ಟ್ಯೂಷನ್‌ ಕ್ಲಾಸ್​ನಲ್ಲಿ ಅನ್ಯ ಧರ್ಮದ ಟೋಪಿ ಧರಿಸಿದಕ್ಕೆ ಗಲಾಟೆ; ಐವರ ಮೇಲೆ ಹಲ್ಲೆ

ಹಲ್ಲೆಗೊಳಗಾದವರಲ್ಲಿ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹ್ಮದ್ ಗುಳೇದಗುಡ್ಡ(18) ಸಮೀರ ಬಳಗಾನೂರ.(20) ಸಾಹಿಲ್ ಪಟಂಗಲಿ(19) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ರಮೇಶ್ ಅದಾಪುರ, ಅನಿಲ ಗುಜ್ಜಲಮಟ್ಟಿ, ಮಹೇಶ, ನಾಗೇಶ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಟ್ಯೂಷನ್‌ ಕ್ಲಾಸ್​ನಲ್ಲಿ ಅನ್ಯ ಧರ್ಮದ ಟೋಪಿ ಧರಿಸಿದಕ್ಕೆ ಗಲಾಟೆ; ಐವರ ಮೇಲೆ ಹಲ್ಲೆ
ಹಲ್ಲೆಗೊಳಗಾದವರಲ್ಲಿ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಬಾಗಲಕೋಟೆ: ಟ್ಯೂಷನ್‌ ಕ್ಲಾಸ್​ನಲ್ಲಿ ಅನ್ಯ ಧರ್ಮದ ಟೋಪಿ ಧರಿಸಿದ ಬಾಲಕರಿಗೆ ಇನ್ನೊಂದು ಸಮುದಾಯದ ಬಾಲಕರು ಕೀಟಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಆಲಂಪೇಟೆಯಲ್ಲಿ ನಡೆದಿದೆ. ರಿಯಾನ್ ಎಂಬ 9ನೇ ತರಗತಿ ಬಾಲಕನಿಗೆ ಇನ್ನಿತರ ಯುವರು ಕಿಚಾಯಿಸಿದ್ದಾರೆ. ನೊಂದ ಬಾಲಕನ ಪರ ಹಾಗೂ ಕೀಟಲೆ ಮಾಡಿದ ಬಾಲಕರ ಪರ ಬಂದ ಯುವಕರ ಮಧ್ಯೆ ಪರಸ್ಪರ ಗಲಾಟೆಯಾಗಿದ್ದು, ಐವರ ಮೇಲೆ ಹಲ್ಲೆ ಮಾಡಲಾಗಿದೆ.

ಹಲ್ಲೆಗೊಳಗಾದವರಲ್ಲಿ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹ್ಮದ್ ಗುಳೇದಗುಡ್ಡ(18) ಸಮೀರ ಬಳಗಾನೂರ.(20) ಸಾಹಿಲ್ ಪಟಂಗಲಿ(19) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ರಮೇಶ್ ಅದಾಪುರ, ಅನಿಲ ಗುಜ್ಜಲಮಟ್ಟಿ, ಮಹೇಶ, ನಾಗೇಶ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರು ನೀಡಿದವರ ವಿರುದ್ಧ ಆಕ್ರೋಶ
ಗಲಾಟೆಯಲ್ಲಿ ತನ್ನ ವಿರುದ್ಧ ದೂರು ನೀಡಿದ್ದು ಯಾಕೆ ಎಂದು ಮಂಜು ತಂಗಡಗಿ ಎಂಬ ಯುವಕ ಗಾಯಾಳುಗಳಿಗೆ ಆವಾಜ್ ಹಾಕಿದ್ದಾನೆ. ನನ್ನ ಹೆಸರು ಯಾಕೆ ಪೊಲೀಸರಿಗೆ ಹೇಳಿದ್ದೀರಿ, ನಾನೇನು ಮಾಡಿದ್ದೆ ಎಂದು ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಈಗಾಗಲೇ ಎರಡು ಬಾರಿ ಕೇಸ್ ಆಗಿ ಜೈಲಿಗೆ ಹೋಗಿ ಬಂದಿದ್ದೀನಿ. ನನ್ನ ಹೆಸರು ಇದರಲ್ಲಿ ತಂದರೆ ಎಲ್ಲರಿಗೂ ಚುಚ್ಚಿ (ಒಳಗೆ) ಜೈಲಿಗೆ ಹೋಗುತ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.

ಎರಡು ಬಾರಿ ಜೈಲಿಗೆ ಹೋಗಿ ಬಂದವನಿಗೆ ಅದೇನು ದೊಡ್ಡದಲ್ಲ. ಮೂರು ತಿಂಗಳಲ್ಲಿ ಹೊರಗೆ ಬರುತ್ತೀನಿ. ಬಂದು ಜಾತಿನಿಂದನೆ ಕೇಸ್ ಹಾಕುತ್ತೀನಿ ಎಂದು ಮಂಜು ತಂಗಡಗಿ ಅವಾಜ್ ಹಾಕಿದ್ದಾನೆ. ಇಲ್ಲ ನಿಮ್ಮ ಹೆಸರು ಗೊಂದಲದಲ್ಲಿ ಹೇಳಿದ್ದೇವೆ ಎಂದು ಗಾಯಾಳು ಯುವಕರು ಹೇಳಿದ್ದಾರೆ.

ಇದನ್ನೂ ಓದಿ:
ಬೆಂಗಳೂರು: ಡ್ರಾಪ್ ಕೇಳುವ ನೆಪದಲ್ಲಿ ಮೊಬೈಲ್, ಹಣ ದರೋಡೆ; ಸಿಮ್ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ

ಅನ್ಯಕೋಮಿನ ಯುವತಿ ಪ್ರೀತಿಸಿದ್ದ ಯುವಕನ ಹತ್ಯೆ ಪ್ರಕರಣ; ರೈಲ್ವೆ ಪೊಲೀಸರಿಂದ ಬೆಳಗಾವಿ ಪೊಲೀಸರಿಗೆ ಕೇಸ್ ವರ್ಗಾವಣೆ

Read Full Article

Click on your DTH Provider to Add TV9 Kannada