ಸುಂದರಿ ಶರಣಾಗತಳಾಗಿ ಮನೆಗೆ ಬಂದ ಬಳಿಕ ಪೊಲೀಸರು ಕಿರುಕುಳ ನೀಡಬಾರದು: ಸವಿತಾ, ಸುಂದರಿಯ ಅತ್ತಿಗೆ
ವ್ಯವಸ್ಥೆ ವಿರುದ್ಧ ಹೋರಾಟ ಮಾಡಲು ಸುಂದರಿ ನಕ್ಸಲ್ ಪಥ ತುಳಿದಿದ್ದರು, ಸರ್ಕಾರ ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ, ಯುವಕರು ಹಾದಿ ತಪ್ಪಲಾರರು, ಎನ್ಕೌಂಟರ್ ನಲ್ಲಿ ನಕ್ಸಲ್ ವಿಕ್ರಂಗೌಡ ಸಾವಿಗೀಡಾದ ಬಳಿಕ ಸಾಕಷ್ಟು ಸುಧಾರಣೆಯಾಗಿದೆ, ಸರ್ಕಾರ ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದೆ ಎಂದು ಸವಿತಾ ಹೇಳುತ್ತಾರೆ.
ಮಂಗಳೂರು: ಕರಾವಳಿ ಪ್ರದೇಶದ ಜಿಲ್ಲೆಗಳಲ್ಲಿನ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿರುವುದು ಅಭಿನಂದನೀಯ. ನಕ್ಸಲ್ ನಾಯಕಿ ಸುಂದರಿ ಮತ್ತು ಅವರ ಸಂಗಡಿಗರು ಶರಣಾಗುವ ಬಗ್ಗೆ ಚರ್ಚೆ ನಡೆದಿದೆ. ಇದೇ ಹಿನ್ನೆಲೆಯಲ್ಲಿ ನಮ್ಮ ಮಂಗಳೂರು ವರದಿಗಾರ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮಕ್ಕೆ ಭೇಟಿ ನೀಡಿ ಸುಂದರಿಯ ಸಂಬಂಧಿಕರನ್ನು ಮಾತಾಡಿಸಿದ್ದಾರೆ. ಸುಂದರಿ ಸರ್ಕಾರಕ್ಕೆ ಶರಣಾಗತಳಾಗುತ್ತಿರೋದು ಸಂತೋಷದ ವಿಷಯ, ಅವರು ವಾಪಸ್ಸು ಬಂದು ತಮ್ಮ ಜೊತೆ ಇರಲು ಯಾವ ಸಮಸ್ಯೆಯೂ ಇಲ್ಲ, ಆದರೆ ಆಕೆ ಶರಣಾದ ಮೇಲೆ ಸರ್ಕಾರ ಮತ್ತು ಪೊಲೀಸರು ವಿಚಾರಣೆ ನೆಪದಲ್ಲಿ ವಿನಾಕಾರಣ ಕಿರುಕುಳ ನೀಡಬಾರದು ಎಂದು ಸುಂದರಿಯ ಅತ್ತಿಗೆ ಸವಿತಾ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುದುರೆಮುಖ ಅರಣ್ಯದಲ್ಲಿ ನಕ್ಸಲ್ ನಾಯಕಿ ಸುಂದರಿ ವಾಸ: ಶರಣಾಗಿ ಮನೆಗೆ ಬಾ ಎಂದ ಸಹೋದರ
Latest Videos