ಹುಟ್ಟೂರಿನ ಮೇಲಿನ ಪ್ರೀತಿ ಮೆರೆದ ಸೋನು ಸೂದ್; ಹೆಣ್ಣುಮಕ್ಕಳಿಗೆ ಸಾವಿರ ಸೈಕಲ್ ನೀಡಿದ ರಿಯಲ್ ಹೀರೋ
ಕೊವಿಡ್ ಪ್ರಕರಣ ಮತ್ತೆ ಹೆಚ್ಚುತ್ತಿದೆ. ಶೀಘ್ರವೇ ಮೂರನೆ ಅಲೆ ಬರುವ ಸೂಚನೆ ಸಿಕ್ಕಿದೆ. ಇದು ಸಾಕಷ್ಟು ಜನರಲ್ಲಿ ಆತಂಕ ಮೂಡಿಸಿದೆ. ಈ ಸಂದರ್ಭದಲ್ಲಿ ಸೋನು ಸೂದ್ ತಮ್ಮ ಕಾರ್ಯವನ್ನು ಹೆಚ್ಚಿಸಿದ್ದಾರೆ.

ನಟ ಸೋನು ಸೂದ್ ಮಾಡುತ್ತಿರುವ ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕೊವಿಡ್ ಮೊದಲನೆ ಅಲೆ ಕಾಣಿಸಿಕೊಂಡಾಗ ಸೋನು ಸಾಮಾಜಿಕ ಕೆಲಸ ಆರಂಭಿಸಿದ್ದರು. ಆ ಬಳಿಕ, ಅವರು ಅದನ್ನು ನಿಲ್ಲಿಸಲೇ ಇಲ್ಲ. ಒಂದಾದ ಮೇಲೆ ಒಂದರಂತೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಲೇ ಹೋದರು. ಕೇವಲ ಕೊವಿಡ್ಗೆ ಮಾತ್ರ ಸೀಮಿತವಾಗದೆ, ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡರು ಸೋನು. ಈಗ ಅವರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಈ ಬಾರಿ ತಮ್ಮ ಹುಟ್ಟೂರಿನ ಮೇಲೆ ಪ್ರೀತಿ ತೋರಿಸಿದ್ದಾರೆ.
ಕೊವಿಡ್ ಪ್ರಕರಣ ಮತ್ತೆ ಹೆಚ್ಚುತ್ತಿದೆ. ಶೀಘ್ರವೇ ಮೂರನೆ ಅಲೆ ಬರುವ ಸೂಚನೆ ಸಿಕ್ಕಿದೆ. ಇದು ಸಾಕಷ್ಟು ಜನರಲ್ಲಿ ಆತಂಕ ಮೂಡಿಸಿದೆ. ಈ ಸಂದರ್ಭದಲ್ಲಿ ಸೋನು ಸೂದ್ ತಮ್ಮ ಕಾರ್ಯವನ್ನು ಹೆಚ್ಚಿಸಿದ್ದಾರೆ. ಈ ಮಧ್ಯೆ, ಮೊಗಾ ಕಿ ಧಿ (ಮೊಗಾದ ಮಗಳು) ಹೆಸರಿನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.
ಸಹೋದರಿ ಮಾಳವಿಕಾ ಸೂದ್ ಜತೆ ಸೇರಿ ಸೋನು ಸೂದ್ ತಮ್ಮ ಹುಟ್ಟೂರಾದ ಮೊಗಾದಲ್ಲಿರುವ 1,000 ವಿದ್ಯಾರ್ಥಿನಿಯರು ಹಾಗೂ ಸಾಮಾಜಿಕ ಕಾರ್ಯಕರ್ತೆಯರಿಗೆ ಸೈಕಲ್‌ಗಳನ್ನು ನೀಡಿದ್ದಾರೆ. ಇದರಿಂದ ಸುಮಾರು 40-45 ಗ್ರಾಮದ ವಿದ್ಯಾರ್ಥಿನಿಯರಿಗೆ ಸಹಾಯ ಆಗಿದೆ. ಸೂದ್ ಚಾರಿಟಿ ಫೌಂಡೇಶನ್‌ನೊಂದಿಗೆ ಮಾಳವಿಕಾ ಸೂದ್ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.
‘ಇಲ್ಲಿನವರಿಗೆ ಮನೆಯಿಂದ ಶಾಲೆಗೆ ಹೋಗುವುದು ತುಂಬಾ ದೂರ. ಇದರಿಂದಾಗಿ ವಿದ್ಯಾರ್ಥಿನಿಯರು ತೀವ್ರ ತೊಂದರೆಪಟ್ಟು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಅವರ ಸಮಸ್ಯೆಯನ್ನು ಪರಿಹರಿಸಲು, ಸಹಾಯ ಮಾಡಲು 8ನೇ ತರಗತಿಯಿಂದ 12ನೇ ತರಗತಿವರೆಗಿನ ಅರ್ಹ ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಅಭಿಯಾನದಲ್ಲಿ ಈ ಸೈಕಲ್‌ಗಳನ್ನು ಸಾಮಾಜಿಕ ಕಾರ್ಯಕರ್ತರಿಗೂ ನೀಡುತ್ತೇವೆ’ ಎಂದಿದ್ದಾರೆ ಸೋನು. ಸರ್ಕಾರಿ ಶಾಲೆಯ ಶಿಕ್ಷಕರು ಅರ್ಹ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡಿದ್ದಾರೆ.
ಇತ್ತೀಚೆಗೆ ಸೋನುಗೆ ನೋಟಿಸ್ ಜಾರಿ ಆಗಿತ್ತು. ಸೋನು ಸೂದ್ ತಮ್ಮ ಹೆಸರಿನಲ್ಲಿ ಇರುವ ಆರು ಅಂತಸ್ತಿನ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಾಡು ಮಾಡಿದ್ದರು. ಇದಕ್ಕೆ ಅವರು ಯಾವುದೇ ಒಪ್ಪಿಗೆ ಪಡೆದುಕೊಂಡಿರಲಿಲ್ಲ. ಹೆಚ್ಚಿನ ಟ್ಯಾಕ್ಸ್ ಕೂಡ ತುಂಬಿಲ್ಲ. ನಿಯಮಗಳ ಪ್ರಕಾರ ಈ ರೀತಿ ಮಾಡುವುದು ತಪ್ಪು. ಈ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ಸೋನು ಸೂದ್ಗೆ ಈ ಮೊದಲು ನೋಟಿಸ್ ನೀಡಿದ್ದರು. ಈಗ ಅವರ ಹೆಸರಿಗೆ ಮತ್ತೊಂದು ನೋಟಿಸ್ ಜಾರಿ ಆಗಿದೆ.
ಇದನ್ನೂ ಓದಿ: ಸಹೋದರಿಯ ರಾಜಕೀಯ ಪ್ರವೇಶ ಘೋಷಿಸಿದ ನಟ ಸೋನು ಸೂದ್, ಯಾವ ಪಕ್ಷಕ್ಕೆ ಎಂಬುದು ಶೀಘ್ರದಲ್ಲೇ ನಿರ್ಧಾರ
ಭರವಸೆ ಈಡೇರಿಸದ ಸೋನು ಸೂದ್ಗೆ ಹೆಚ್ಚಿತು ಸಂಕಷ್ಟ; ನಟನಿಗೆ ಎರಡನೇ ಬಾರಿಗೆ ನೋಟಿಸ್




