AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರಿಯ ರಾಜಕೀಯ ಪ್ರವೇಶ ಘೋಷಿಸಿದ ನಟ ಸೋನು ಸೂದ್, ಯಾವ ಪಕ್ಷಕ್ಕೆ ಎಂಬುದು ಶೀಘ್ರದಲ್ಲೇ ನಿರ್ಧಾರ

Actor Sonu Sood “ಮಾಳವಿಕಾ ಸಿದ್ಧವಾಗಿದ್ದಾರೆ. ಜನರ ಸೇವೆಗೆ ಅವರ ಬದ್ಧತೆ ಅಪ್ರತಿಮವಾಗಿದೆ, ”ಎಂದು ಸೂದ್ ಮೊಗಾದ ತಮ್ಮ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವರು ಇತ್ತೀಚೆಗೆ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರನ್ನು ಭೇಟಿಯಾಗಿದ್ದರು.

ಸಹೋದರಿಯ ರಾಜಕೀಯ ಪ್ರವೇಶ ಘೋಷಿಸಿದ ನಟ ಸೋನು ಸೂದ್, ಯಾವ ಪಕ್ಷಕ್ಕೆ ಎಂಬುದು ಶೀಘ್ರದಲ್ಲೇ ನಿರ್ಧಾರ
ಸೋನು ಸೂದ್ ಸುದ್ದಿಗೋಷ್ಠಿ
TV9 Web
| Edited By: |

Updated on:Nov 14, 2021 | 2:05 PM

Share

ಚಂಡೀಗಡ:  ಸಹೋದರಿ ಮಾಳವಿಕಾ ಸೂದ್ ಸಾಚಾರ್ (Malvika Sood Sachar)ರಾಜಕೀಯ ಪ್ರವೇಶವನ್ನು ಘೋಷಿಸಿದ ಬಾಲಿವುಡ್ ನಟ ಸೋನು ಸೂದ್ (Sonu Sood) ಅವರು ಪಂಜಾಬ್ (Punjab) ಜನರ ಸೇವೆಗೆ ಸಿದ್ಧ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರು ಯಾವ ರಾಜಕೀಯ ಪಕ್ಷವನ್ನು ಸೇರುತ್ತಾರೆ ಎಂಬುದನ್ನು ಅವರು ಇನ್ನೂ ನಿರ್ಧರಿಸಿಲ್ಲ. ಅವರ ನಿರ್ಧಾರವನ್ನು “ಸರಿಯಾದ ಸಮಯದಲ್ಲಿ ಬಹಿರಂಗಪಡಿಸಲಾಗುವುದು” ಎಂದು ಸೋನು ಸೂದ್ ಹೇಳಿದ್ದಾರೆ. “ಮಾಳವಿಕಾ ಸಿದ್ಧವಾಗಿದ್ದಾರೆ. ಜನರ ಸೇವೆಗೆ ಅವರ ಬದ್ಧತೆ ಅಪ್ರತಿಮವಾಗಿದೆ, ”ಎಂದು ಸೂದ್ ಮೊಗಾದ ತಮ್ಮ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅವರು ಇತ್ತೀಚೆಗೆ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರನ್ನು ಭೇಟಿಯಾಗಿದ್ದರು. ತಾವು ಎಎಪಿಯ ಅರವಿಂದ್ ಕೇಜ್ರಿವಾಲ್ ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಸೇರಿದಂತೆ ಇತರ ರಾಜಕೀಯ ನಾಯಕರನ್ನು ಭೇಟಿ ಮಾಡಲು ಸಿದ್ಧ ಎಂದು ಸೂದ್ ಹೇಳಿದ್ದಾರೆ. ” ರಾಜಕೀಯ ಪಕ್ಷವನ್ನು ಸೇರುವುದು ಜೀವನದ ಒಂದು ದೊಡ್ಡ ನಿರ್ಧಾರವಾಗಿದೆ, ಇದು ಸಿದ್ಧಾಂತಗಳ ಬಗ್ಗೆ ಆಗಿದ್ದುಹೆಚ್ಚು ಪ್ರಾಸಂಗಿಕ ಸಭೆಗಳಲ್ಲ” ಎಂದು ಅವರು ವಿವರಿಸಿದರು. “ನಾವು ಪಕ್ಷದ ಬಗ್ಗೆ ಸರಿಯಾದ ಸಮಯದಲ್ಲಿ ಬಹಿರಂಗಪಡಿಸುತ್ತೇವೆ.”ಎಂದು ಹೇಳಿದ ಸೂದ್ ಮೋಗಾ ಕ್ಷೇತ್ರದಿಂದ ಮಾಳವಿಕಾ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

ನೀವು ಕೂಡ ರಾಜಕೀಯಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೂದ್, “ಮೊದಲು ಮಾಳವಿಕಾ ಅವರನ್ನು ಬೆಂಬಲಿಸುವುದು ಮುಖ್ಯ, ಅವರು ಮೊಗಾದಲ್ಲಿ ನಮ್ಮ ಬೇರುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ನನ್ನ ಸ್ವಂತ ಯೋಜನೆಗಳನ್ನು ನಾನು ನಂತರ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಆರೋಗ್ಯ ರಕ್ಷಣೆ ಮಾಳವಿಕಾ ಅವರ ಪ್ರಮುಖ ಆದ್ಯತೆಯಾಗಿದೆ. ಚುನಾಯಿತರಾದರೆ, ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಅವುಗಳನ್ನು ಪಡೆಯುವುದನ್ನು ಅವರು ಖಚಿತಪಡಿಸುತ್ತಾರೆ ಎಂದು ಸೂದ್ ಹೇಳಿದರು. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆಯೂ ಅವರು ಮಾತನಾಡಲಿದ್ದಾರೆ. “ಪಂಜಾಬ್‌ನಲ್ಲಿ ಯುವಕರು ಕೆಲಸ ಸಿಗದಿದ್ದಾಗ, ನಿರುದ್ಯೋಗಿಗಳಾಗಿದ್ದಾಗ ಮಾತ್ರ ಡ್ರಗ್‌ಗಳ ಮೊರೆ ಹೋಗುತ್ತಾರೆ. ನಾವು ಈಗಾಗಲೇ ಅದರ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಐಟಿ ದಾಳಿ ಬಗ್ಗೆ ಮಾತಾಡಿ ಸೋನು ಸೂದ್​ಗೆ ಕುಟುಕಿದ ಕಪಿಲ್​ ಶರ್ಮಾ; ರಿಯಲ್​ ಹೀರೋ ಪ್ರತಿಕ್ರಿಯೆ ಹೇಗಿತ್ತು?

ಇದನ್ನೂ ಓದಿ: ಹಿಂದುತ್ವ ಮತ್ತು ಹಿಂದೂಯಿಸಂ ನಡುವಿನ ವ್ಯತ್ಯಾಸ ತಿಳಿಸಿದ ರಮ್ಯಾ; ವಾಸ್ತವ ವಿವರಿಸಿ ಬೇಸರ ವ್ಯಕ್ತಪಡಿಸಿದ ನಟಿ

Published On - 1:47 pm, Sun, 14 November 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ