ಐಟಿ ದಾಳಿ ಬಗ್ಗೆ ಮಾತಾಡಿ ಸೋನು ಸೂದ್​ಗೆ ಕುಟುಕಿದ ಕಪಿಲ್​ ಶರ್ಮಾ; ರಿಯಲ್​ ಹೀರೋ ಪ್ರತಿಕ್ರಿಯೆ ಹೇಗಿತ್ತು?

ಐಟಿ ದಾಳಿ ಬಗ್ಗೆ ಮಾತಾಡಿ ಸೋನು ಸೂದ್​ಗೆ ಕುಟುಕಿದ ಕಪಿಲ್​ ಶರ್ಮಾ; ರಿಯಲ್​ ಹೀರೋ ಪ್ರತಿಕ್ರಿಯೆ ಹೇಗಿತ್ತು?
ಕಪಿಲ್​ ಶರ್ಮಾ, ಸೋನು ಸೂದ್

Sonu Sood: ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಸೋನು ಸೂದ್​ ಮತ್ತು ಕಪಿಲ್​ ಶರ್ಮಾ ಜೊತೆಯಾಗಿ 25 ಲಕ್ಷ ರೂ. ಗಳಿಸಿದರು. ಅದನ್ನು ‘ಸೂದ್​ ಚಾರಿಟಿ ಫೌಂಡೇಶನ್​’ಗೆ ನೀಡಲಾಯಿತು.

TV9kannada Web Team

| Edited By: Madan Kumar

Nov 14, 2021 | 8:12 AM

ನಟ ಸೋನು ಸೂದ್​ (Sonu Sood) ಅವರು ಅನೇಕರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ. ಮೊದಲ ಲಾಕ್​ಡೌನ್​ನಿಂದ ಇಲ್ಲಿಯವರೆಗೆ ಅವರು ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಸಹಾಯಕ್ಕಾಗಿ ಪ್ರತಿದಿನ ಅವರ ಬಳಿ ಅಪಾರ ಸಂಖ್ಯೆಯ ಜನರು ಮನವಿ ಮಾಡಿಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಸೋನು ಸೂದ್​ ಅವರ ಇಮೇಜ್​ ಬದಲಾಗಿದೆ. ಈ ಮೊದಲು ಸಿನಿಮಾಗಳಲ್ಲಿ ಅವರು ವಿಲನ್​ ಪಾತ್ರ ಮಾಡುತ್ತಿದ್ದರು. ಆದರೆ ಈಗ ಅವರು ಅಂಥ ಪಾತ್ರ ಮಾಡಿದರೆ ಜನರು ಒಪ್ಪುವುದಿಲ್ಲ. ಅಷ್ಟರಮಟ್ಟಿಗೆ ಅವರ ಮೇಲೆ ಜನರಿಗೆ ಗೌರವ ಭಾವನೆ ಮೂಡಿದೆ. ಆದರೆ ಅಂಥ ನಟನಿಗೆ ಕಾಮಿಡಿಯಲ್​ ಕಪಿಲ್​ ಶರ್ಮಾ (Kapil Sharma) ಅವರು ಲೇವಡಿ ಮಾಡಿದ್ದಾರೆ. ಈ ಘಟನೆಗೆ ಸಾಕ್ಷಿ ಆಗಿದ್ದು ‘ಕೌನ್​ ಬನೇಗಾ ಕರೋಡ್​ಪತಿ’ ಶೋ (Kaun Banega Crorepati). ಅಮಿತಾಭ್​ ಬಚ್ಚನ್​ (Amitabh Bachchan) ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಸೋನು ಸೂದ್​ ಮತ್ತು ಕಪಿಲ್​ ಶರ್ಮಾ ಅವರು ಇತ್ತೀಚೆಗೆ ಅತಿಥಿಗಳಾಗಿ ಭಾಗವಹಿಸಿದ್ದರು.  

ಕೆಲವೇ ತಿಂಗಳ ಹಿಂದೆ ಸೋನು ಸೂದ್ ಅವರ ಮನೆ ಮೇಲೆ ಐಟಿ ದಾಳಿ ಆಗಿದ್ದು ಗೊತ್ತೇ ಇದೆ. ಅದನ್ನೇ ಇಟ್ಟುಕೊಂಡು ಕಪಿಲ್​ ಶರ್ಮಾ ಈಗ ಕಾಮಿಡಿ ಮಾಡಿದ್ದಾರೆ. ‘ಇವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಷ್ಟರಮೇಲೂ ಅವರು ಹಣ ಗಳಿಸಲು ಈ ಶೋಗೆ ಬಂದಿದ್ದಾರೆ’ ಎಂದರು ಕಪಿಲ್​ ಶರ್ಮಾ. ಅದಕ್ಕೆ ನಗುವಿನಿಂದಲೇ ಪ್ರತಿಕ್ರಿಯಿಸಿದರು ಸೋನು ಸೂದ್​.

ವೇದಿಕೆ ಮೇಲೆ ಕಪಿಲ್​ ಶರ್ಮಾ ಮತ್ತು ಸೋನು ಸೂದ್​ ಸ್ಕಿಟ್​ ಮಾಡಬೇಕಿತ್ತು. ‘ನನ್ನ ಬಳಿ ಗಾಡಿ ಇದೆ, ಹಣ ಇದೆ, ಬ್ಯಾಂಕ್​ ಬ್ಯಾಲೆನ್ಸ್​ ಇದೆ. ನಿನ್ನ ಬಳಿ ಏನಿದೆ’ ಎಂದು ಸೋನು ಸೂದ್​ ಅವರು ‘ದೀವಾರ್​’ ಸಿನಿಮಾದ ಡೈಲಾಗ್​ ಹೊಡೆದರು. ಅದಕ್ಕೆ ಉತ್ತರಿಸಿದ ಕಪಿಲ್​ ಶರ್ಮಾ, ‘ನನ್ನ ಬಳಿ ಐಟಿ ಅಧಿಕಾರಿಗಳ ಫೋನ್​ ನಂಬರ್​ ಇದೆ, ಕೊಡಲೇ?’ ಎಂದು ಕುಟುಕಿದರು. ಕಪಿಲ್​ ಶರ್ಮಾ ಅವರ ಯಾವ ಮಾತುಗಳನ್ನೂ ಕೂಡ ಸೋನು ಸೂದ್​ ಗಂಭೀರವಾಗಿ ಪರಿಗಣಿಸಲಿಲ್ಲ. ಈ ಎಲ್ಲ ಮಾತುಗಳನ್ನು ಅವರು ತಮಾಷೆಗೆ ಹೇಳಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಹಾಗಾಗಿ ಅವರು ಜೋರಾಗಿ ನಕ್ಕು ಎಂಜಾಯ್​ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸೋನು ಮತ್ತು ಕಪಿಲ್​ ಶರ್ಮಾ ಜೊತೆಯಾಗಿ 25 ಲಕ್ಷ ರೂ. ಗಳಿಸಿದರು. ಅದನ್ನು ‘ಸೂದ್​ ಚಾರಿಟಿ ಫೌಂಡೇಶನ್​’ಗೆ ನೀಡಲಾಯಿತು. ಆ ಮೂಲಕ ಜನರಿಗೆ ಸಹಾಯ ಮಾಡುವಲ್ಲಿ ಕಪಿಲ್​ ಕೂಡ ನೆರವಾಗಿದ್ದಾರೆ.

ಇದನ್ನೂ ಓದಿ:

ಪದ್ಮಶ್ರೀ ಪ್ರಶಸ್ತಿ ಸಿಗದಿದ್ದಕ್ಕೆ ಸೋನು ಸೂದ್​ಗೆ ಬೇಸರ? ನಟನ ಪ್ರತಿಕ್ರಿಯೆ ಏನು?

KBC: 25 ಲಕ್ಷ ರೂಪಾಯಿ ಪ್ರಶ್ನೆಗೆ ಸ್ಟಾರ್​ ನಟರೇ ಹೇಳಿಲ್ಲ ಉತ್ತರ; ನೀವು ಉತ್ತರಿಸಬಲ್ಲಿರಾ?

Follow us on

Related Stories

Most Read Stories

Click on your DTH Provider to Add TV9 Kannada