AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ಬಿಜೆಪಿಯ ಪ್ರಾಣೇಶ್ ಪರಿಷತ್ ಸದಸ್ಯತ್ವ ಅಸಿಂಧು, ಕೈ ಅಭ್ಯರ್ಥಿಗೆ ಗೆಲುವು

Karnataka News Today Live Updates: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಬಿಜೆಪಿ ನಾಯಕರಿಂದ ಕೆಆರ್‌ಎಸ್ ಜಲಾಶಯ ಮುತ್ತಿಗೆ ಚಳವಳಿ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಕೊನೆಗೂ ಸಿಕ್ಕ ಗ್ರೀನ್ ಸಿಗ್ನಲ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಸೆಲ್ಫಿ ವಿಡಿಯೋ ವೈರಲ್ ಸೇರಿದಂತೆ ಇಂದಿನ ಎಲ್ಲಾ ಪ್ರಮುಖ ಮುಖ್ಯಾಂಶಗಳ ಲೈವ್ ಅಪ್‌ಡೇಟ್‌ಗಳು ಇಲ್ಲಿವೆ.

TV9 Kannada News Live: ಬಿಜೆಪಿಯ ಪ್ರಾಣೇಶ್ ಪರಿಷತ್ ಸದಸ್ಯತ್ವ ಅಸಿಂಧು, ಕೈ ಅಭ್ಯರ್ಥಿಗೆ ಗೆಲುವು
Gayatri And Pranesh
ಭಾವನಾ ಹೆಗಡೆ
| Edited By: |

Updated on:Jul 31, 2026 | 10:48 PM

Share

Breaking News Today Live Updates in Kannada: ತಮಿಳುನಾಡಿಗೆ 3,500 ಕ್ಯೂಸೆಕ್ಸ್ ನೀರು ಹರಿಸುವ CWRC ಆದೇಶ ಖಂಡಿಸಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಇಂದು ಕೆಆರ್‌ಎಸ್ ಜಲಾಶಯ ಮುತ್ತಿಗೆ ಚಳವಳಿ ನಡೆಸುತ್ತಿದ್ದು, ಮಂಡ್ಯದಲ್ಲಿ ಹೋರಾಟ ತೀವ್ರಗೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟಿಗೆ ತೆರೆಬಿದ್ದಿದ್ದು, ರಾಹುಲ್ ಗಾಂಧಿ ಪಟ್ಟಿಗೆ ಅಂತಿಮ ಅಂಕಿತ ಹಾಕಿದ್ದಾರೆ. ಸೋಮವಾರ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಹೊಸ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಪರೀಕ್ಷಾ ಅಕ್ರಮ ತಡೆ ವಿಧೇಯಕ ಅಂಗೀಕಾರವನ್ನು ಐತಿಹಾಸಿಕ ಕ್ಷಣ ಎಂದು ಕರೆದಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE NEWS & UPDATES

The liveblog has ended.
  • 31 Jul 2026 10:25 PM (IST)

    ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ

    ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ ಲಭಿಸಿವೆ. ಜೂಡೋದಲ್ಲಿ ಭಾರತದ ಹರ್ಷ ಸಿಂಗ್, ಅಸ್ಮೀತಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಅಸ್ಮೀತಾ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

  • 31 Jul 2026 09:41 PM (IST)

    ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ

    ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಇಬ್ಬರು ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದು, ದಾಳಿಯಲ್ಲಿ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್​ಪಿದ್ದಾನೆ. ಜಮ್ಮು-ಕಾಶ್ಮೀರದ ಕುಲ್ಗಾಮ್​ನಲ್ಲಿ ಈ ಘಟನೆ ನಡೆದಿದ್ದು, ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ಮಾಡಲಾಗಿದೆ.

  • 31 Jul 2026 07:50 PM (IST)

    ಗಂಗಾ ನದಿಯಲ್ಲಿ ಮುಳುಗಿ ನಾಲ್ವರು ಕನ್ವಾರಿ ಯಾತ್ರಾರ್ಥಿಗಳ ಸಾವು

    ಗಂಗಾ ನದಿಯಲ್ಲಿ ಮುಳುಗಿ ನಾಲ್ವರು ಕನ್ವಾರಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಉತ್ತರಾಖಂಡ್​ನ ಹರಿದ್ವಾರ ಬಳಿ ಗಂಗಾ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಎಸ್​​ಡಿಆರ್​ಎಫ್ ಸಿಬ್ಬಂದಿ, ನಾಲ್ವರ ಶವಗಳನ್ನು ನದಿಯಿಂದ ಹೊರತೆಗೆದಿದ್ದಾರೆ.

  • 31 Jul 2026 07:39 PM (IST)

    ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ

    ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀವಂಡಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತವಾಗಿದ್ದು, ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

  • 31 Jul 2026 06:19 PM (IST)

    ವಿಧನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಆಯ್ಕೆ ಅಸಿಂಧು

    ವಿಧನಪರಿಷತ್ ಸದಸ್ಯರಾಗಿ ಎಂ.ಕೆ.ಪ್ರಾಣೇಶ್ ಅವರ ಆಯ್ಕೆಯನ್ನು ಕೋರ್ಟ್ ಅಸಿಂಧುಗೊಳಿಸಿದೆ. ನಾಮನಿರ್ದೇಶಿತ ಸದಸ್ಯರ ಮತ ಅಸಿಂಧುಗೊಂಡ ಹಿನ್ನೆಲೆಯಲ್ಲಿ ಎಂ.ಕೆ.ಪ್ರಾಣೇಶ್ ಅವರ ಪರಿಷತ್ ಸ್ಥಾನವನ್ನು ಅಸಿಂಧುಗೊಳಿಸಿ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ವಿಜೇತರಾಗಿದ್ದಾರೆ.

  • 31 Jul 2026 06:08 PM (IST)

    ಜಾಮೀನು ಷರತ್ತು ಪೂರೈಸಿದ ವಿನಯ್ ಕುಲಕರ್ಣಿ

    ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ನೀಡಿದೆ. ಹೀಗಾಗಿ ಮಂಜುನಾಥ್, ಆನಂದ್ ಎಂಬುವರಿಂದ ಶ್ಯೂರಿಟಿ ಸಲ್ಲಿಕೆ ಮಾಡಿದ್ದು, ಇಂದು ಸಂಜೆಯೇ ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ.

  • 31 Jul 2026 04:57 PM (IST)

    ಮೈಸೂರಿಗೆ ಪ್ರಧಾನಿ ಮೋದಿ, ಬಿಗಿ ಪೊಲೀಸ್​ ಬಂದೋಬಸ್ತ್

    ನಾಳೆ ಅಂದರೆ ಆಗಸ್ಟ್ 1ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶ್ವಾನ ದಳದ ಸಿಬ್ಬಂದಿ ರಸ್ತೆ ಬದಿಗಳಲ್ಲಿ ತಪಾಸಣೆ ನಡೆಸಿದ್ದಾರೆ. ಇನ್ನು ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

  • 31 Jul 2026 04:47 PM (IST)

    ಜೈಲಿನಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ನನ್ನು ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ. ಮೊನ್ನೆ ಅಷ್ಟೇ ನಟಿ ರಕ್ಷಿತಾ ಜೊತೆ ತೆರಳಿ ದರ್ಶನ್ ಭೇಟಿ ಮಾಡಿದ್ದ ವಿಜಯಲಕ್ಷ್ಮೀ ಈಗ ಇಂದು(ಜುಲೈ 31)  ಮತ್ತೆ ದರ್ಶನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

  • 31 Jul 2026 04:17 PM (IST)

    ಹಿಂಗಾರು ಮಳೆ ವಾಡಿಕೆಯಂತೆ ಬರುವ ನೀರಿಕ್ಷೆ

    ಮಳೆ ಕೊರತೆಯಿಂದಾಗಿ ಕರ್ನಾಟಕದಲ್ಲಿ ಮುಂಗಾರು ಕುಂಠಿತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ಹಿಂಗಾರು ಮಳೆ ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್, ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಎಫೆಕ್ಟ್ ಮಹಾರಾಷ್ಟ್ರಕ್ಕೂ ತಟ್ಟಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಕರಾವಳಿ, ಉಡುಪಿ, ಚಿಕ್ಕ ಮಗಳೂರು ಭಾಗದಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಡುಗು, ಮೈಸೂರು ಭಾಗದಲ್ಲಿ ಸಾದಾರಣ ಮಳೆಯಾಗಲಿದೆ. ಇನ್ನು ಫೆಸಿಪಿಕ್ ಸಾಗರದಲ್ಲಿ ಉಷ್ನಾಂಶ ಹೆಚ್ಚಾಗಿದ್ದು, ಹಿಂಗಾರು ಮಳೆ ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.

  • 31 Jul 2026 03:38 PM (IST)

    ನಾಳೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

    ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ(ಆಗಸ್ಟ್ 01) ಮೈಸೂರಿಗೆ ಭೇಟಿ ನೀಡಲಿದ್ದಾರೆ. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಲಿದ್ದಾರೆ.

  • 31 Jul 2026 02:45 PM (IST)

    ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮತ್ತೆ ಭಾರಿ ಗುಡ್ಡ ಕುಸಿತ

    ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನ ಕವಿಕಲ್ ಗಂಡಿ ಬಳಿ ಸುರಿದ ಭಾರಿ ಮಳೆಗೆ ಭಾರಿ ಪ್ರಮಾಣದ ಕಲ್ಲು ಮತ್ತು ಮಣ್ಣು ರಸ್ತೆಗೆ ಕುಸಿದುಬಿದ್ದಿದೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರಾ ಹಾಗೂ ಅತ್ತಿಗುಂಡಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ವರ್ಷ ಕುಸಿದಿದ್ದ ಸ್ಥಳದಲ್ಲೇ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಮಳೆ ಹೆಚ್ಚಾದರೆ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ.

  • 31 Jul 2026 02:45 PM (IST)

    ಕರ್ನಾಟಕ ಬಂದ್‌ ಬೆಂಬಲ ಕುರಿತು ಇನ್ನೂ ತೀರ್ಮಾನವಿಲ್ಲ’: ಪಿ.ಸಿ. ರಾವ್ ಸ್ಪಷ್ಟನೆ

    ಆಗಸ್ಟ್ 13ರ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ. ಬಂದ್‌ಗೆ ಒಂದು ವಾರ ಇರುವಾಗ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಬೇಕರಿ ಮಾಲೀಕರ ಜಂಟಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಆದರೆ ನಾಡು-ನುಡಿಯ ವಿಚಾರದಲ್ಲಿ ತಮ್ಮ ಬೆಂಬಲ ಸದಾ ಇರಲಿದೆ ಎಂದು ಅವರು ಹೇಳಿದ್ದಾರೆ.

  • 31 Jul 2026 02:44 PM (IST)

    ಸೋಮವಾರ ಶೇ 99ರಷ್ಟು ಸಂಪುಟ ವಿಸ್ತರಣೆ ಪಕ್ಕಾ: ಸಿಎಂ ಸ್ಪಷ್ಟನೆ

    ರಾಜ್ಯ ಸಚಿವ ಸಂಪುಟ ವಿಸ್ತರಣೆ ಶೇಕಡಾ 99ರಷ್ಟು ಸೋಮವಾರವೇ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೋಮವಾರ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರಾದರೂ, ಎಷ್ಟು ಜನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಗುಟ್ಟನ್ನು ಬಿಟ್ಟುಕೊಡಲಿಲ್ಲ.

  • 31 Jul 2026 02:44 PM (IST)

    ಕಲಬುರಗಿ ಜೈಲಿಗೆ ಡಿಜಿಪಿ ಅಲೋಕ್‌ಕುಮಾರ್ ಭೇಟಿ

    ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳು ಪರಾರಿಯಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೈಲು ಇಲಾಖೆ ಡಿಜಿಪಿ ಅಲೋಕ್‌ಕುಮಾರ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಕೈದಿ ಮಸ್ತಾನ್‌ಗಾಗಿ ಶೋಧ ಮುಂದುವರಿದಿದೆ. ಘಟನೆಗೆ ಕಾರಣರಾದ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಶೀಘ್ರದಲ್ಲೇ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವುದಾಗಿ ಹಾಗೂ ಭದ್ರತೆ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

  • 31 Jul 2026 01:30 PM (IST)

    ಕಾವೇರಿ ವಿವಾದ: ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆಶಿ ನೇತೃತ್ವದಲ್ಲಿ ಆ.2ಕ್ಕೆ ಸರ್ವಪಕ್ಷ ಸಭೆ

    ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಿಸಿದ ಹಿನ್ನೆಲೆಯಲ್ಲಿ, ಆಗಸ್ಟ್ 2ರಂದು ಬೆಳಿಗ್ಗೆ 11 ಗಂಟೆಗೆ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರು, ವಿಪಕ್ಷ ನಾಯಕರು, ಕೇಂದ್ರ ಸಚಿವರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಶಾಸಕರು ಭಾಗವಹಿಸಲಿದ್ದಾರೆ.

  • 31 Jul 2026 01:28 PM (IST)

    ಕಾವೇರಿ ವಿವಾದ: ಆ. 13ಕ್ಕೆ ಅಖಂಡ ಕರ್ನಾಟಕ ಬಂದ್‌ಗೆ ವಾಟಾಳ್ ಕರೆ

    ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿರೋಧಿಸಿ ಆಗಸ್ಟ್ 13ರ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಈ ಬಂದ್‌ಗೆ ರಾಜ್ಯ ಸರ್ಕಾರಿ ನೌಕರರ ಸಂಘವೂ ಬೆಂಬಲ ವ್ಯಕ್ತಪಡಿಸಿದೆ.

  • 31 Jul 2026 01:22 PM (IST)

    ದೊಡ್ಡಿಗನಾಳ್‌ನಲ್ಲಿ 2 ಚಿರತೆಗಳ ಅನುಮಾನಾಸ್ಪದ ಸಾವು: ಅರಣ್ಯಾಧಿಕಾರಿಗಳ ಪರಿಶೀಲನೆ

    ಚಿತ್ರದುರ್ಗ ತಾಲೂಕಿನ ದೊಡ್ಡಿಗನಾಳ್​ನಲ್ಲಿ ಎರಡು ಚಿರತೆಗಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿವೆ. ಒಂದು ಚಿರತೆ ಮರದ ಕೊಂಬೆಯ ಮೇಲೆ ಹಾಗೂ ಮತ್ತೊಂದು ಚಿರತೆ ಮರಿ ಮರದ ಬಳಿ ಸತ್ತು ಬಿದ್ದಿದ್ದು, ನೀರು ಕುಡಿಯಲು ಬಂದಾಗ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಡಿಸಿಎಫ್ ಗೋಪ್ಯಾ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • 31 Jul 2026 12:36 PM (IST)

    ಆಗಸ್ಟ್ 13ಕ್ಕೆ ‘ಅಖಂಡ ಕರ್ನಾಟಕ ಬಂದ್’ ಬಹುತೇಕ ಫಿಕ್ಸ್

    ಆಗಸ್ಟ್ 13ರ ಗುರುವಾರ ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಒಕ್ಕೂಟ ಸಿದ್ಧತೆ ನಡೆಸಿದ್ದು, ವಾಟಾಳ್ ನಾಗರಾಜ್ ಅವರಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆ ದಿನ ಯಾವುದೇ ಪರೀಕ್ಷೆಗಳಿಲ್ಲದ ಕಾರಣ ಆ.13ನ್ನು ನಿಗದಿಪಡಿಸಲಾಗಿದ್ದು, ಬಂದ್ ಸಿದ್ಧತೆಗೆ ಕನ್ನಡ ಸಂಘಟನೆಗಳಿಗೆ 12 ದಿನಗಳ ಕಾಲಾವಕಾಶ ಸಿಗಲಿದೆ.

  • 31 Jul 2026 12:26 PM (IST)

    ಹಣ ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕನ ಬೆದರಿಕೆ: ಗುತ್ತಿಗೆದಾರ ಆತ್ಮಹತ್ಯೆ, ಎಫ್‌ಐಆರ್ ದಾಖಲು

    ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ, ಮಾಡಿದ ಸೆಂಟ್ರಿಂಗ್ ಕೆಲಸದ ಹಣ ಕೇಳಿದ್ದಕ್ಕೆ ಕಾಂಗ್ರೆಸ್ ಮುಖಂಡ ಅರವಿಂದ್ ಚವ್ಹಾಣ್ ಹಾಗೂ ಅವರ ಅಳಿಯ ಅಮಿತ್ ರಾಠೋಡ್ ಜೀವ ಬೆದರಿಕೆ ಹಾಕಿದ್ದರೆನ್ನಲಾದ ಘಟನೆಯಿಂದ ಮನನೊಂದು ಖದೀರ್ ಪಾಷಾ (38) ಎಂಬುವವರು ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಅನೀಸಾ ಬೇಗಂ ನೀಡಿದ ದೂರಿನನ್ವಯ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 31 Jul 2026 12:26 PM (IST)

    ಬೆಳಗಾವಿ: ಭಾರಿ ಮಳೆಗೆ NH-48ರಲ್ಲಿ ಸರಣಿ ಅಪಘಾತ, ರಸ್ತೆ ಸಂಚಾರ ಅಸ್ತವ್ಯಸ್ತ

    ಬೆಳಗಾವಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 48ರ ಬಡೆಕೋಳ ಮಠದ ಬಳಿಯ ಘಾಟ್‌ನಲ್ಲಿ ಎರಡು ಲಾರಿಗಳು ಪಲ್ಟಿಯಾಗಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ವಾಹನಗಳು ನಿಯಂತ್ರಣ ತಪ್ಪುತ್ತಿದ್ದು, ಕಳೆದ ನಾಲ್ಕೇ ದಿನಗಳಲ್ಲಿ 6 ಅಪಘಾತಗಳು ಸಂಭವಿಸಿ ಓರ್ವ ಮೃತಪಟ್ಟು, ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿರೇಬಾಗೇವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 31 Jul 2026 12:25 PM (IST)

    ಅಕ್ವೇರಿಯಂ ಮೀನು ಸಾಕಲು ಬಿಡಲಿಲ್ಲವೆಂದು ಮನೆ ಬಿಟ್ಟ ಬಾಲಕ: 4 ದಿನಗಳಿಂದ ಹುಡುಕಾಟ

    ಅಕ್ವೇರಿಯಂ ಮೀನು ತಂದಿದ್ದಕ್ಕೆ ತಂದೆ ಹೊಡೆದು ಬುದ್ಧಿ ಹೇಳಿದರೆಂದು ನೊಂದ ಉತ್ತರಹಳ್ಳಿಯ ಗೌಡನಪಾಳ್ಯದ 13 ವರ್ಷದ ಬಾಲಕ ಕಿಶೋರ್ ಮನೆ ಬಿಟ್ಟು ನಾಪತ್ತೆಯಾಗಿದ್ದಾನೆ. ಜುಲೈ 27ರಂದು ಸೈಕಲ್‌ನಲ್ಲಿ ತೆರಳಿದ ಬಾಲಕ ನಾಲ್ಕು ದಿನ ಕಳೆದರೂ ಸಿಗದೆ ಪೋಷಕರು ಕಣ್ಣೀರಿಡುತ್ತಿದ್ದು, ಸುಬ್ರಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

  • 31 Jul 2026 12:18 PM (IST)

    ‘ಕುಡಿಯುವ ನೀರಿಗೆ ಸಮಸ್ಯೆಯಿಲ್ಲ, ಕೃಷಿಗೆ ಸಂಕಷ್ಟ’: ಸಂಪುಟ ವಿಸ್ತರಣೆ ಸ್ಪಷ್ಟಪಡಿಸಿದ ನಾಯಕರು

    ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವವಿಲ್ಲವಾದರೂ ಕೃಷಿಗೆ ಸಮಸ್ಯೆಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಇನ್ನು ಸೋಮವಾರ ನೂತನ ಸಚಿವರ ಪದಗ್ರಹಣ ಶೇ.100 ರಷ್ಟು ನಡೆಯಲಿದೆ. ಹೈಕಮಾಂಡ್‌ಗೆ ಪಟ್ಟಿ ಸಲ್ಲಿಸಲಾಗಿದ್ದು, ಮುಂಬರುವ ಅಧಿವೇಶನದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಪಕ್ಕಾ ಎಂದು ತಿಳಿಸಲಾಗಿದೆ.

  • 31 Jul 2026 12:18 PM (IST)

    ತಮಿಳುನಾಡು ಸಿಎಂ ವಿಜಯ್‌ ಭೇಟಿ ರಾಜ್ಯಕ್ಕೆ ಮಾರಕ: ಆರ್‌, ಅಶೋಕ್ ಕಿಡಿ

    ತಮಿಳುನಾಡು ಸಿಎಂ ವಿಜಯ್ ಕರ್ನಾಟಕಕ್ಕೆ ಬರುವುದು ರಾಜ್ಯಕ್ಕೆ ಮಾರಕ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌, ಅಶೋಕ್ ಟೀಕಿಸಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸೂಕ್ತ ಸಿದ್ಧತೆ ಮಾಡಿಕೊಂಡಿಲ್ಲ ಹಾಗೂ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿಯಿಂದ ಪ್ರಯೋಜನವಾಗಿಲ್ಲ ಎಂದಿರುವ ಅವರು, ಸರ್ವಪಕ್ಷ ಸಭೆ ಕುರಿತು ಹೆಚ್‌ಡಿಕೆ ಜೊತೆ ಚರ್ಚಿಸುವುದಾಗಿ ತಿಳಿಸಿದರು.

  • 31 Jul 2026 11:24 AM (IST)

    ತಮಿಳುನಾಡು ಸಿಎಂ ವಿಜಯ್ ಕರ್ನಾಟಕ ಪ್ರವಾಸ ನಿರ್ಧಾರವಾಗಿಲ್ಲ: ಸಚಿವ ನಿರ್ಮಲ್‌ಕುಮಾರ್ ಸ್ಪಷ್ಟನೆ

    ಕಾವೇರಿ ವಿವಾದದ ನಡುವೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಚರ್ಚೆಗೆ ಇಂಧನ ಸಚಿವ ಸಿ.ಟಿ.ಆರ್. ನಿರ್ಮಲ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ‘ಸಿಎಂ ಭೇಟಿ ಕುರಿತು ಸರ್ಕಾರದಿಂದ ಯಾವುದೇ ಅಂತಿಮ ನಿರ್ಧಾರವಾಗಿಲ್ಲ, ಸೂಕ್ತ ಸಮಯದಲ್ಲಿ ಅಧಿಕೃತ ಮಾಹಿತಿ ನೀಡಲಾಗುವುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  • 31 Jul 2026 10:57 AM (IST)

    ಯೋಗೀಶ್ ಗೌಡ ಕೊಲೆ ಕೇಸ್: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು

    ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅವರ ಶಿಕ್ಷೆ ಹಾಗೂ ದೋಷಿ ತೀರ್ಪಿಗೆ ತಡೆಯಾಜ್ಞೆ ನೀಡಿ, 5 ಲಕ್ಷ ರೂ. ಬಾಂಡ್ ಒದಗಿಸಲು ಆದೇಶಿಸಿದೆ. ಇದರಿಂದ ಅವರ ಶಾಸಕ ಸ್ಥಾನ ಉಳಿದುಕೊಂಡಂತಾಗಿದ್ದು, ಕೋರ್ಟ್ ಅನುಮತಿಯಿಲ್ಲದೆ ದೇಶ ಬಿಡದಂತೆ ಷರತ್ತು ವಿಧಿಸಲಾಗಿದೆ. ಮತ್ತಷ್ಟು ಓದಿ

  • 31 Jul 2026 10:21 AM (IST)

    ಚಾಮರಾಜನಗರ ಚಿತ್ರಮಂದಿರದಿಂದ ನಟ, ಟಿಎನ್‌ ಸಿಎಂ ವಿಜಯ್ ಸಿನಿಮಾ ಪ್ರದರ್ಶನ ರದ್ದು

    ಕಾವೇರಿ ವಿವಾದದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳ ಮುತ್ತಿಗೆ ಎಚ್ಚರಿಕೆಗೆ ಅಂಜಿದ ಚಾಮರಾಜನಗರದ ಶ್ರೀ ಬಸವೇಶ್ವರ ಚಿತ್ರಮಂದಿರದ ಮಾಲೀಕರು, ತಮಿಳುನಾಡು ಸಿಎಂ ಹಾಗೂ ನಟ ವಿಜಯ್ ಅಭಿನಯದ ‘ಜನನಾಯಗನ್’ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಥಿಯೇಟರ್ ಸಿಬ್ಬಂದಿ ಬ್ಯಾನರ್-ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

  • 31 Jul 2026 10:21 AM (IST)

    ಭಿವಂಡಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: ಎಂಟು ಮಂದಿ ದುರ್ಮರಣ

    ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದುಬಿದ್ದ ಪರಿಣಾಮ ಎಂಟು ಜನರು ದುರ್ಮರಣಕ್ಕೀಡಾಗಿದ್ದಾರೆ. ಅಪಾಯಕಾರಿ ಎಂದು ಗುರುತಿಸಲಾಗಿದ್ದ ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆಯಿದ್ದು, ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

  • 31 Jul 2026 10:20 AM (IST)

    ಸೋಮವಾರ ನೂತನ ಸಚಿವರ ಪದಗ್ರಹಣ ಸಾಧ್ಯತೆ

    ಸೋಮವಾರ ನೂತನ ಸಚಿವರ ಪದಗ್ರಹಣ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಲೋಕಭವನದ ಒಳಗೆ ವೇದಿಕೆ ಹಾಗೂ ಹೊರಭಾಗದ ತಿಮ್ಮಯ್ಯ ವೃತ್ತ ಸಂಪರ್ಕ ರಸ್ತೆಯಲ್ಲಿ ಬಿಗಿ ಭದ್ರತೆಯ ಬ್ಯಾರಿಕೇಡ್ ಸಿದ್ಧತೆ ನಡೆಸಲಾಗಿತ್ತು. ಆದರೆ, ಹೈಕಮಾಂಡ್ ಪಟ್ಟಿ ಫೈನಲ್ ಆಗದ ಕಾರಣ ಪದಗ್ರಹಣವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

  • 31 Jul 2026 09:28 AM (IST)

    ಮಹಾಗಾಂವ್ ಬಳಿ KKRTC ಬಸ್ ಪಲ್ಟಿ: ಚಾಲಕ, ನಿರ್ವಾಹಕ ಸೇರಿ ಐವರಿಗೆ ಗಾಯ

    ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಬಳಿ ಬೀದರ್‌ನಿಂದ ಕಲಬುರಗಿಗೆ ಬರುತ್ತಿದ್ದ KKRTC ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಚಾಲಕ, ನಿರ್ವಾಹಕ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 31 Jul 2026 09:28 AM (IST)

    CWMA ಆದೇಶ ಖಂಡಿಸಿ ಕೆಆರ್‌ಎಸ್‌ ಬಳಿ ಬಿಜೆಪಿ ಪ್ರತಿಭಟನೆ: ಭದ್ರತೆ ಬಿಗಿ

    ತಮಿಳುನಾಡಿಗೆ ದಿನವೂ 3,500 ಕ್ಯೂಸೆಕ್ ನೀರು ಹರಿಸುವ CWMA ಆದೇಶ ಖಂಡಿಸಿ ಇಂದು ಬಿಜೆಪಿ KRS ಜಲಾಶಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದೆ. ಮುಂಜಾಗ್ರತಾ ಕ್ರಮವಾಗಿ 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಐಜಿಪಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.

Published On - Jul 31,2026 9:27 AM

Follow Us
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ