AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯದ ನಡುವೆ ಸಿನಿಮಾ ಚಿತ್ರೀಕರಣಕ್ಕೆ ಬಿಡುವು ಮಾಡಿಕೊಂಡ ಪವನ್ ಕಲ್ಯಾಣ್

ಪವನ್ ಕಲ್ಯಾಣ್, ಆಂಧ್ರ ಪ್ರದೇಶ ಉಪ ಮುಖ್ಯ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಆ ಮೂರೂ ಸಿನಿಮಾಗಳನ್ನು ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡಿದ್ದರು. ಆ ಮೂರೂ ಸಿನಿಮಾಗಳ ಹಲವು ಭಾಗದ ಚಿತ್ರೀಕರಣವನ್ನು ಅವರು ಡಿಸಿಎಂ ಆದ ಬಳಿಕವೇ ಚಿತ್ರೀಕರಿಸಲಾಗಿದೆ. ಆದರೆ ಇದೀಗ ಮೊದಲ ಬಾರಿಗೆ ಪವನ್ ಕಲ್ಯಾಣ್ ಅವರು ಡಿಸಿಎಂ ಆಗಿದ್ದಾಗಲೇ ಒಪ್ಪಿಕೊಂಡಿರುವ ಹೊಸ ಸಿನಿಮಾದ ಚಿತ್ರೀಕರಣವನ್ನು ಅವರು ಶೀಘ್ರವೇ ಆರಂಭಿಸಲಿದ್ದಾರೆ.

ರಾಜಕೀಯದ ನಡುವೆ ಸಿನಿಮಾ ಚಿತ್ರೀಕರಣಕ್ಕೆ ಬಿಡುವು ಮಾಡಿಕೊಂಡ ಪವನ್ ಕಲ್ಯಾಣ್
Pawan Kalyan
ಮಂಜುನಾಥ ಸಿ.
|

Updated on: Oct 01, 2026 | 3:50 PM

Share

ಮುಖ್ಯಾಂಶಗಳು

  • ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್
  • ಹೊಸ ಸಿನಿಮಾನಲ್ಲಿ ನಟಿಸಲಿರುವ ಪವನ್ ಕಲ್ಯಾಣ್
  • ರಾಜಕೀಯದ ನಡುವೆಯೇ ಸಿನಿಮಾದ ಶೂಟಿಂಗ್

ಪವನ್ ಕಲ್ಯಾಣ್, ಸ್ಟಾರ್ ನಟ, ಕೋಟ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾದಿಂದ ಗಳಿಸಿದ ಜನಪ್ರಿಯತೆಯಿಂದಲೇ ಈಗ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ ಆಗಿದ್ದಾರೆ. ಪವನ್ ಕಲ್ಯಾಣ್, ಆಂಧ್ರ ಪ್ರದೇಶ ಉಪ ಮುಖ್ಯ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಆ ಮೂರೂ ಸಿನಿಮಾಗಳನ್ನು ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡಿದ್ದರು. ಆ ಮೂರೂ ಸಿನಿಮಾಗಳ ಹಲವು ಭಾಗದ ಚಿತ್ರೀಕರಣವನ್ನು ಅವರು ಡಿಸಿಎಂ ಆದ ಬಳಿಕವೇ ಚಿತ್ರೀಕರಿಸಲಾಗಿದೆ. ಆದರೆ ಇದೀಗ ಮೊದಲ ಬಾರಿಗೆ ಪವನ್ ಕಲ್ಯಾಣ್ ಅವರು ಡಿಸಿಎಂ ಆಗಿದ್ದಾಗಲೇ ಒಪ್ಪಿಕೊಂಡಿರುವ ಹೊಸ ಸಿನಿಮಾದ ಚಿತ್ರೀಕರಣವನ್ನು ಅವರು ಶೀಘ್ರವೇ ಆರಂಭಿಸಲಿದ್ದಾರೆ.

ಪವನ್ ಅವರು, ಡಿಸಿಎಂ ಆಗುವ ಮುಂಚೆ ‘ಹರಿ ಹರ ವೀರ ಮಲ್ಲು’, ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಓಜಿ’ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಈ ಮೂರೂ ಸಿನಿಮಾಗಳ ಚಿತ್ರೀಕರಣವನ್ನು ಪವನ್, ಡಿಸಿಎಂ ಆದ ಬಳಿಕ ಪೂರೈಸಿ ಸಿನಿಮಾ ರಿಲೀಸ್ ಮಾಡಲಾಯ್ತು. ಈ ಮೂರೂ ಸಿನಿಮಾಗಳಲ್ಲಿ ‘ಓಜಿ’ ಸಿನಿಮಾ ಭರ್ಜರಿ ಪ್ರದರ್ಶನ ಕಂಡು ದೊಡ್ಡ ಹಿಟ್ ಎನಿಸಿಕೊಂಡಿತು. ಖುದ್ದು ಪವನ್ ಕಲ್ಯಾಣ್ ಸಹ ತಮಗೆ ‘ಓಜಿ’ ಸಿನಿಮಾ ಇಷ್ಟವಾಯ್ತು ಎಂದು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ‘ಓಜಿ 2’ ಸಿನಿಮಾನಲ್ಲಿ ನಟಿಸುವ ಮನಸ್ಸು ಮಾಡಿದ್ದು, ಸಿನಿಮಾ ಈಗಾಗಲೇ ಘೋಷಣೆ ಆಗಿದೆ. ಸಿನಿಮಾದ ಚಿತ್ರೀಕರಣಕ್ಕೆ ಪವನ್ ಕಲ್ಯಾಣ್ ಸಮಯವನ್ನು ಸಹ ಹೊಂದಿಸಿಕೊಂಡಿದ್ದಾರೆ.

‘ಓಜಿ 2’ ಸಿನಿಮಾದ ಘೋಷಣೆ ಆಗಿ ಸಾಕಷ್ಟು ಸಮಯವೇ ಆಗಿದೆ. ಆದರೆ ಸಿನಿಮಾದ ಚಿತ್ರೀಕರಣಕ್ಕೆ ದಿನಗಳನ್ನು ಹೊಂದಿಸುವುದು ಪವನ್ ಕಲ್ಯಾಣ್ ಅವರಿಗೆ ಕಷ್ಟವಾಗಿತ್ತು. ಆದರೆ ಇದೀಗ ಕೊನೆಗೂ ಸಿನಿಮಾ ಚಿತ್ರೀಕರಣಕ್ಕೆ ಪವನ್ ಕಲ್ಯಾಣ್ ಬಿಡುವು ಮಾಡಿಕೊಂಡಿದ್ದು, ಸಿನಿಮಾದ ಚಿತ್ರೀಕರಣ ನವೆಂಬರ್ ತಿಂಗಳಿನಿಂದ ಶುರು ಆಗಲಿದೆಯಂತೆ. ಆದರೆ ಸಿನಿಮಾದ ಚಿತ್ರೀಕರಣಕ್ಕೆ ಪವನ್ ಕಲ್ಯಾಣ್ ಸಾಕಷ್ಟು ಷರತ್ತುಗಳನ್ನು ಹಾಕಿದ್ದು, ಅವರ ಅನುಕೂಲಕ್ಕೆ ತಕ್ಕಂತೆ ಚಿತ್ರೀಕರಣ ಮಾಡಲಾಗುತ್ತಿದೆ.

ಇದನ್ನೂ ಓದಿ:ತಮ್ಮ ಪವನ್ ಕಲ್ಯಾಣ್ ವ್ಯಕ್ತಿತ್ವದ ಬಗ್ಗೆ ಅಣ್ಣ ಚಿರಂಜೀವಿ ಹೆಮ್ಮೆಯ ಮಾತು

ಸಂಪೂರ್ಣ ಚಿತ್ರೀಕರಣವನ್ನು ಸೆಟ್​​ನಲ್ಲಿಯೇ ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲದೆ ಸಿನಿಮಾದ ಸೆಟ್ ಅನ್ನೂ ಸಹ ಹೈದರಾಬಾದ್​​ನಲ್ಲಿ ಅಲ್ಲದೆ, ಪವನ್ ಕಲ್ಯಾಣ್ ಅವರ ಆಡಳಿತ ಕಾರ್ಯಕ್ಕೆ ಹತ್ತಿರದ ಸ್ಥಳದಲ್ಲಿ ಹಾಕಲಾಗುತ್ತಿದೆಯಂತೆ. ಸೀಮಿತ ಅವಧಿಯ ಡೇಟ್ಸ್​​ಗಳನ್ನು ಪವನ್ ಕಲ್ಯಾಣ್ ಅವರು ನೀಡಿದ್ದು ಅಷ್ಟರಲ್ಲೇ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸುವ ಜವಾಬ್ದಾರಿ ನಿರ್ದೇಶಕನ ಮೇಲಿದೆ.

‘ಓಜಿ 2’ ಸಿನಿಮಾವನ್ನು ಸುಜೀತ್ ನಿರ್ದೇಶನ ಮಾಡಲಿದ್ದಾರೆ. ‘ಓಜಿ’ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು. ಸಿನಿಮಾನಲ್ಲಿ ಡಾನ್ ಒಬ್ಬನ ಬಲಗೈ ಭಂಟನ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದರು. ವಿಲನ್ ಆಗಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ ನಟಿಸಿದ್ದರು. ಇದೀಗ ‘ಓಜಿ 2’ ಸಿನಿಮಾನಲ್ಲಿ ಪವನ್ ಕಲ್ಯಾಣ್ ಅವರ ಪಾತ್ರ ಜಪಾನಿನಲ್ಲಿ ಇದ್ದಾಗಿನ ಕತೆಯನ್ನು ಒಳಗೊಂಡಿರಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More