಪೋರ್ಟ್​ ಮಟ್ಟ ಮತ್ತು ಎಥೆರಿಯಂಗೆ 2850 ಯುಎಸ್​ಡಿ. ಜಾಗತಿಕ ಮಟ್ಟದಲ್ಲಿ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ ಶೇ 4.47ರಷ್ಟು ಕುಸಿದಿದ್ದು, 1.86 ಲಕ್ಷ ಕೋಟಿ ಡಾಲರ್ ಸಮೀಪ ಇದೆ. ಈ ಹಿಂದಿನ ದಿನದ ವಹಿವಾಟು ಪರಿಮಾಣವನ್ನು ಹೋಲಿಸಿದರೆ ಕಡಿಮೆ ಇದೆ. ಭಯದಲ್ಲಿ ಮಾರಾಟ ಮಾಡುವ ಪ್ರವೃತ್ತಿಯಿಂದ ಹೊರಬಂದಿರುವುದು ಮಾತ್ರ ಗೊತ್ತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಚೀನಾದ ಲೆಹ್ಮನ್ ಬ್ರದರ್ಸ್ ಎಂದು ಕರೆಸಿಕೊಂಡಿರುವ ಎವರ್​ಗ್ರ್ಯಾಂಡ್​ ಬಿಕ್ಕಟ್ಟು ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಚೀನಾ ಕಂಪೆನಿಯ ಬಿಕ್ಕಟ್ಟು ವಿಶ್ವದಾದ್ಯಂತ ಷೇರು ಮಾರುಕಟ್ಟೆಗಳ ಅನಿಶ್ಚಿತತೆಗೂ ಕಾರಣ ಆಗಿದೆ.

ಪ್ರಮುಖ ಕ್ರಿಪ್ಟೋಕರೆನ್ಸಿಗಳ ದರದ ವಿವರ ಸೆ.19ಕ್ಕೆ ಅನ್ವಯಿಸುವಂತೆ ಹೀಗಿದೆ: ಬಿಟ್​ಕಾಯಿನ್​- 42,155 ಯುಎಸ್​ಡಿ (ಶೇ -1.68) ಕಳೆದ 24 ಗಂಟೆಯಲ್ಲಿ ಎಥೆರ್ – 2,870 ಯುಎಸ್​ಡಿ (ಶೇ -5.23) ಕಳೆದ 24 ಗಂಟೆಯಲ್ಲಿ ಕಾರ್ಡಾನೋ- 2.05 ಯುಎಸ್​ಡಿ (ಶೇ -4.31) ಕಳೆದ 24 ಗಂಟೆಯಲ್ಲಿ ಬಿನಾನ್ಸ್ ಕಾಯಿನ್- 354.96 ಯುಎಸ್​ಡಿ (ಶೇ -3.05) ಕಳೆದ 24 ಗಂಟೆಯಲ್ಲಿ Tether – 1.00 ಯುಎಸ್​ಡಿ (ಶೇ 0.01) ಕಳೆದ 24 ಗಂಟೆಯಲ್ಲಿ XRP- 0.9078 ಯುಎಸ್​ಡಿ (ಶೇ -3.99) ಕಳೆದ 24 ಗಂಟೆಯಲ್ಲಿ ಸೊಲಾನ- 131.18 ಯುಎಸ್​ಡಿ (ಶೇ -6.01) ಕಳೆದ 24 ಗಂಟೆಯಲ್ಲಿ Polkadot- 27.62 ಯುಎಸ್​ಡಿ (ಶೇ -5.99) ಕಳೆದ 24 ಗಂಟೆಯಲ್ಲಿ Dogecoin – 0.2066 ಯುಎಸ್​ಡಿ (ಶೇ -1.84) ಕಳೆದ 24 ಗಂಟೆಯಲ್ಲಿ

ಇದನ್ನೂ ಓದಿ: Evergrande Collapse: 22.15 ಲಕ್ಷ ಕೋಟಿ ರೂ. ಚೀನಾದ ಎವರ್​ಗ್ರ್ಯಾಂಡ್ ರಿಯಲ್​ ಎಸ್ಟೇಟ್ ಕುಸಿತದಿಂದ ಜಗತ್ತೇ ತಲ್ಲಣ

(Cryptocurrencies Including Bitcoin Hit Hard By China’s Evergrande Crisis Here Is The Today Price Of Major Cryptos)

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!