AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu Local Body Election Result 2021 ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಶುರು

ಒಂಬತ್ತು ಜಿಲ್ಲೆಗಳಲ್ಲಿ 27,003 ಹುದ್ದೆಗಳಿಗೆ ಎರಡು ಹಂತಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಮತ ಎಣಿಕೆಯ ಇಡೀ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ.

Tamil Nadu Local Body Election Result 2021 ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಶುರು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 12, 2021 | 12:05 PM

Share

ಚೆನ್ನೈ: ತಮಿಳುನಾಡು ರಾಜ್ಯ ಚುನಾವಣಾ ಆಯೋಗವು ಮಂಗಳವಾರ ಬೆಳಿಗ್ಗೆ 8 ರಿಂದ 74 ಎಣಿಕೆ ಕೇಂದ್ರಗಳಲ್ಲಿ ಒಂಬತ್ತು ಮರುಸಂಘಟಿತ ಜಿಲ್ಲೆಗಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮತ ಎಣಿಕೆ ಆರಂಭಿಸಿತು. ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸುತ್ತದೆ. ಒಂಬತ್ತು ಜಿಲ್ಲೆಗಳಲ್ಲಿ 27,003 ಹುದ್ದೆಗಳಿಗೆ ಎರಡು ಹಂತಗಳಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಮತ ಎಣಿಕೆಯ ಇಡೀ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ. ಆಯೋಗವು ಮತ ಎಣಿಕೆಗಾಗಿ 31,245 ಅಧಿಕಾರಿಗಳನ್ನು ಮತ್ತು ಭದ್ರತಾ ವ್ಯವಸ್ಥೆಗಾಗಿ 6,228 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ಎಲ್ಲಾ 74 ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮೊದಲ ಹಂತದಲ್ಲಿ ಶೇ 77.4 ಮತದಾನ ದಾಖಲಾಗಿದ್ದು, ಎರಡನೇ ಹಂತದಲ್ಲಿ ಶೇ 78.5 ಮತದಾನ ದಾಖಲಾಗಿದೆ.

ಜಿಲ್ಲಾ ಪಂಚಾಯತ್ ವಾರ್ಡ್ ಸದಸ್ಯರು, ಪಂಚಾಯತ್ ಯೂನಿಯನ್ ವಾರ್ಡ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರು – ಎಣಿಕೆಯಲ್ಲಿ ತೊಡಗಿರುವ ಅಧಿಕಾರಿಗಳು ನಾಲ್ಕು ವಿಭಿನ್ನ ಹುದ್ದೆಗಳಿಗೆ ಮತಯಂತ್ರಗಳನ್ನು ವಿಂಗಡಿಸಲು ಆರಂಭಿಸಿದ್ದಾರೆ.

ವಿಂಗಡಿಸಲಾದ ಮತಪತ್ರಗಳನ್ನು 50ರ ಕಟ್ಟುಗಳಾಗಿ ಜೋಡಿಸಲಾಗುತ್ತದೆ ಮತ್ತು ಕಟ್ಟುಗಳನ್ನು ಅಭ್ಯರ್ಥಿಗಳು, ಅವರ ಏಜೆಂಟರು ಮತ್ತು ರಾಜ್ಯ ಚುನಾವಣಾ ಆಯೋಗದಿಂದ ವಿವರವಾದ ಎಣಿಕೆಗಾಗಿ ಅಧಿಕಾರ ಪಡೆದ ವ್ಯಕ್ತಿಗಳ ಸಮ್ಮುಖದಲ್ಲಿ ಎಣಿಕೆಯ ಕಣಕ್ಕೆ ಕೊಂಡೊಯ್ಯಲಾಗುತ್ತದೆ.

ಇದನ್ನೂ ಓದಿ: Jal Jeevan Mission ‘ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆಯಡಿ 8.3 ಕೋಟಿ ಗ್ರಾಮೀಣ ಮನೆಗಳು ಪೈಪ್ ನೀರು ಸಂಪರ್ಕ ಹೊಂದಿವೆ’

ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಜುಲೈ 23 ಟೀ, 24ರಂದು ಸಿಗರೇಟು ಗುಟ್ಕಾ ಮಾರಾಟ ಬಂದ್, 25 ರಂದು ಪ್ರತಿಭಟನೆ
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ಬಾಹ್ಯಾಕಾಶದಿಂದ ಪೆಸಿಫಿಕ್ ಮಹಾಸಾಗರಕ್ಕೆ ಇಳಿದ ಡ್ರ್ಯಾಗನ್ ಕ್ಯಾಪ್ಸುಲ್
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ