AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ, ಬೆಳ್ಳಿ ಬೆಲೆ ಸ್ಥಿರ: ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Gold Rate Today: ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,900 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,39,000 ರೂಪಾಯಿಗೆ ಏರಿಕೆ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,000 ರೂಪಾಯಿಯಷ್ಟು ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,890 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,78,900 ರೂಪಾಯಿ ನಿಗದಿಯಾಗಿದೆ.

Gold Price Today: ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ, ಬೆಳ್ಳಿ ಬೆಲೆ ಸ್ಥಿರ: ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?
ಸಂಗ್ರಹ ಚಿತ್ರ
Follow us
TV9 Web
| Updated By: preethi shettigar

Updated on:Oct 09, 2021 | 8:01 AM

Gold and Silver Price Today | ಬೆಂಗಳೂರು: ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಚಿನ್ನ, ಬೆಳ್ಳಿ ದರ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಆದರೂ ಸಹ ಚಿನ್ನದ ದರ (Gold Price) ಇಳಿಕೆಯತ್ತ ಸಾಗಿದ್ದಾಗಲೇ ಆಭರಣ ಖರೀದಿಸಬೇಕು ಎಂಬ ಆಸೆ ಕೆಲವರದ್ದು. ನಿನ್ನೆ ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಬೆಳ್ಳಿ ದರದಲ್ಲಿ (Silver Price) ಸ್ಥಿರತೆ ಕಾಯ್ದುಕೊಂಡಿದೆ. ಇಂದು (ಅಕ್ಟೋಬರ್ 9, ಶನಿವಾರ) ಚಿನ್ನದ ದರ ಏರಿಕೆ ಆಗಿದೆ. ಬೆಳ್ಳಿ ಬೆಲೆ ಸ್ಥಿರವಾಗಿದೆ.

ಚಿನ್ನ ಖರೀದಿಸಲು ಪ್ಲ್ಯಾನ್ ಮಾಡಿದ್ದಾಗ ದರ ಎಷ್ಟಿದೆ ಎಂಬ ಕುತೂಹಲ ಇರುವುದು ಸಾಮಾನ್ಯ. ಹಾಗಿರುವಾಗ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ? ದೈನಂದಿನ ದರ ಬದಲಾವಣೆಯಲ್ಲಿ ಏರಿಕೆಯಾಗಿದೆಯೋ? ಇಳಿದಿದೆಯೋ? ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರವೆಷ್ಟು? ಎಂಬೆಲ್ಲಾ ಮಾಹಿತಿಗಳು ಈ ಕೆಳಗಿನಂತಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,900 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,39,000 ರೂಪಾಯಿಗೆ ಏರಿಕೆ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,000 ರೂಪಾಯಿಯಷ್ಟು ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,890 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,78,900 ರೂಪಾಯಿ ನಿಗದಿಯಾಗಿದೆ. ಸುಮಾರು 1,100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಬೆಳ್ಳಿ ದರ ಸ್ಥಿರವಾಗಿದ್ದು, ಕೆಜಿ ಬೆಳ್ಳಿ ಬೆಲೆ 61,200 ರೂಪಾಯಿ ನಿಗದಿ ಆಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,130 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,41,300 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,140 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,81,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಏರಿಳಿತದಲ್ಲಿ ಸುಮಾರು 2,00 ರೂಪಾಯಿ ಏರಿಕೆ ಕಂಡಿದೆ. ಕೆಜಿ ಬೆಳ್ಳಿ ಬೆಲೆ 65,200 ರೂಪಾಯಿ ಇದೆ.

ಬೆಂಗಳೂರು, ಚೆನ್ನೈ ಸೇರಿದಂತೆಯೇ ದೆಹಲಿ, ಜೈಪುರ ಮುಂಬೈ, ಹೈದರಾಬಾದ್ ಹೀಗೆ ಎಲ್ಲಾ ಕಡೆಗಳಲ್ಲಿಯೂ ಸಹ ಇಂದು ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಸ್ಥಿರವಾಗಿದೆ. ನವರಾತ್ರಿ ಹಬ್ಬ ನಡೆಯುತ್ತಿರುವುದರಿಂದ ಆಭರಣ ಖರೀದಿಸಲು ಮುಂದಾಗಿದ್ದರೆ, ದರ ವಿವರ ಪರಿಶೀಲಿಸಿ, ನೀವು ಕೂಡಿಟ್ಟ ಹಣದಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸಬಹುದು ಎಂದೆನಿಸಿದರೆ ಆ ಕುರಿತಾಗಿ ಯೋಚಿಸಿ.

ಇದನ್ನೂ ಓದಿ: Gold Price Today: ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ ಚಿನ್ನದ ದರ, ಬೆಳ್ಳಿ ಬೆಲೆ ಸ್ಥಿರ!

Gold Price Today: ಇಂದು ಚಿನ್ನದ ದರದಲ್ಲಿ ಇಳಿಕೆ; ಚಂದದ ಕಿವಿಯೋಲೆ ಖರೀದಿಸುವ ಆಸೆ ಇದ್ದರೆ ಆಭರಣದ ಬೆಲೆ ಎಷ್ಟಿದೆ ಗಮನಿಸಿ

Published On - 7:54 am, Sat, 9 October 21

ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ