ಮನೆಯಲ್ಲಿ ಕುಳಿತು ನೋಡಬಹುದು ‘ಪುಷ್ಪ’ ಚಿತ್ರ; ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ಗೆ ದಿನಾಂಕ ನಿಗದಿ

ಮನೆಯಲ್ಲಿ ಕುಳಿತು ನೋಡಬಹುದು ‘ಪುಷ್ಪ’ ಚಿತ್ರ; ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ಗೆ ದಿನಾಂಕ ನಿಗದಿ
ಅಲ್ಲು ಅರ್ಜುನ್

ಒಮಿಕ್ರಾನ್​ ಹೆಚ್ಚುತ್ತಿರುವ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಎಲ್ಲ ಸಿನಿಮಾಗಳ ಕಲೆಕ್ಷನ್​ ನಿಧಾನಕ್ಕೆ ಕುಸಿದಿದೆ. ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಸಿನಿಮಾ ಪ್ರಸಾರ ಮಾಡಲು ಇದು ಸೂಕ್ತ ಸಮಯ ಎಂದು ‘ಪುಷ್ಪ’ ಚಿತ್ರತಂಡ ನಿರ್ಧರಿಸಿದೆ.

TV9kannada Web Team

| Edited By: Madan Kumar

Jan 05, 2022 | 1:54 PM

ಗಲ್ಲಾಪೆಟ್ಟಿಗೆಯಲ್ಲಿ ‘ಪುಷ್ಪ’ ಸಿನಿಮಾ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಆ ಮೂಲಕ ಅಲ್ಲು ಅರ್ಜುನ್​ ಸಿನಿಮಾ ಜರ್ನಿಗೆ ಮತ್ತೊಂದು ಭರ್ಜರಿ ಗೆಲುವು ಸಿಕ್ಕಂತಾಗಿದೆ. ಈ ಚಿತ್ರದಿಂದಾಗಿ ನಟಿ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಿದೆ. ಡಿ.17ರಂದು ‘ಪುಷ್ಪ’ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಿತ್ತು. ಈಗಲೂ ಅನೇಕ ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದರ ಜತೆಗೆ ಒಟಿಟಿಯಲ್ಲೂ ಪ್ರಸಾರ ಆರಂಭಿಸಲಿದೆ. ಹೌದು, ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ಜ.7ರಂದು ‘ಪುಷ್ಪ’ ವೀಕ್ಷಣೆಗೆ ಲಭ್ಯವಾಗಲಿದೆ. ಈ ಸುದ್ದಿ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ.

ದೇಶಾದ್ಯಂತ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆ ಕಾರಣದಿಂದ ಒಂದು ವರ್ಗದ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಲು ಹಿಂಜರಿದಿದ್ದರು. ಅವರೆಲ್ಲರೂ ಈಗ ಮನೆಯಲ್ಲೇ ‘ಪುಷ್ಪ’ ಚಿತ್ರ ನೋಡಬಹುದು. ಈಗ ಅನೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳ ಮೇಲೆ ಶೇ.50ರಷ್ಟು ಆಸನಮಿತಿ ನಿರ್ಬಂಧ ಹೇರಲಾಗಿದೆ. ಹಾಗಾಗಿ ಗಲ್ಲಾಪೆಟ್ಟಿಗೆ ಕಲೆಕ್ಷನ್​ ನಿಧಾನಕ್ಕೆ ಕುಸಿದಿದೆ. ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಸಿನಿಮಾ ಪ್ರಸಾರ ಮಾಡಲು ಇದು ಸೂಕ್ತ ಸಮಯ ಎಂದು ಚಿತ್ರತಂಡ ನಿರ್ಧರಿಸಿದೆ.

ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸುಕುಮಾರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ದೇವಿಶ್ರೀ ಪ್ರಸಾದ್​ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲ ಹಾಡುಗಳು ಧೂಳೆಬ್ಬಿಸಿವೆ. ಅದರಲ್ಲೂ ಸಮಂತಾ ಡ್ಯಾನ್ಸ್​ ಮಾಡಿರುವ ‘ಹು ಅಂತಿವಾ ಮಾವ ಊಹೂ ಅಂತಿಯಾ ಮಾವ..’ ಹಾಡು ಸೂಪರ್​ ಹಿಟ್​ ಆಯಿತು. ಈ ಸಿನಿಮಾದ ಭರ್ಜರಿ ಗೆಲುವಿನಲ್ಲಿ ಈ ಹಾಡಿನ ಪಾತ್ರ ಕೂಡ ದೊಡ್ಡದಿದೆ.

ಇತ್ತೀಚೆಗೆ ‘ಪುಷ್ಪ’ ಸಿನಿಮಾ ತಂಡದಿಂದ ಥ್ಯಾಂಕ್ಸ್​ ಮೀಟ್​ ಆಯೋಜಿಸಲಾಗಿತ್ತು. ಆ ವೇದಿಕೆಯಲ್ಲಿ ಅಲ್ಲು ಅರ್ಜುನ್ ಅವರು ಕಣ್ಣೀರು ಹಾಕಿದ್ದರು. ಅಂದು ಅವರು 40 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದರು. ತಮ್ಮ ಗೆಲುವಿಗೆ ಕಾರಣರಾದ ಎಲ್ಲರನ್ನೂ ಅವರು ನೆನಪಿಸಿಕೊಂಡರು. ‘ಕಳೆದ ಎರಡು ವರ್ಷ ತುಂಬ ಕಠಿಣವಾಗಿತ್ತು. ನಿಮ್ಮೆಲ್ಲರಿಗೂ ಧನ್ಯವಾದ ಹೇಳಬೇಕು ಎಂದು ನಾನು ಈ ಕ್ಷಣಕ್ಕಾಗಿ ಕಾದಿದ್ದೆ. ಇನ್ಮುಂದೆ ನನ್ನ ಸಿನಿಮಾ ಸೋತರೂ ಸಹ ನಾನು ಥ್ಯಾಂಕ್ಸ್​ ಮೀಟ್​ ಆಯೋಜಿಸುತ್ತೇನೆ. ಯಾಕೆಂದರೆ ಸೋತ ಚಿತ್ರದ ಹಿಂದೆಯೂ ತಂಡದ ಶ್ರಮ ಇರುತ್ತದೆ’ ಎಂದು ಅಲ್ಲು ಅರ್ಜುನ್​ ಹೇಳಿದ್ದರು.

‘ಪುಷ್ಪ’ ಸಿನಿಮಾ ಎರಡು ಪಾರ್ಟ್​ಗಳಲ್ಲಿ ತಯಾರಾಗಿದೆ. ಮೊದಲ ಪಾರ್ಟ್​ ಸೂಪರ್ ಹಿಟ್​ ಆಗಿರುವುದರಿಂದ ಎರಡನೇ ಪಾರ್ಟ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಸ್ಟಾರ್​ ಕಲಾವಿದರಿಂದ ಈ ಸಿನಿಮಾದ ಸ್ಟಾರ್​ ಮೆರುಗು ಹೆಚ್ಚಿದೆ.

ಇದನ್ನೂ ಓದಿ:

‘ಪುಷ್ಪ 2’ ಚಿತ್ರದಲ್ಲಿ ಧನಂಜಯ ಪಾತ್ರದ ಬಗ್ಗೆ ಹೊಸ ಅಪ್​ಡೇಟ್​ ನೀಡಿದ ನಿರ್ದೇಶಕ ಸುಕುಮಾರ್​

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

Follow us on

Related Stories

Most Read Stories

Click on your DTH Provider to Add TV9 Kannada