ತೆಲುಗು ಬಿಗ್​ ಬಾಸ್​ ಫಿನಾಲೆ; ವೇದಿಕೆ ಮೇಲೆ ರಶ್ಮಿಕಾ, ರಾಜಮೌಳಿ, ಆಲಿಯಾ ಭಟ್​, ರಣಬೀರ್​ ಕಪೂರ್

ಸದ್ಯ, ಟಾಲಿವುಡ್​ನಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಚಿತ್ರತಂಡದವರು ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆ ವೇದಿಕೆ ಏರಿ ಸಿನಿಮಾಗೆ ಪ್ರಚಾರ ಕೊಡುವ ಕೆಲಸ ಕೂಡ ಆಗುತ್ತಿದೆ.

ತೆಲುಗು ಬಿಗ್​ ಬಾಸ್​ ಫಿನಾಲೆ; ವೇದಿಕೆ ಮೇಲೆ ರಶ್ಮಿಕಾ, ರಾಜಮೌಳಿ, ಆಲಿಯಾ ಭಟ್​, ರಣಬೀರ್​ ಕಪೂರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 19, 2021 | 7:44 PM

ತೆಲುಗು ಬಿಗ್​ ಬಾಸ್​ ಸೀಸನ್​ 5 ಫಿನಾಲೆ (Bigg Boss Telugu 5 Finale) ತಲುಪಿದೆ. ಇಂದು (ಡಿಸೆಂಬರ್​ 19) ಗ್ರ್ಯಾಂಡ್​ ಫಿನಾಲೆ ನಡೆಯುತ್ತಿದೆ. ಯಾರು ವಿನ್​ ಆಗಲಿದ್ದಾರೆ ಎನ್ನುವ ಕುತೂಹಲ ಇದೆ. ಒಟ್ಟೂ ಐದು ಮಂದಿ ಫಿನಾಲೆ ರೇಸ್​ನಲ್ಲಿದ್ದಾರೆ. ಈ ಪೈಕಿ ಒಬ್ಬರಿಗೆ ಬಿಗ್​ ಬಾಸ್​ ಕಿರೀಟ ಸಿಗಲಿದೆ. ಮತ್ತೊಬ್ಬರು ರನ್ನರ್​ ಅಪ್​ ಆಗಲಿದ್ದಾರೆ. ಗೆದ್ದ ವ್ಯಕ್ತಿಗೆ ಹಣ ಹಾಗೂ ಬಿಗ್​ ಬಾಸ್​ ಟ್ರೋಫಿ ಸಿಗಲಿದೆ. ಅಚ್ಚರಿ ಎಂದರೆ, ಬಿಗ್​ ಬಾಸ್​ ಫಿನಾಲೆ ಸ್ಟಾರ್​ ನಟರು ಹಾಗೂ ನಿರ್ದೇಶಕರ ಸಮಾಗಮಕ್ಕೆ ಸಾಕ್ಷಿ ಆಯಿತು.

ಸದ್ಯ, ಟಾಲಿವುಡ್​ನಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಚಿತ್ರತಂಡದವರು ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಕಿರುತೆರೆ ವೇದಿಕೆ ಏರಿ ಸಿನಿಮಾಗೆ ಪ್ರಚಾರ ಕೊಡುವ ಕೆಲಸ ಕೂಡ ಆಗುತ್ತಿದೆ. ತೆಲುಗು ಬಿಗ್​ ಬಾಸ್​ ವೇದಿಕೆ ಕೂಡ ಹಲವು ಸ್ಟಾರ್​ಗಳ ಸಮಾಗಮಕ್ಕೆ ಸಾಕ್ಷಿ ಆಯಿತು. ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ, ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್​, ಆಲಿಯಾ ಭಟ್​, ಸಾಯಿ ಪಲ್ಲವಿ, ನಾನಿ ಹೀಗೆ ಅನೇಕ ಸ್ಟಾರ್​ಗಳು ವೇದಿಕೆ ಏರಿದ್ದರು.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರದಲ್ಲಿ ರಾಜಮೌಳಿ ಬ್ಯುಸಿ ಆಗಿದ್ದಾರೆ. ಅವರು ಕೂಡ ಬಿಗ್​ ಬಾಸ್​ ವೇದಿಕೆ ಏರಿದ್ದರು. ರಣಬೀರ್​ ಕಪೂರ್ ಹಾಗೂ ಆಲಿಯಾ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ಬರುತ್ತಿದೆ. ಈ ಕಾರಣಕ್ಕೆ ಈ ಜೋಡಿ ಬಿಗ್​ ಬಾಸ್​ ಮನೆಯ ವೇದಿಕೆ ಹತ್ತಿತ್ತು.

ನಾನಿ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಶ್ಯಾಮ್​ ಸಿಂಗ​ ರಾಯ್​’ ಕೂಡ ರಿಲೀಸ್​ ಆಗುತ್ತಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಿದರು ಈ ಜೋಡಿ. ಇನ್ನು, ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಸಿನಿಮಾ ತಂಡದ ಪರವಾಗಿ ಆಗಮಿಸಿದ್ದರು. ಈ ಎಲ್ಲರನ್ನೂ ಸ್ವಾಗತ ಮಾಡಿದ್ದು ಅಕ್ಕಿನೇನಿ ನಾಗಾರ್ಜುನ. ‘ತೆಲುಗು ಬಿಗ್​ ಬಾಸ್​ 5’ ನಡೆಸಿಕೊಡುತ್ತಿರುವ ಅವರು, ಈ ಎಲ್ಲರನ್ನೂ ಸ್ವಾಗತಿಸಿ ಪ್ರೀತಿಯಿಂದ ನಾಲ್ಕು ಮಾತನಾಡಿದರು.

ಇದನ್ನೂ ಓದಿ: ‘ರಣಬೀರ್​-ಆಲಿಯಾ ಒಟ್ಟಾಗಿ ನನ್ನ ಸಿನಿಮಾವನ್ನು ಹಾಳು ಮಾಡುತ್ತಿದ್ದಾರೆ ಅನಿಸುತ್ತಿತ್ತು; ‘ಬ್ರಹ್ಮಾಸ್ತ್ರ’ ನಿರ್ದೇಶಕ 

Published On - 7:43 pm, Sun, 19 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ