AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರದಲ್ಲಿ ಧನಂಜಯ ಪಾತ್ರದ ಬಗ್ಗೆ ಹೊಸ ಅಪ್​ಡೇಟ್​ ನೀಡಿದ ನಿರ್ದೇಶಕ ಸುಕುಮಾರ್​

‘ಪುಷ್ಪ’ ಸಿನಿಮಾ ಡಿಸೆಂಬರ್​ 17ರಂದು ತೆರೆಗೆ ಬಂದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ, ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಒಳ್ಳೆಯ ಕಮಾಯಿ ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್​ 250 ಕೋಟಿ ರೂಪಾಯಿ ದಾಟಿದೆ.

‘ಪುಷ್ಪ 2’ ಚಿತ್ರದಲ್ಲಿ ಧನಂಜಯ ಪಾತ್ರದ ಬಗ್ಗೆ ಹೊಸ ಅಪ್​ಡೇಟ್​ ನೀಡಿದ ನಿರ್ದೇಶಕ ಸುಕುಮಾರ್​
ಸುಕುಮಾರ್​, ಅಲ್ಲು ಅರ್ಜುನ್​ ಹಾಗೂ ಧನಂಜಯ
TV9 Web
| Edited By: |

Updated on:Dec 29, 2021 | 6:21 PM

Share

ಡಾಲಿ ಧನಂಜಯ (Daali Dhananjay) ಅವರು ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದಾರೆ. ಅವರಿಗೆ ಕೇವಲ ಸ್ಯಾಂಡಲ್​ವುಡ್​ ಮಾತ್ರವಲ್ಲದೆ, ಪರಭಾಷೆಯಿಂದಲೂ ಆಫರ್​ ಬರುತ್ತಿದೆ. ಅಲ್ಲು ಅರ್ಜುನ್​ (Allu Arjun) ನಟನೆಯ ‘ಪುಷ್ಪ’ ಚಿತ್ರದ (Pushpa Movie) ಮೂಲಕ ಟಾಲಿವುಡ್​​ನಲ್ಲಿ ಮತ್ತೆ ಮಿಂಚಿದ್ದಾರೆ. ಅವರ ನಟನೆ ತೆಲುಗು ಮಂದಿಗೂ ಇಷ್ಟವಾಗಿದೆ. ಧನಂಜಯ ನಟಿಸಿರುವ ಜಾಲಿ ರೆಡ್ಡಿ ಪಾತ್ರ ಹೆಚ್ಚುಹೊತ್ತು ಕಾಣಿಸಿಕೊಳ್ಳುವುದಿಲ್ಲ. ಆದರೆ, ‘ಪುಷ್ಪ ​2’ ಚಿತ್ರದಲ್ಲಿ ಅವರ ಪಾತ್ರ ಹೆಚ್ಚು ಪ್ರಾಮುಖ್ಯತೆ ವಹಿಸಲಿದೆಯೇ ಎನ್ನುವ ಗುಮಾನಿ ‘ಪುಷ್ಪ’ ನೋಡಿದ ಅಭಿಮಾನಿಗಳಲ್ಲಿ ಮೂಡಿತ್ತು. ಈಗ ಈ ಬಗ್ಗೆ ನಿರ್ದೇಶಕ ಸುಕುಮಾರ್​ ಅವರು ಸ್ಪಷ್ಟನೆ ನೀಡಿದ್ದಾರೆ.

‘ಪುಷ್ಪ’ ಸಿನಿಮಾ ಡಿಸೆಂಬರ್​ 17ರಂದು ತೆರೆಗೆ ಬಂದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ, ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಒಳ್ಳೆಯ ಕಮಾಯಿ ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್​ 250 ಕೋಟಿ ರೂಪಾಯಿ ದಾಟಿದೆ. ಇದು ಸಹಜವಾಗಿಯೇ ಚಿತ್ರತಂಡದ ಖುಷಿ ಹೆಚ್ಚಿಸಿದೆ. ಸಿನಿಮಾ ತಂಡ ಈ ಮೊದಲು ಸಕ್ಸಸ್​ ಮೀಟ್​ ಹಮ್ಮಿಕೊಂಡಿತ್ತು. ಈಗ ಎಲ್ಲರಿಗೂ ಧನ್ಯವಾದ ಅರ್ಪಿಸೋಕೆ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ ಸುಕುಮಾರ್​ ಅವರು ಧನಂಜಯ ಬಗ್ಗೆ ಮಾತನಾಡಿದ್ದಾರೆ.

ಧನಂಜಯ ಅವರು ಕಡಿಮೆ ಹೊತ್ತು ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ‘ಪುಷ್ಪ 2’ನಲ್ಲಿ ಅವರ ಪಾತ್ರ ಇರಲಿದೆಯೇ? ಪಾತ್ರ ಇರಲಿದೆ ಎಂದಾದರೆ ಅದು ಎಷ್ಟು ಪ್ರಾಮುಖ್ಯತೆ ವಹಿಸಿಕೊಳ್ಳಲಿದೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದವು. ಈ ಪ್ರಶ್ನೆಗಳಿಗೆ ಸುಕುಮಾರ್​ ಉತ್ತರ ನೀಡಿದ್ದಾರೆ.

‘ಈ ಚಿತ್ರದಲ್ಲಿ ಹಲವು ಕಲಾವಿದರು ನಟಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಈ ಸಂದರ್ಭದಲ್ಲಿ ಕನ್ನಡದ ಧನಂಜಯ ಅವರನ್ನು ನೆನಪಿಸಿಕೊಳ್ಳಬೇಕು. ಕನ್ನಡದಲ್ಲಿ ಅವರು ಹೀರೋ. ಆದಾಗ್ಯೂ ನಮ್ಮ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದಾರೆ. ಅವರದ್ದು ಸಣ್ಣ ಪಾತ್ರ ಎಂದು ಹೇಳೋಕೆ ಸಾಧ್ಯವಿಲ್ಲ. ‘ಪುಷ್ಪ 2’ನಲ್ಲಿ ಅವರ ಪಾತ್ರ ಹೆಚ್ಚು ಹೊತ್ತು ಇರಲಿದೆ. ಧನ್ಯವಾದಗಳು ಧನಂಜಯ’ ಎಂದಿದ್ದಾರೆ ಸುಕುಮಾರ್. ಈ ಮೂಲಕ ಎಲ್ಲಾ ಪ್ರಶ್ನೆ ಹಾಗೂ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

‘ಪುಷ್ಪ ಚಿತ್ರ ಮಾಡುವುದು ನಿಜಕ್ಕೂ ಕಷ್ಟಕರವಾಗಿತ್ತು. ನನ್ನ ತಾಂತ್ರಿಕ ತಂಡವಿಲ್ಲದೆ ಅದು ಸಾಧ್ಯವಿರಲಿಲ್ಲ. ಹೀಗಾಗಿ, ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದ ಎಲ್ಲರಿಗೂ ನಾನು 1 ಲಕ್ಷ ರೂಪಾಯಿ ನೀಡುತ್ತಿದ್ದೇನೆ’ ಎಂದು ಸುಕುಮಾರ್ ಹೇಳಿದ್ದಾರೆ. ಸುಕುಮಾರ್ ಅವರ ಈ ಘೋಷಣೆಯು ನಟ ಅಲ್ಲು ಅರ್ಜುನ್ ಮತ್ತು ಅಭಿಮಾನಿಗಳ ಮನ ಗೆದ್ದಿದೆ.

ಇದನ್ನೂ ಓದಿ:‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ? 

ಹಿಂದಿಯಲ್ಲಿ ‘ಕೆಜಿಎಫ್​’ ವರ್ಸಸ್​ ‘ಪುಷ್ಪ’; ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಗೆದ್ದಿದ್ದು ಯಾರು?

Published On - 5:44 pm, Wed, 29 December 21

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು