AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರ; ಬೆಳ್ಳಿ ಬೆಲೆಯಲ್ಲಿ ಇಳಿಕೆ

Gold Rate Today: ಚಿನ್ನ ಖರೀದಿಸುವ ಆಸೆ ಇದ್ದಾಗ ಆಭರಣಗಳ ದರ ಇಳಿಕೆಯತ್ತ ಸಾಗಿರಲಿ ಎಂಬ ನಿರೀಕ್ಷೆ ತಪ್ಪೇನಲ್ಲ. ಹಾಗಿರುವಾಗ ಇಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಸಂಪೂರ್ಣ ವಿವರ ಈ ಕೆಳಗಿನಂತಿದೆ ಪರಿಶೀಲಿಸಿ.

Gold Price Today: ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರ; ಬೆಳ್ಳಿ ಬೆಲೆಯಲ್ಲಿ ಇಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on:Oct 12, 2021 | 7:36 AM

Gold and Silver Price Today | ಬೆಂಗಳೂರು: ಚಿನ್ನ ಕೊಳ್ಳುವ ಸಮಯದಲ್ಲಿ ದರ ಇಳಿಕೆಯ ಹಾದಿ ಹಿಡಿದಿದ್ದರೆ ಗ್ರಾಹಕರಿಗೂ ಸಂತೋಷ. ಕಡಿಮೆ ಬೆಲೆ ಇರುವಾಗಲೇ ಚಿನ್ನ ಖರೀದಿಸೋಣ ಎಂದು ಕಾದು ಕುಳಿತವರೂ ಇರುತ್ತಾರೆ. ಹಾಗಾಗಿಯೇ ಪ್ರತಿನಿತ್ಯ ಚಿನ್ನ (Gold price), ಬೆಳ್ಳಿ ಬೆಲೆ (Silver Price) ಎಷ್ಟಿದೆ? ಇಂದು ಚಿನ್ನದ ಅಭರಣಗಳನ್ನು ಖರೀದಿಸಲು ಸೂಕ್ತವೇ? ಎಂಬೆಲ್ಲಾ ಕುರಿತಾಗಿ ಕುತೂಹಲ ಕೆರಳುತ್ತದೆ. ಹೀಗಿರುವಾಗ ಇಂದು (ಅಕ್ಟೋಬರ್ 12, ಮಂಗಳವಾರ) ಚಿನ್ನ, ಬೆಳ್ಳಿ ದರ ಯಾವ ಯಾವ ನಗರಗಳಲ್ಲಿ ಎಷ್ಟಿದೆ? ಎಂಬ ವಿವರ ಈ ಕೆಳಗಿನಂತಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,900 ರೂಪಾಯಿ ಇದೆ. ಅದೇ ರೀತಿ 100 ಗ್ರಾಂ ಚಿನ್ನಕ್ಕೆ 4,39,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಯಾವುದೇ ಏರಿಳಿತ ಕಂಡು ಬಂದಿಲ್ಲ. ಇನ್ನು, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,890 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,78,900 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ದರದಲ್ಲಿ ಇಂದೂ ಸಹ ಕೊಂಚ ಇಳಿಕೆ ಆಗಿದೆ. ಕೆಜಿ ಬೆಳ್ಳಿಗೆ 61,700 ರೂಪಾಯಿ ನಿಗದಿಯಾಗಿದೆ. ಸುಮಾರು 300 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಚೆನ್ನೈನಲ್ಲಿ ಇಂದು ಚಿನ್ನದ ದರ ಕೊಂಚ ಪ್ರಮಾಣದಲ್ಲಿ ಇಳಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,190 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,41,900 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,210 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,84,200 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,100 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 65,800 ರೂಪಾಯಿ ನಿಗದಿಯಾಗಿದೆ. ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಕಳೆದ ಕೆಲವು ದಿನಗಳಿಂದ ಗಮನಿಸಿದಾಗ ಚಿನ್ನದ ದರ ಕೆಲವೆಡೆ ಸ್ಥಿರವಾಗಿಯೇ ಇದೆ. ಬೆಳ್ಳಿ ದರದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಇನ್ನು ಕೆಲವೆಡೆ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಮದುವೆ ಸಮಾರಂಭಗಳಿಗಾಗಿ ಚಿನ್ನ, ಬೆಳ್ಳಿಯ ಆಭರಣಗಳನ್ನು ಖರೀಸುವುದು ಪ್ಲ್ಯಾನ್​ ಮಾಡಿದ್ದರೆ, ನೀವು ಅದೆಷ್ಟೋ ವರ್ಷಗಳಿಂದ ಕೂಡಿಟ್ಟ ಹಣದಲ್ಲಿ ಚಿನ್ನ ಕೊಳ್ಳಬಹುದು ಅಂದನಿಸಿದರೆ ಆ ಕುರಿತಾಗಿ ಯೋಚಿಸಿ.

ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,900 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,39,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,890 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,78,900 ರೂಪಾಯಿ ನಿಗದಿ ಆಗಿದೆ. ಇನ್ನು, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 65,800 ರೂಪಾಯಿ ನಿಗದಿಯಾಗಿದೆ. ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ:

Gold Price Today: ಇಂದು ಚಿನ್ನದ ದರದಲ್ಲಿ ಇಳಿಕೆ; ಚಂದದ ಕಿವಿಯೋಲೆ ಖರೀದಿಸುವ ಆಸೆ ಇದ್ದರೆ ಆಭರಣದ ಬೆಲೆ ಎಷ್ಟಿದೆ ಗಮನಿಸಿ

Gold Price Today: ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಯೋಚಿಸಿದ್ದರೆ ಇಂದಿನ ದರ ವಿವರ ಪರಿಶೀಲಿಸಿ

Published On - 7:17 am, Tue, 12 October 21

ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ