Ede Tumbi Haaduvenu Winner: ‘ಎದೆ ತುಂಬಿ ಹಾಡುವೆನು’ ವಿನ್ನರ್ ಆಗಿ ಹೊರ ಹೊಮ್ಮಿದ ಬಳ್ಳಾರಿಯ ಚಿನ್ಮಯ್
ಬಳ್ಳಾರಿಯ ಚಿನ್ಮಯ್ ಜೋಶಿ ಅವರು ‘ಎದೆ ತುಂಬಿ ಹಾಡುವೆನು ಸೀಸನ್ 1’ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ತೀರ್ಪುಗಾರರಾದ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ, ರಘು ದೀಕ್ಷಿತ್ ಚಿನ್ಮಯ್ಗೆ ಟ್ರೋಫಿ ನೀಡಿದರು.
ಎಸ್.ಪಿ. ಬಾಲಸುಬ್ರಹ್ಮಣ್ಯಂ (S. P. Balasubrahmanyam) ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ (Ede Tumbi Haaduvenu) ಸಂಗೀತ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್ಗಳಿಗೆ ಇದು ವೇದಿಕೆ ಆಗಿತ್ತು. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್ ಆರಂಭಿಸಿತ್ತು. ಆಗಸ್ಟ್ 14ರಂದು ಈ ರಿಯಾಲಿಟಿ ಶೋ ಪ್ರಾರಂಭಗೊಂಡಿತ್ತು. ಸತತ ಐದು ತಿಂಗಳ ಕಾಲ ನಡೆದ ಈ ರಿಯಾಲಿಟಿ ಶೋ ಈಗ ಪೂರ್ಣಗೊಂಡಿದೆ. ಭಾನುವಾರ (ಡಿಸೆಂಬರ್ 19) ನಡೆದ ಫಿನಾಲೆಯಲ್ಲಿ ವಿನ್ನರ್ (Ede Tumbi Haaduvenu Winner) ಘೋಷಣೆ ಆಗಿದೆ. ಹಾಗಾದರೆ, ಇದರ ವಿನ್ನರ್ ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಬಳ್ಳಾರಿಯ ಚಿನ್ಮಯ್ ಜೋಶಿ ಅವರು ‘ಎದೆ ತುಂಬಿ ಹಾಡುವೆನು ಸೀಸನ್ 1’ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ತೀರ್ಪುಗಾರರಾದ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ, ರಘು ದೀಕ್ಷಿತ್ ಅವರು ಚಿನ್ಮಯ್ಗೆ ಟ್ರೋಫಿ ನೀಡಿದರು. ಈ ಸಂದರ್ಭದಲ್ಲಿ ಎಸ್ಪಿಬಿ ಮಗ ಎಸ್.ಪಿ. ಚರಣ್ ಕೂಡ ಇದ್ದರು.
ಸಂದೇಶ್, ನಾದಿರಾ ಬಾನು, ಕಿರಣ್, ಚಿನ್ಮಯ್ ಫಿನಾಲೆ ರೇಸ್ನಲ್ಲಿ ಇದ್ದರು. ಈ ನಾಲ್ವರು ತಮ್ಮ ಅದ್ಭುತ ಕಂಠದಿಂದ ಹಾಡನ್ನು ಹಾಡಿದರು. ಚಿನ್ಮಯ್ ಅವರು ಎಲ್ಲರನ್ನೂ ಹಿಂದಿಕ್ಕಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಕಾರ್ಯಕ್ರಮದಿಂದ ಅವರ ಖ್ಯಾತಿ ಹೆಚ್ಚಿದೆ. ಈ ಮೊದಲು ಎಸ್.ಪಿ.ಬಿ. ಹಾಡು ಹಾಡಲು ಬಳಕೆ ಮಾಡುತ್ತಿದ್ದ ಮೈಕ್ಅನ್ನು ಫಿನಾಲೆಯಲ್ಲಿ ಬಳಕೆ ಮಾಡಲಾಗಿತ್ತು. ಈ ಮೈಕ್ ಹಿಡಿದು ಸ್ಪರ್ಧಿಗಳು ಹಾಡನ್ನು ಹಾಡಿದ್ದರು ಎಂಬುದು ವಿಶೇಷ.
ಈ ಸೀಸನ್ ಆರಂಭದಲ್ಲಿ, ‘ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ’ ಹಾಡನ್ನು ಎಸ್ಪಿಬಿ ಮಗ ಚರಣ್ ಹಾಡಿದ್ದರು ಹಾಡು ಮುಗಿದ ನಂತರದಲ್ಲಿ ಮಾತನಾಡಿದ್ದ ಚರಣ್, ‘ಎಲ್ಲೆಲ್ಲಿ ಸಂಗೀತ ಇರುತ್ತದೆಯೋ ಅಲ್ಲಿ ನಮ್ಮ ತಂದೆ ಇರುತ್ತಾರೆ. ಅವರೆಲ್ಲಿ ಇರುತ್ತಾರೋ ನಾನು ಅಲ್ಲಿರ್ತೀನಿ’ ಎಂದಿದ್ದರು. ಈ ವೇಳೆ ಎಸ್ಪಿಬಿ ಅವರ ಹಳೆಯ ವಾಯ್ಸ್ನೋಟ್ ಹಾಕಲಾಗಿತ್ತು. ‘ಚರಣ್ ನಿನ್ನೊಂದಿಗೆ ನಾನು ಸದಾ ಇರ್ತೀನಿ. ಅದು ನಿನಗೆ ಗೊತ್ತಿರೋ ವಿಷಯ. ಕಾರ್ಯಕ್ರಮ ಆನಂದಿಸು. ತುಂಬಾ ಸೊಗಸಾಗಿದೆ. ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ’ ಎಂದು ಎಸ್ಪಿಬಿ ಧ್ವನಿಯಲ್ಲಿ ಕೇಳಿ ಬಂದಿತ್ತು. ಈ ಧ್ವನಿ ಕೇಳುತ್ತಿದ್ದಂತೆ ಚರಣ್ ಭಾವುಕರಾಗಿದ್ದರು.
ಇದನ್ನೂ ಓದಿ: ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಪುನೀತ್ಗೆ ಸ್ವರ ನಮನ; ಗುರು ಕಿರಣ್ ಹೇಳಿದ್ದೇನು?
Published On - 6:20 pm, Mon, 20 December 21