Jal Jeevan Mission ‘ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆಯಡಿ 8.3 ಕೋಟಿ ಗ್ರಾಮೀಣ ಮನೆಗಳು ಪೈಪ್ ನೀರು ಸಂಪರ್ಕ ಹೊಂದಿವೆ’

ಮೋದಿ ಸರ್ಕಾರದ ಬೃಹತ್ ಯೋಜನೆಗಳಲ್ಲೊಂದಾದ ಜಲ್ ಜೀವನ್ ಮಿಷನ್, 2019 ರಲ್ಲಿ ಆರಂಭವಾಗಿದ್ದು 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗೂ ನಲ್ಲಿ ನೀರಿನ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ.

Jal Jeevan Mission ‘ಕೇಂದ್ರ ಸರ್ಕಾರದ ಜಲ್ ಜೀವನ್ ಯೋಜನೆಯಡಿ 8.3 ಕೋಟಿ ಗ್ರಾಮೀಣ ಮನೆಗಳು ಪೈಪ್ ನೀರು ಸಂಪರ್ಕ ಹೊಂದಿವೆ’
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 12, 2021 | 11:39 AM

ದೆಹಲಿ: ಸರಿಸುಮಾರ 8.3 ಕೋಟಿ ಗ್ರಾಮೀಣ ಕುಟುಂಬಗಳು,ಅಥವಾ ದೇಶದ 19.2 ಕೋಟಿ ಗ್ರಾಮೀಣ ಕುಟುಂಬಗಳ ಶೇ 43ರಷ್ಟು ಕುಟುಂಬಗಳು, ಈಗ ಪ್ರಮುಖ ಜಲ್ ಜೀವನ್ ಮಿಷನ್ (Jal Jeevan Mission) ಅಡಿಯಲ್ಲಿ ಕುಡಿಯುವ ಪೈಪ್ ನೀರಿನ  ಸಂಪರ್ಕವನ್ನು ಹೊಂದಿವೆ. ಆದರೆ ಕಳಪೆ ಆರೋಗ್ಯ ಫಲಿತಾಂಶಗಳನ್ನು ಹೊಂದಿರುವ ಕೆಲವು ದೊಡ್ಡ ರಾಜ್ಯಗಳು ವ್ಯಾಪ್ತಿಯನ್ನು ವಿಸ್ತರಿಸಲು ನಿಧಾನವಾಗಿವೆ ಎಂದು ಅಧಿಕೃತ ಡೇಟಾ ಹೇಳಿದೆ. ಮೋದಿ ಸರ್ಕಾರದ ಬೃಹತ್ ಯೋಜನೆಗಳಲ್ಲೊಂದಾದ ಜಲ್ ಜೀವನ್ ಮಿಷನ್ 2019 ರಲ್ಲಿ ಆರಂಭವಾಗಿದ್ದು 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗೂ ನಲ್ಲಿ ನೀರಿನ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ವಿಶ್ವಸಂಸ್ಥೆಯ 17 ಸಮರ್ಥನೀಯ ಅಭಿವೃದ್ಧಿ ಗುರಿಗಳು ಅಥವಾ ಎಸ್‌ಡಿಜಿಗಳಲ್ಲಿ ಶುದ್ಧ ನೀರಿನ ಲಭ್ಯತೆಯೂ ಒಂದಾಗಿದೆ. ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇಲ್ಲಿಯವರೆಗೆ ಶೇ 100 ವ್ಯಾಪ್ತಿಯೊಂದಿಗೆ ಅಗ್ರಸ್ಥಾನದಲ್ಲಿವೆ ಎಂದು ಡೇಟಾ ತೋರಿಸುತ್ತದೆ. ಅವುಗಳೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಾಗರ್ ಹವೇಲಿ, ಗೋವಾ, ತೆಲಂಗಾಣ, ಪುದುಚೇರಿ ಮತ್ತು ಹರ್ಯಾಣ. ನಿಗದಿಗಿಂತ ಮುಂಚಿತವಾಗಿ ಗುರಿಯನ್ನು ಸಾಧಿಸಿದ ಇತ್ತೀಚಿನ ರಾಜ್ಯವಾಗಿದೆ ಹರ್ಯಾಣ.

ಮಿಷನ್‌ನ ಗಡುವು ಎರಡು ವರ್ಷಗಳಿಗಿಂತಲೂ ದೂರವಿದ್ದರೂ ಕೆಲವು ದೊಡ್ಡ ರಾಜ್ಯಗಳು ಒಟ್ಟು ಗ್ರಾಮೀಣ ಕುಟುಂಬಗಳ ಕಾಲು ಭಾಗಕ್ಕಿಂತ ಕಡಿಮೆ ವ್ಯಾಪ್ತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದು ಡೇಟಾ ತೋರಿಸುತ್ತದೆ.

ಅವುಗಳಲ್ಲಿ ಉತ್ತರ ಪ್ರದೇಶವು ತನ್ನ 2.64 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಇದುವರೆಗೆ ಶೇ12.74 ರಷ್ಟು ಮಾತ್ರ ಒಳಗೊಂಡಿದೆ. ದೇಶದ ಅತ್ಯಂತ ಒಣ ಭಾಗಗಳಲ್ಲಿ ಒಂದಾದ ಬುಂದೇಲ್‌ಖಂಡ್‌ನಲ್ಲಿ ನೀರಿನ ಸಂಪರ್ಕವನ್ನು ವಿಸ್ತರಿಸಲು ರಾಜ್ಯವು ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ಯೋಜನೆಯನ್ನು ರೂಪಿಸಿದೆ.

ಒಟ್ಟಾರೆ ಮನೆಗಳ ವ್ಯಾಪ್ತಿಯಲ್ಲಿ, ಉತ್ತರ ಪ್ರದೇಶವು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ನಿಧಾನವಾಗಿದೆ.

ಭಾರತದ ಒಟ್ಟಾರೆ ಆರೋಗ್ಯ ನಿಯತಾಂಕಗಳನ್ನು ಸುಧಾರಿಸಲು ಈ ರಾಜ್ಯವು ಪ್ರಮುಖವಾಗಿದ್ದು, ವಿಶೇಷವಾಗಿ ಮಕ್ಕಳಲ್ಲಿ, ಏಕೆಂದರೆ ಇದು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಜಲ ಜೀವನ ಮಿಷನ್ ನಡಿಯಲ್ಲಿ ಬುಂದೇಲ್ ಖಂಡದಲ್ಲಿ 32 ಯೋಜನೆಗಳ ಅಡಿಯಲ್ಲಿ 467 ಪೈಪ್ ಕುಡಿಯುವ ನೀರಿನ ಯೋಜನೆಗಳಿವೆ. ಇವುಗಳಲ್ಲಿ 43 ಮೇಲ್ಮೈ ನೀರು ಆಧಾರಿತ ಯೋಜನೆಗಳು ಮತ್ತು 424 ಅಂತರ್ಜಲ ಆಧಾರಿತವಾಗಿವೆ.

ಇದನ್ನೂ ಓದಿ: Coronavirus cases in India ಭಾರತದಲ್ಲಿ14,313 ಹೊಸ ಕೊವಿಡ್ ಪ್ರಕರಣ ಪತ್ತೆ,181 ಮಂದಿ ಸಾವು

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ