Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Sharma: ಬಯೋಬಬಲ್ ನಡುವೆ ವಮಿಕಾ ಹುಟ್ಟುಹಬ್ಬ ಆಚರಣೆ; ಸಂಭ್ರಮ ಹೇಗಿತ್ತು?

Vamika Birthday: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪುತ್ರಿ ವಮಿಕಾಳ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಬಯೋಬಬಲ್​ ನಡುವೆಯೂ ಸಂಭ್ರಮ ಜೋರಿತ್ತು ಎಂಬುದಕ್ಕೆ ಅನುಷ್ಕಾ ಹಂಚಿಕೊಂಡ ಚಿತ್ರಗಳು ಸಾಕ್ಷಿ ಒದಗಿಸಿವೆ.

Anushka Sharma: ಬಯೋಬಬಲ್ ನಡುವೆ ವಮಿಕಾ ಹುಟ್ಟುಹಬ್ಬ ಆಚರಣೆ; ಸಂಭ್ರಮ ಹೇಗಿತ್ತು?
ಕಳೆದ ವರ್ಷ ವಿರಾಟ್- ಅನುಷ್ಕಾ ಹಂಚಿಕೊಂಡಿದ್ದ ವಮಿಕಾಳ ಚಿತ್ರ (ಎಡ), ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ವಮಿಕಾ, ಅನುಷ್ಕಾ (ಬಲ)
Follow us
TV9 Web
| Updated By: shivaprasad.hs

Updated on:Jan 12, 2022 | 2:18 PM

ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಪುತ್ರಿ ವಮಿಕಾಳ (Vamika) ಮೊದಲ ವರ್ಷದ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದಲ್ಲಿ ಭರ್ಜರಿಯಾಗಿ ಆಚರಿಸಿದ್ದಾರೆ. ಸದ್ಯ ದ.ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿರುವುದರಿಂದ ಈ ದಂಪತಿಗಳು ಕೇಪ್​ಟೌನ್​ನಲ್ಲಿ ಬಯೋಬಬಲ್​ನಲ್ಲಿದ್ದಾರೆ. ಆ ಮಿತಿಯ ನಡುವೆಯೂ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗಿದೆ ಎಂಬುದಕ್ಕೆ ಅನುಷ್ಕಾ ಪೋಸ್ಟ್​ಗಳು ಸಾಕ್ಷಿ ನೀಡಿವೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅನುಷ್ಕಾ ಚಿತ್ರಗಳನ್ನು ಹಂಚಿಕೊಂಡಿದ್ದು, ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ‘‘ಸೂರ್ಯ ಪ್ರಕಾಶಮಾನವಾಗಿದ್ದ. ಬೆಳಕು ಬಹಳ ಚೆನ್ನಾಗಿತ್ತು. ಟೇಬಲ್ ಭರ್ತಿಯಾಗಿತ್ತು.ಇದೇ ರೀತಿ ನಮ್ಮ ಪುಟ್ಟ ಬಾಲೆ ಒಂದು ವರ್ಷ ಪೂರೈಸಿದಳು’’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಅಲ್ಲದೇ ಅನುಷ್ಕಾ ಚಿತ್ರಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ವಿರಾಟ್ ಹಾಗೂ ಅನುಷ್ಕಾ ಪಾನೀಯ ಹಿಡಿದು ನಗುತ್ತಾ ಮಾತುಕತೆಯಲ್ಲಿ ತೊಡಗಿದ್ದಾರೆ. ಅಲ್ಲದೇ ಈ ಚಿತ್ರದ ಮೂಲಕ ಸಂಭ್ರಮಕ್ಕೆ ಕಾರಣರಾದ ಎಲ್ಲರಿಗೂ ಅನುಷ್ಕಾ ಧನ್ಯವಾದಗಳನ್ನೂ ಹೇಳಿದ್ದಾರೆ. ‘‘ಆಪ್ತರಿಂದ ಈ ಸಂಜೆ ಮತ್ತಷ್ಟು ಖುಷಿಯಿಂದ ಕಳೆಯಿತು. ಬಯೋ ಬಬಲ್​ನಲ್ಲಿ ಸಂಭ್ರಮ ಹೇಗೆ ಎಂದು ಯೋಚಿಸುತ್ತಿದ್ದೆ. ಆದರೆ ಎಲ್ಲರಿಂದ ಅದು ಸಾಧ್ಯವಾಯಿತು’’ ಎಂದು ಅವರು ಹೇಳಿದ್ದಾರೆ. ಪುತ್ರಿ ವಮಿಕಾ ಜತೆಯಿರುವ ಮತ್ತೊಂದು ಚಿತ್ರವನ್ನೂ ಅನುಷ್ಕಾ ಹಂಚಿಕೊಂಡಿದ್ದಾರೆ.

ಅನುಷ್ಕಾ ಹಂಚಿಕೊಂಡ ಚಿತ್ರಗಳು ಇಲ್ಲಿವೆ:

Anushka, Virat and Vamika Birthday

ಅನುಷ್ಕಾ ಶರ್ಮ ಹಂಚಿಕೊಂಡ ಚಿತ್ರ

ವಿರಾಟ್ ಹಾಗೂ ಅನುಷ್ಕಾ ವಮಿಕಾಳನ್ನು ಕಳೆದ ವರ್ಷ ಜನವರಿ 11ರಂದು ಬರಮಾಡಿಕೊಂಡಿದ್ದರು. ಪುತ್ರಿಯ ಪ್ರೈವಸಿ ಕುರಿತು ದಂಪತಿ ತೀವ್ರ ಕಾಳಜಿ ವಹಿಸಿದ್ದಾರೆ. ಆದ್ದರಿಂದ ಆಕೆಯ ಮುಖವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಅಲ್ಲದೇ ಪಾಪರಾಜಿಗಳಿಗೂ ಆಕೆಯ ಚಿತ್ರವನ್ನು ಚಿತ್ರಿಸದಂತೆ ದಂಪತಿ ಕೋರಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅನುಷ್ಕಾ, ವಮಿಕಾಳ ಪ್ರೈವಸಿಯನ್ನು ಎಲ್ಲರೂ ಗೌರವಿಸಿದ್ದಕ್ಕೆ ಧನ್ಯವಾದ ಹೇಳಿದ್ದರು.

ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ ಅನುಷ್ಕಾ: ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ನಟನೆಯ ‘ಜೀರೋ’ ಚಿತ್ರದಲ್ಲಿ. ನಂತರ ಅವರು ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಅದಾಗ್ಯೂ ನಿರ್ಮಾಣದ ಕೆಲಸಗಳಲ್ಲಿ ಅವರು ಸಕ್ರಿಯರಾಗಿದ್ದರು. ಇದೀಗ ನಟಿಯ ಹೊಸ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರದಲ್ಲಿ ಅನುಷ್ಕಾ ಬಣ್ಣಹಚ್ಚುತ್ತಿದ್ದಾರೆ. ‘ಚಕ್​ಡಾ ಎಕ್ಸ್​ಪ್ರೆಸ್’ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ನೆಟ್​ಫ್ಲಿಕ್ಸ್​ನಲ್ಲಿ ತೆರೆಕಾಣಲಿದೆ. ಇದಲ್ಲದೇ ಮತ್ತೆರಡು ಚಿತ್ರಗಳಲ್ಲೂ ಅನುಷ್ಕಾ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿಬಂದಿದೆ.

ಇದನ್ನೂ ಓದಿ:

ಒಟ್ಟೊಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡ್ರಾ ಅನುಷ್ಕಾ ಶರ್ಮಾ? ಕಂಬ್ಯಾಕ್​ ಮಾಡಿದ ಕೊಹ್ಲಿ ಪತ್ನಿ

Anushka Shetty: ಖ್ಯಾತ ಸ್ಟಾರ್ ಜತೆ ತೆರೆಹಂಚಿಕೊಳ್ಳುವ ಮೂಲಕ ಭರ್ಜರಿ ಕಮ್​ಬ್ಯಾಕ್ ಮಾಡಲಿದ್ದಾರಾ ಅನುಷ್ಕಾ?

Published On - 2:16 pm, Wed, 12 January 22

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ