Ibrahim Ali Khan: ಬಾಲಿವುಡ್ ಪ್ರವೇಶಿಸಲು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಸಿದ್ಧ; ಆದರೆ ನಟನಾಗಿ ಅಲ್ಲ

Saif Ali Khan: ಬಾಲಿವುಡ್​ನ ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ. ಆದರೆ ಇದರಲ್ಲಿ ಒಂದು ಅಚ್ಚರಿಯಿದೆ. ಏನದು? ಇಲ್ಲಿದೆ ಮಾಹಿತಿ.

Ibrahim Ali Khan: ಬಾಲಿವುಡ್ ಪ್ರವೇಶಿಸಲು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಸಿದ್ಧ; ಆದರೆ ನಟನಾಗಿ ಅಲ್ಲ
ಸೈಫ್ ಅಲಿ ಕಅನ್, ಇಬ್ರಾಹಿಂ ಅಲಿ ಖಾನ್ (ಸಂಗ್ರಹ ಚಿತ್ರ)

ಬಾಲಿವುಡ್​ನ ಖ್ಯಾತ ತಾರೆಯರ ಮಕ್ಕಳು ಬಾಲಿವುಡ್​ನಲ್ಲಿ ನೆಲೆ ಕಂಡುಕೊಳ್ಳುವುದು ಹೊಸದೇನಲ್ಲ. ಈ ಕುರಿತು ಈಗಾಗಲೇ ಹಲವು ಮಾದರಿಯಲ್ಲಿ ಪರ ವಿರೋಧದ ಚರ್ಚೆ ನಡೆದಿದೆ. ಪ್ರತಿಭೆ ಇದ್ದಲ್ಲಿ, ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳುವುದು ತಪ್ಪಲ್ಲ ಎಂಬುದು ಅಭಿಮಾನಿಗಳ ಅಭಿಮತ. ಇದಕ್ಕೆ ದೃಷ್ಟಾಂತವೆಂಬಂತೆ ಪ್ರಸಿದ್ಧ ಕುಟುಂಬದಿಂದ ಬಂದು, ಸ್ವಂತವಾಗಿ ವ್ಯಕ್ತಿತ್ವ ರೂಪಿಸಿಕೊಂಡ ಹಲವು ಕಲಾವಿದರಿದ್ದಾರೆ. ಇದೀಗ ಆ ಸಾಲಿನಲ್ಲಿ ಗುರುತಿಸಿಕೊಳ್ಳಲು ಬಾಲಿವುಡ್ ತಾರೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಹೆಜ್ಜೆ ಇಟ್ಟಿದ್ದಾರೆ. ಇದನ್ನು ಸ್ವತಃ ಸೈಫ್ ಕಾರ್ಯಕ್ರಮವೊಂದರಲ್ಲಿ ಖಚಿತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಪುತ್ರ ಇಬ್ರಾಹಿಂ ಸಿನಿ ಜರ್ನಿಯನ್ನು ಪ್ರಾರಂಭಿಸಿರುವ ಬಗ್ಗೆ ಸೈಫ್ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಇಬ್ರಾಹಿಂ ಕೆಲಸ ಮಾಡುತ್ತಿರುವುದು ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ ಜೋಹರ್ ಗರಡಿಯಲ್ಲಿ. ಅವರ ನೂತನ ಚಿತ್ರ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ಯಲ್ಲಿ ಸಹಾಯಕ ನಿರ್ದೇಶಕನಾಗಿ ಇಬ್ರಾಹಿಂ ಪ್ರಸ್ತುತ ತೊಡಗಿಸಿಕೊಂಡಿದ್ದಾರಂತೆ. ಆರ್​ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸೈಫ್, ತನ್ನ ಮಕ್ಕಳೆಲ್ಲರೂ ಭಿನ್ನ ದಾರಿಯನ್ನು ಆರಿಸಿಕೊಂಡಿದ್ದಾರೆ ಎಂದಿದ್ದಾರೆ. ಈ ಮೂಲಕ ಸೈಫ್ ಮೊದಲ ಪತ್ನಿ ಅಮೃತಾ ಸಿಂಗ್ ಮಕ್ಕಳಾದ ಸಾರಾ ಅಲಿ ಖಾನ್ ನಟನೆಯಲ್ಲಿ ಹಾಗೂ ಇಬ್ರಾಹಿಂ ಅಲಿ ಖಾನ್ ನಿರ್ದೇಶನ ವಿಭಾಗದಲ್ಲಿ ಕೆಲಸ ಆರಂಭಿಸಿದಂತಾಗಿದೆ.

ತನ್ನ ಕೆಲಸದ ಕುರಿತು ಇಬ್ರಾಹಿಂ ತಮ್ಮೊಂದಿಗೆ ಸಂವಾದವನ್ನೂ ನಡೆಸುತ್ತಾನೆ ಎಂದು ಇದೇ ವೇಳೆ ಸೈಫ್ ಹೇಳಿದ್ದಾರೆ. ಇದರೊಂದಿಗೆ ತನ್ನ ಮುಂದಿನ ಕನಸಿನ ಕುರಿತಾಗಿಯೂ ಇಬ್ರಾಹಿಂ ಹಂಚಿಕೊಳ್ಳುತ್ತಾನೆ ಎಂದು ಸೈಫ್ ನುಡಿದಿದ್ಧಾರೆ. ಈ ಮೂಲಕ ಸೈಫ್ ಪುತ್ರ ಅಧಿಕೃತವಾಗಿ ಬಾಲಿವುಡ್ ಪ್ರವೇಶಿಸಿದಂತಾಗಿದೆ. ಸೈಫ್ ಎರಡನೇ ಪತ್ನಿ ಕರೀನಾ, ತಮ್ಮ ಮಕ್ಕಳು ಚಿತ್ರರಂಗದ ಹೊರಗೆ ಬದುಕು ಕಟ್ಟಿಕೊಂಡರೆ ಬಹಳ ಸಂತಸವಾಗುತ್ತದೆ ಎಂದು ಜೇಹ್ ಹಾಗೂ ತೈಮೂರ್ ಕುರಿತಂತೆ ಸಂದರ್ಶನವೊಂದರಲ್ಲಿ ನುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.

‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಕಾರಣ, ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕರಣ್ ಜೋಹರ್ ಐದು ವರ್ಷಗಳ ನಂತರ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹಿರಿಯ ಕಲಾವಿದರಾದ ಧರ್ಮೇಂದ್ರ, ಜಯಾ ಬಚ್ಚನ್, ಶಬಾನಾ ಅಜ್ಮಿ ಮೊದಲಾದವರೂ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಇದನ್ನೂ ಓದಿ:

‘ಕರೀನಾಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಸಲಹೆ ನೀಡುವುದಿಲ್ಲ’; ಅದೇ ದಾಂಪತ್ಯದ ಯಶಸ್ಸಿನ ಗುಟ್ಟು ಎಂದ ಸೈಫ್!

Saif Ali Khan: ಉತ್ತಮ ನಟರಾಗಲು ಈ ಹಾದಿಯನ್ನು ಅನುಸರಿಸಿ; ಸೈಫ್ ತನ್ನ ಮಕ್ಕಳಿಗೆ ಹೇಳಿದ ಕಿವಿ ಮಾತಿದು

ಪೈರಸಿ ಮಾಡಿದ್ರೆ ಸಿಕ್ಕಿ ಬೀಳೋದು ಗ್ಯಾರಂಟಿ; ಗುಪ್ತವಾಗಿ ಕಾರ್ಯಾಚರಣೆಗಿಳಿಯಲಿದೆ ಪೊಲೀಸ್​ ತಂಡ

Read Full Article

Click on your DTH Provider to Add TV9 Kannada