KBC: 25 ಲಕ್ಷ ರೂಪಾಯಿ ಪ್ರಶ್ನೆಗೆ ಸ್ಟಾರ್​ ನಟರೇ ಹೇಳಿಲ್ಲ ಉತ್ತರ; ನೀವು ಉತ್ತರಿಸಬಲ್ಲಿರಾ?

TV9 Digital Desk

| Edited By: Rajesh Duggumane

Updated on: Oct 02, 2021 | 1:52 PM

ಪಂಕಜ್​ ಹಾಗೂ ಪ್ರತೀಕ್​ ಅವರು 12.5 ಲಕ್ಷ ರೂಪಾಯಿ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರು. ಇದಾದ ನಂತರ 25 ಲಕ್ಷ ರೂಪಾಯಿಯ ಪ್ರಶ್ನೆಯನ್ನು ಅವರ ಮುಂದೆ ಇಡಲಾಯಿತು.

KBC: 25 ಲಕ್ಷ ರೂಪಾಯಿ ಪ್ರಶ್ನೆಗೆ ಸ್ಟಾರ್​ ನಟರೇ ಹೇಳಿಲ್ಲ ಉತ್ತರ; ನೀವು ಉತ್ತರಿಸಬಲ್ಲಿರಾ?
ಪಂಕಜ್​ ತ್ರಿಪಾಟಿ-ಅಮಿತಾಭ್​-ಪ್ರತೀಕ್​ ಗಾಂಧಿ
Follow us

ಕೌನ್​ ಬನೇಗಾ ಕರೋಡ್​​ಪತಿ ಸೀಸನ್​ 13ಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಮಿತಾಭ್​ ಬಚ್ಚನ್​ ನಡೆಸಿಕೊಡುತ್ತಿರುವ ಈ ಶೋಗೆ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಬರುತ್ತಿದ್ದಾರೆ. ಶಾಂದಾರ್​ ಶುಕ್ರವಾರ್​ ಎಪಿಸೋಡ್​ಗೆ ಈ ಬಾರಿ ‘ಸ್ಕ್ಯಾಮ್​ 1992’ ಖ್ಯಾತಿಯ ಪ್ರತೀಕ್​ ಗಾಂಧಿ ಹಾಗೂ ‘ಮಿರ್ಜಾಪುರ್​’ ಖ್ಯಾತಿಯ ಪಂಕಜ್​ ತ್ರಿಪಾಟಿ ಆಗಮಿಸಿದ್ದರು. ಇವರಿಗೆ ಪ್ರಶ್ನೆ ಒಂದನ್ನು ಕೇಳಲಾಯಿತು. ಆದರೆ, ಈ ಪ್ರಶ್ನೆಗೆ ಉತ್ತರ ಹೇಳೋಕೆ ಇವರಿಂದ ಸಾಧ್ಯವಾಗಿಲ್ಲ.

ಪಂಕಜ್​ ಹಾಗೂ ಪ್ರತೀಕ್​ ಅವರು 12.5 ಲಕ್ಷ ರೂಪಾಯಿ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರು. ಇದಾದ ನಂತರ 25 ಲಕ್ಷ ರೂಪಾಯಿಯ ಪ್ರಶ್ನೆಯನ್ನು ಅವರ ಮುಂದೆ ಇಡಲಾಯಿತು. ಆದರೆ, ಈ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಹೇಳೋಕೆ ಸಾಧ್ಯವಾಗುವುದಿಲ್ಲ ಎನ್ನುವುದು ಗೊತ್ತಾಯಿತು. ಹೀಗಾಗಿ, ಆಟದಿಂದ ಹಿಂದೆ ಸರಿಯುವುದಾಗಿ ಅವರು ಹೇಳಿದರು. ಹೀಗಾಗಿ, ಇವರಿಗೆ 12.5 ಲಕ್ಷ ರೂಪಾಯಿ ಸಿಕ್ಕಿದೆ. ಹಾಗಾದರೆ ಅವರಿಗೆ ಎದುರಾದ ಪ್ರಶ್ನೆ ಯಾವುದು? ಇಲ್ಲಿದೆ ಆ ಪ್ರಶ್ನೆ.

‘ಭಾರತ ಸರ್ಕಾರವು ದೇಶದ ಯಾವ ಐತಿಹಾಸಿಕ ಸ್ಥಳಗಳಲ್ಲಿ ರಾಷ್ಟ್ರೀಯ ಕಡಲ ಹೆರಿಟೇಜ್​ ಸಂಕೀರ್ಣವನ್ನು ನಿರ್ಮಿಸಲು ಯೋಜಿಸುತ್ತಿದೆ?’ ಈ ಪ್ರಶ್ನೆಗೆ,  ಹಂಪಿ, ಕೋನಾರ್ಕ್​, ಲೋಥಾಲ್​ ಮತ್ತು ಮಹಾಬಲಿಪುರಮ್​ ಆಯ್ಕೆ ನೀಡಲಾಗಿತ್ತು.  ಪ್ರತೀಕ್​ ಹಾಗೂ ಪಂಕಜ್​ಗೆ ಆಟ ತೊರೆದ ಹೊರತಾಗಿಯೂ ಯಾವುದಾದರೂ ಒಂದು ಆಯ್ಕೆಯನ್ನು ಸೆಲೆಕ್ಟ್​ ಮಾಡುವಂತೆ ಅಮಿತಾಭ್​ ಸೂಚಿಸಿದರು. ಮಹಾಬಲಿಪುರಮ್​ ಎನ್ನುವ ಉತ್ತರ ಇಬ್ಬರ ಕಡೆಯಿಂದ ಬಂತು. ಆದರೆ, ಲೋಥಾಲ್​ ಸರಿಯಾದ ಉತ್ತರ ಆಗಿತ್ತು.

ಪ್ರತೀಕ್​ ಮತ್ತು ಪಂಕಜ್​ ಅವರು ಅಮಿತಾಭ್​ ಜತೆ ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪಂಕಜ್​ ಊರಿನಲ್ಲಿ ಮ್ಯಾಚ್​ಬಾಕ್ಸ್​ ಇರಲಿಲ್ಲ. ಹೀಗಾಗಿ, ಅಕ್ಕ-ಪಕ್ಕದ ಮನೆಯಿಂದ ಬೆಂಕಿ ತರಬೇಕಾಗುತ್ತಿತ್ತು. ಇಂಥ ಹಲವು ಘಟನೆಗಳನ್ನು ಅವರು ಹಂಚಿಕೊಂಡಿದ್ದಾರೆ. ಪಂಕಜ್​ ಹಾಗೂ ಪ್ರತೀಕ್​ ಇಬ್ಬರೂ ಕಷ್ಟದಿಂದ ಚಿತ್ರರಂಗಕ್ಕೆ ಬಂದು ನೆಲೆ ಕಂಡುಕೊಂಡವರು. ಅವರು ಗೆದ್ದ ಹಣವನ್ನು ಚಾರಿಟಿ ಕೆಲಸಕ್ಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003

ಕೆಬಿಸಿಯಲ್ಲಿ 1 ಕೋಟಿ ಮೊತ್ತದ ಈ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada