ದ್ರಾವಿಡ್​ ಬಯೋಪಿಕ್​ನಲ್ಲಿ ಸುದೀಪ್ ಮುಖ್ಯಭೂಮಿಕೆ? ಹಕ್ಕು ತಂದ್ರೆ ಸಿನಿಮಾ ಮಾಡ್ತೀನಿ ಎಂದ ಕಬೀರ್​ ಖಾನ್

ರಾಹುಲ್​ ದ್ರಾವಿಡ್​ ಅವರ ಬಯೋಪಿಕ್​ ಮಾಡುವ ವಿಚಾರವೂ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್​ ಅವರು ಇದರಲ್ಲಿ ರಾಹುಲ್​ ದ್ರಾವಿಡ್​ ಅವರ ಪಾತ್ರವನ್ನು ಮಾಡಬೇಕು ಎನ್ನುವ ಆಗ್ರಹ ಕೇಳಿಬಂತು. ಇದಕ್ಕೆ ‘83’ ನಿರ್ದೇಶಕ ಕಬೀರ್​ ಖಾನ್​ ಒಪ್ಪಿಗೆ ನೀಡಿದ್ದಾರೆ. ‘

TV9kannada Web Team

| Edited By: Rajesh Duggumane

Dec 18, 2021 | 10:06 PM

‘83’ ಸಿನಿಮಾದ ಸುದ್ದಿಗೋಷ್ಠಿ ಬೆಂಗಳೂರಿನಲ್ಲಿ ಇಂದು (ಡಿಸೆಂಬರ್​ 18) ನಡೆಯಿತು. . ಕಿಚ್ಚ ಸುದೀಪ್​ ಅವರು ಕೂಡ ಈಗ ಈ ಚಿತ್ರತಂಡಕ್ಕೆ ಸಾಥ್​ ನೀಡಿದ್ದಾರೆ. ಅಂದರೆ, ಕನ್ನಡದಲ್ಲಿ ‘83’ ಸಿನಿಮಾವನ್ನು ಸುದೀಪ್​ ಅರ್ಪಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಅವರ ಬಯೋಪಿಕ್​ ಮಾಡುವ ವಿಚಾರವೂ ಚರ್ಚೆಗೆ ಬಂದಿದೆ. ಕಿಚ್ಚ ಸುದೀಪ್​ ಅವರು ಇದರಲ್ಲಿ ರಾಹುಲ್​ ದ್ರಾವಿಡ್​ ಅವರ ಪಾತ್ರವನ್ನು ಮಾಡಬೇಕು ಎನ್ನುವ ಆಗ್ರಹ ಕೇಳಿಬಂತು. ಇದಕ್ಕೆ ‘83’ ನಿರ್ದೇಶಕ ಕಬೀರ್​ ಖಾನ್​ ಒಪ್ಪಿಗೆ ನೀಡಿದ್ದಾರೆ. ‘ಹಕ್ಕನ್ನು ತಂದ್ರೆ ಬಯೋಪಿಕ್​ ಮಾಡ್ತೀನಿ’ ಎಂದಿದ್ದಾರೆ ಅವರು. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈ ವಿಚಾರ ಕೇಳಿ ರಣವೀರ್​ ಸಿಂಗ್​ ಕೂಡ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಒಂದೇ ವೇದಿಕೆ ಮೇಲೆ ಸುದೀಪ್​, ರಣವೀರ್​, ಕಪಿಲ್​ ದೇವ್​; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada