ಜಾರ್ಖಂಡ್‌ನಲ್ಲಿ ಹಿರಿಯ ಮಾವೋವಾದಿ ನಾಯಕ ಪ್ರಶಾಂತ್ ಬೋಸ್ ಸೆರೆ
Prashant Bose alias Kisan Da ಮೂರು ದಶಕಗಳಿಗೂ ಹೆಚ್ಚು ಕಾಲ ಭೂಗತರಾಗಿದ್ದ ಬೋಸ್, ಅತ್ಯಂತ ಹಿರಿಯ ಮಾವೋವಾದಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರಸ್ತುತ ಕೇಂದ್ರ ಸಮಿತಿಯ ಸದಸ್ಯ ಕೇಂದ್ರ ಮಿಲಿಟರಿ ಆಯೋಗ ಮತ್ತು ಪಾಲಿಟ್‌ಬ್ಯೂರೋ ಸದಸ್ಯರಾಗಿ ಅಧಿಕಾರವನ್ನು ಹೊಂದಿದ್ದಾರೆ.
ರಾಂಚಿ: ಸಿಪಿಐ ಮಾವೋವಾದಿ ನಾಯಕ ಪ್ರಶಾಂತ್ ಬೋಸ್ (Prashant Bose) ಅಲಿಯಾಸ್ ‘ಕಿಶನ್ ದಾ’ (Kisan Da)ಅವರನ್ನು ನ.12 ರಂದು ಜಾರ್ಖಂಡ್ ಪೊಲೀಸರು (Jharkhand police) ಬಂಧಿಸಿದ್ದಾರೆ. ಕಿಶನ್ ದಾ ಸೆರೆ ಹಿಡಿವವರಿಗೆ ಈ ಹಿಂದೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಸಿಪಿಐ ಮಾವೋವಾದಿ ಸದಸ್ಯೆಯಾಗಿರುವ ಅವರ ಪತ್ನಿ ಶೀಲಾ ಮರಾಂಡಿ(Sheela Marandi) ಅವರನ್ನೂ ಬಂಧಿಸಲಾಗಿದೆ. ಇವರೊಂದಿಗೆ ಇತರ ನಾಲ್ವರು ಸಕ್ರಿಯ ಸದಸ್ಯರನ್ನೂ ಬಂಧಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಗುಪ್ತಚರ ಸಂಸ್ಥೆಗಳ ನಿರ್ದಿಷ್ಟ ಮಾಹಿತಿಯ ನಂತರ ಜಾರ್ಖಂಡ್ ಪೊಲೀಸರು ಗುರುವಾರ ತಡರಾತ್ರಿ ಹಿರಿಯ ಮಾವೋವಾದಿ ನಾಯಕ ಪ್ರಶಾಂತ್ ಬೋಸ್ (81) ಅವರನ್ನು ಬಂಧಿಸಿದ್ದಾರೆ. ನಿರ್ಭಯ್, ಕಾಜಲ್, ಬುಧಾ ಮತ್ತು ಮನೀಶ್ ಎಂದೂ ಕರೆಯಲ್ಪಡುವ ಬೋಸ್ ಬಂಧನವು ಬಹುಶಃ ಮಾವೋವಾದಿ ಚಳುವಳಿಗೆ ದೊಡ್ಡ ಹೊಡೆತವಾಗಿದೆ. ಏಕೆಂದರೆ ಅವರು ಬಿಹಾರ, ಜಾರ್ಖಂಡ್ ಮತ್ತು ಒಡಿಶಾವನ್ನು ಒಳಗೊಂಡಿರುವ ಪೂರ್ವ ಪ್ರಾದೇಶಿಕ ಬ್ಯೂರೋ (ERB) ಮುಖ್ಯಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಬೋಸ್ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯವರು. ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಬೋಸ್ ಅವರ ಪತ್ನಿ ಶೀಲಾ ಮರಾಂಡಿ ಅವರೊಂದಿಗೆ ರಹಸ್ಯ ಸಭೆಗೆ ಹಾಜರಾಗಲು ಸರಂದಾ ಅರಣ್ಯಕ್ಕೆ ಹೋಗುತ್ತಿದ್ದಾಗ ಜಮ್ಶೆಡ್‌ಪುರ ಮತ್ತು ಸರೈಕೆಲಾ ನಡುವೆ ಬಂಧಿಸಲಾಯಿತು ಎಂದು ಹೇಳಿದರು.
CPI Maoist leader Prashant Bose alias ‘Kishan da’ was arrested by Jharkhand Police on Nov 12. A reward of Rs 1 crore was announced on him. His wife Sheela Marandi, who is also a member of CPI Maoist, was also arrested. Four other active members were also arrested along with them. pic.twitter.com/51DTS8XZSb
— ANI (@ANI) November 14, 2021
ಮೂರು ದಶಕಗಳಿಗೂ ಹೆಚ್ಚು ಕಾಲ ಭೂಗತರಾಗಿದ್ದ ಬೋಸ್, ಅತ್ಯಂತ ಹಿರಿಯ ಮಾವೋವಾದಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರಸ್ತುತ ಕೇಂದ್ರ ಸಮಿತಿಯ ಸದಸ್ಯ ಕೇಂದ್ರ ಮಿಲಿಟರಿ ಆಯೋಗ ಮತ್ತು ಪಾಲಿಟ್‌ಬ್ಯೂರೋ ಸದಸ್ಯರಾಗಿ ಅಧಿಕಾರವನ್ನು ಹೊಂದಿದ್ದಾರೆ. ಅವರ ಪತ್ನಿ ಕೇಂದ್ರ ಸಮಿತಿಯ ಸದಸ್ಯರಾಗಿದ್ದಾರೆ ಎಂದು ನಂಬಲಾಗಿದೆ. ಆಕೆ ಧನ್‌ಬಾದ್ ಮೂಲದವರಾಗಿದ್ದಾರೆ.
ಬೋಸ್ ಅವರನ್ನು ಮೊದಲ ಬಾರಿಗೆ ಬಂಧಿಸಲಾಗಿದೆ ಮತ್ತು ಅವರ ವಿಚಾರಣೆಯ ಸಮಯದಲ್ಲಿ ಅವರು ನೀಡಿದ ಸುಳಿವುಗಳ ಮೇಲೆ ಕೆಲಸ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ ಬೋಸ್ ಅವರು ಮಾವೋವಾದಿ ಕಮ್ಯುನಿಸ್ಟ್ ಸೆಂಟರ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥರಾಗಿದ್ದರು ಮತ್ತು ಸಿಪಿಐ (ಮಾವೋವಾದಿ) ರಚನೆಗೆ ಕಾರಣವಾದ ಕ್ರಾಂತಿಕಾರಿ ಶಕ್ತಿಗಳ ಪುನರ್ ಏಕೀಕರಣವನ್ನು ಮೇಲ್ವಿಚಾರಣೆ ಮಾಡಿದ ವಿಚಾರವಾದಿಗಳಲ್ಲಿ ಒಬ್ಬರಾಗಿದ್ದರು.
ಬೋಸ್ ಅವರು ಈ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು ಹಾಗಾಗಿ ಇನ್ನೊಬ್ಬರ ಸಹಾಯವಿಲ್ಲದೆ ಎಲ್ಲಿಯೂ ಹೋಗಲಾರರು. “ಅವರ ಸಹಚರರು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು.ಈ ವೇಳೆ ಅವರನ್ನು ಬಂಧಿಸಲಾಯಿತು” ಎಂದು ಅಧಿಕಾರಿ ಹೇಳಿದರು. ಇಬ್ಬರ ಬಂಧನವು ಮಾವೋವಾದಿ ಕಾರ್ಯಕರ್ತರ ನೈತಿಕತೆ ಮತ್ತು ಉತ್ತರ ಭಾರತದಲ್ಲಿನ ಕ್ರಾಂತಿಕಾರಿ ಚಟುವಟಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಹೋದರಿಯ ರಾಜಕೀಯ ಪ್ರವೇಶ ಘೋಷಿಸಿದ ನಟ ಸೋನು ಸೂದ್, ಯಾವ ಪಕ್ಷಕ್ಕೆ ಎಂಬುದು ಶೀಘ್ರದಲ್ಲೇ ನಿರ್ಧಾರ
Published On - 4:15 pm, Sun, 14 November 21