AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತಕ್ಕೀಡಾಗಿ ಗಂಟೆಗಟ್ಟಲೆ ರಸ್ತೆ ಮೇಲೆ ಬಿದ್ದು ಒದ್ದಾಡಿ ಪ್ರಾಣಬಿಟ್ಟ ವ್ಯಕ್ತಿ

ಅಪಘಾತವಾದಾಗ ಮೊದಲು ಮಾನವೀಯತೆ ತೋರಬೇಕಾದ ಪೊಲೀಸರೇ ಗಡಿ ವಿಚಾರವಾಗಿ ಕಚ್ಚಾಡಿದರೆ ಜನರ ಜೀವ ಹೇಗೆ ಉಳಿದೀತು. ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದರೆ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಪೊಲೀಸರು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾ ಕಾಲ ಕಳೆದ ಘಟನೆ ನಡೆದಿದೆ.

ಅಪಘಾತಕ್ಕೀಡಾಗಿ ಗಂಟೆಗಟ್ಟಲೆ ರಸ್ತೆ ಮೇಲೆ ಬಿದ್ದು ಒದ್ದಾಡಿ ಪ್ರಾಣಬಿಟ್ಟ ವ್ಯಕ್ತಿ
ರಾಹುಲ್ Image Credit source: NDTV
ನಯನಾ ರಾಜೀವ್
|

Updated on: Jan 06, 2025 | 11:51 AM

Share

ಅಪಘಾತಕ್ಕೀಡಾಗಿ ಗಂಟೆಗಳ ಕಾಲ ರಸ್ತೆ ಮೇಲೆ ವ್ಯಕ್ತಿ ಬಿದ್ದು ಒದ್ದಾಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ಪೊಲೀಸರ ನಡುವಿನ ವಿವಾದದಿಂದಾಗಿ ವ್ಯಕ್ತಿ ಕಷ್ಟಪಡುವಂತಾಗಿತ್ತು. ರಾಹುಲ್ ಅಹಿರ್ವಾರ್ ಎಂಬ ವ್ಯಕ್ತಿ  ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಅವರ ಮೇಲೆ ಹರಿದಿದೆ. ಅಪಘಾತದ ನಂತರ ಪ್ರದೇಶದ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿ ಮಧ್ಯಪ್ರದೇಶದ ಹರ್ಪಾಲ್‌ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸಿ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹೋಬ್ಕಾಂತ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು. ನಂತರ ಅವರು ಹೊರಟುಹೋದರು. ಅಷ್ಟರಲ್ಲಾಗದೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ಗ್ರಾಮಸ್ಥರು ಉತ್ತರ ಪ್ರದೇಶ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ, ಅವರು ನುಣುಚಿಕೊಂಡರು. ಇದು ಮಧ್ಯಪ್ರದೇಶ ಪೊಲೀಸರ ವ್ಯಾಪ್ತಿಗೆ ಬರುತ್ತದೆ ಎಂದರು. ನಂತರ ನಿವಾಸಿಗಳು ರಸ್ತೆ ತಡೆದು ಪ್ರತಿಭಟನೆ ಆರಂಭಿಸಿದರು, ಮೃತದೇಹ ಇನ್ನೂ ಅಪಘಾತ ಸ್ಥಳದಲ್ಲಿದೆ.

ಅಪಘಾತದ ನಾಲ್ಕು ಗಂಟೆಗಳ ನಂತರ, ಮಧ್ಯಪ್ರದೇಶ ಪೊಲೀಸರು ದೇಹವನ್ನು ವಶಪಡಿಸಿಕೊಂಡರು ಮತ್ತು ಶವಪರೀಕ್ಷೆಗೆ ಕಳುಹಿಸಿದರು. ಇದಾದ ನಂತರವೇ ಗ್ರಾಮಸ್ಥರು ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಾಹುಲ್ ಇತ್ತೀಚೆಗೆ ಮದುವೆಯಾಗಿದ್ದು, ಕೂಲಿ ಕೆಲಸ ಮಾಡಲು ದೆಹಲಿಗೆ ತೆರಳುತ್ತಿದ್ದರು ಎಂದು ಸಂತ್ರಸ್ತೆಯ ಕುಟುಂಬದವರು ತಿಳಿಸಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಮೃತದೇಹವನ್ನು ರಸ್ತೆಯಿಂದ ಹೊರ ತೆಗೆಯಲಾಯಿತು.

ಮತ್ತಷ್ಟು ಓದಿ: Video: ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಈ ಪ್ರದೇಶವು ಮಧ್ಯಪ್ರದೇಶದ ವ್ಯಾಪ್ತಿಗೆ ಬರುತ್ತದೆ, ಆದರೆ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲದ ಕಾರಣ ದೇಹವು ಈಗ ಗಂಟೆಗಳ ಕಾಲ ರಸ್ತೆಯ ಮೇಲೆ ಬಿದ್ದಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಶವಪರೀಕ್ಷೆಯನ್ನು ಆದಷ್ಟು ಬೇಗ ಮಾಡಬೇಕು, ಆದ್ದರಿಂದ ನಾವು ಈ ಅಪಘಾತಕ್ಕೆ ಕಾರಣವಾದ ವಾಹನವನ್ನು ಗುರುತಿಸಬೇಕೆಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ