AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss 5 Winner: ‘ಬಿಗ್​ ಬಾಸ್​ ತೆಲುಗು 5’ ವಿನ್ನರ್​ ಯಾರು? ಇಲ್ಲಿದೆ ಮಾಹಿತಿ

ಶ್ರೀರಾರಮಚಂದ್ರ, ಸನ್ನಿ, ಸಿರಿ ಶಣ್ಮುಖ್​ ಹಾಗೂ ಮಾನಸ್​ ಅವರು ಫಿನಾಲೆ ರೇಸ್​ನಲ್ಲಿದ್ದರು. ಭಾನುವಾರ ನಡೆದ ಗ್ರ್ಯಾಂಡ್​ ಫಿನಾಲೆಯನ್ನು ಅಕ್ಕಿನೇನಿ ನಾಗಾರ್ಜುನ ನಡೆಸಿಕೊಟ್ಟರು.

Bigg Boss 5 Winner: ‘ಬಿಗ್​ ಬಾಸ್​ ತೆಲುಗು 5’ ವಿನ್ನರ್​ ಯಾರು? ಇಲ್ಲಿದೆ ಮಾಹಿತಿ
ಬಿಗ್​ ಬಾಸ್​ ವಿನ್ನರ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 20, 2021 | 3:00 AM

Share

ತೆಲುಗು ಬಿಗ್​ ಬಾಸ್​ ಸೀಸನ್​ 5 ಫಿನಾಲೆ (Bigg Boss Telugu 5 Finale) ಪೂರ್ಣಗೊಂಡಿದೆ. ಭಾನುವಾರ (ಡಿಸೆಂಬರ್​ 19) ಅದ್ದೂರಿಯಾಗಿ​ ಫಿನಾಲೆ ನಡೆದಿಯಿತು. ಯಾರು ವಿನ್​ ಆಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಒಟ್ಟೂ ಐದು ಮಂದಿ ಫಿನಾಲೆ ರೇಸ್​ನಲ್ಲಿದ್ದರು. ಈ ಪೈಕಿ ಕಿರುತೆರೆ ನಟ ವಿ.ಜೆ. ಸನ್ನಿ ‘ತೆಲುಗು ಬಿಗ್​ ಬಾಸ್​ 5’ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಬಹುಮಾನದ ಹಣ ಹಾಗೂ ಟ್ರೋಫಿಯೊಂದಿಗೆ ಅವರು ಮನೆಗೆ ತೆರಳಿದ್ದಾರೆ. ಆರಂಭದಿಂದಲೂ ಹೆಚ್ಚು ಮನರಂಜನೆ ನೀಡುತ್ತಾ ಎಲ್ಲರ ಗಮನ ಸೆಳೆದಿದ್ದ ಅವರು ಕೊನೆಗೂ ಗೆಲುವು ಕಂಡಿದ್ದಾರೆ.

ಶ್ರೀರಾರಮಚಂದ್ರ, ಸನ್ನಿ, ಸಿರಿ ಶಣ್ಮುಖ್​ ಹಾಗೂ ಮಾನಸ್​ ಅವರು ಫಿನಾಲೆ ರೇಸ್​ನಲ್ಲಿದ್ದರು. ಭಾನುವಾರ ನಡೆದ ಗ್ರ್ಯಾಂಡ್​ ಫಿನಾಲೆಯನ್ನು ಅಕ್ಕಿನೇನಿ ನಾಗಾರ್ಜುನ ನಡೆಸಿಕೊಟ್ಟರು. ಫಿನಾಲೆ ವೀಕ್​ಗೆ 13 ಕೋಟಿ ಮತಗಳು ಬಿದ್ದಿದ್ದವು. ಈ ಪೈಕಿ ಅತಿ ಹೆಚ್ಚು ವೋಟ್ ಪಡೆದು ಸನ್ನಿ ಗೆಲುವು ಕಂಡಿದ್ದಾರೆ. ಶಣ್ಮುಖ್​ ಅವರು ಮೊದಲ ರನ್ನರ್​ ಅಪ್​ ಆದರೆ, ಶ್ರೀರಾಮಚಂದ್ರ ಅವರು ಎರಡನೇ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ.

19 ಮಂದಿ ಬಿಗ್​ ಬಾಸ್ ಮನೆ ಸೇರಿದ್ದರು. ಈ ಪೈಕಿ ಸನ್ನಿ ಗೆದ್ದು ಬೀಗಿದ್ದಾರೆ. ಘಟಾಘಟಿಗಳು ಎನಿಸಿಕೊಂಡವರು ಅಷ್ಟಾಗಿ ಬಿಗ್​ ಬಾಸ್​ ಮನೆಯಲ್ಲಿ ಇರಲಿಲ್ಲ. ಈ ಕಾರಣಕ್ಕೆ ಸಾಕಷ್ಟು ಮಂದಿ ತಾವು ಈ ಬಾರಿಯ ಸೀಸನ್​ ನೋಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಅಕ್ಕಿನೇನಿ ನಾಗಾರ್ಜುನ ಅವರ ಅದ್ಭುತವಾಗಿ ಈ ಬಾರಿಯ ಸೀಸನ್​ಅನ್ನು ನಡೆಸಿಕೊಟ್ಟಿದ್ದರು. ಪತ್ರಕರ್ತನಾಗಿದ್ದ ಸನ್ನಿ, ನಂತರ ಕಿರುತೆರೆಗೆ ಕಾಲಿಟ್ಟರು. ಧಾರಾವಾಹಿ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದರು.

ಬಿಗ್​ ಬಾಸ್​ ಫಿನಾಲೆ ಸ್ಟಾರ್​ ನಟರು ಹಾಗೂ ನಿರ್ದೇಶಕರ ಸಮಾಗಮಕ್ಕೆ ಸಾಕ್ಷಿ ಆಯಿತು. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರದಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅವರು ಕೂಡ ಬಿಗ್​ ಬಾಸ್​ ವೇದಿಕೆ ಏರಿದ್ದರು. ರಣಬೀರ್​ ಕಪೂರ್ ಹಾಗೂ ಆಲಿಯಾ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ಬರುತ್ತಿದೆ. ಈ ಕಾರಣಕ್ಕೆ ಈ ಜೋಡಿ ಬಿಗ್​ ಬಾಸ್​ ಮನೆಯ ವೇದಿಕೆ ಹತ್ತಿತ್ತು.

ನಾನಿ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಶ್ಯಾಮ್​ ಸಿಂಗ​ ರಾಯ್​’ ಕೂಡ ರಿಲೀಸ್​ ಆಗುತ್ತಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಈ ಜೋಡಿ. ಇನ್ನು, ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾ ತಂಡದ ಪರವಾಗಿ ಆಗಮಿಸಿದ್ದರು. ಈ ಎಲ್ಲರನ್ನೂ ಸ್ವಾಗತ ಮಾಡಿದ್ದು ಅಕ್ಕಿನೇನಿ ನಾಗಾರ್ಜುನ. ‘ತೆಲುಗು ಬಿಗ್​ ಬಾಸ್​ 5’ ನಡೆಸಿಕೊಡುತ್ತಿರುವ ಅವರು, ಈ ಎಲ್ಲರನ್ನೂ ಸ್ವಾಗತಿಸಿ ಪ್ರೀತಿಯಿಂದ ನಾಲ್ಕು ಮಾತನಾಡಿದರು.

ಇದನ್ನೂ ಓದಿ: ತೆಲುಗು ಬಿಗ್​ ಬಾಸ್​ ಫಿನಾಲೆ; ವೇದಿಕೆ ಮೇಲೆ ರಶ್ಮಿಕಾ, ರಾಜಮೌಳಿ, ಆಲಿಯಾ ಭಟ್​, ರಣಬೀರ್​ ಕಪೂರ್

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!