ಭಗವದ್ಗೀತೆ ಹಿಡಿದು ಬಂದ ಮುಸ್ಲಿಂ ನಟಿ ಉರ್ಫಿ; ‘​ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ’ ಎಂದಿದ್ದೇಕೆ?

Urfi Javed: ಮುಸ್ಲಿಂ ಧರ್ಮದಲ್ಲಿ ತಮಗೆ ನಂಬಿಕೆ ಉಳಿದಿಲ್ಲ ಎಂದು ಕೆಲವೇ ದಿನಗಳ ಹಿಂದೆ ಉರ್ಫಿ ಜಾವೇದ್​ ಹೇಳಿಕೆ ನೀಡಿದ್ದರು. ಅವರೀಗ ಭಗವದ್ಗೀತೆ ಹಿಡಿದು ಓಡಾಡುತ್ತಿದ್ದಾರೆ.

ಭಗವದ್ಗೀತೆ ಹಿಡಿದು ಬಂದ ಮುಸ್ಲಿಂ ನಟಿ ಉರ್ಫಿ; ‘​ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ’ ಎಂದಿದ್ದೇಕೆ?
ಉರ್ಫಿ ಜಾವೇದ್

ಹಿಂದಿ ಕಿರುತೆರೆಯಲ್ಲಿ ಫೇಮಸ್​ ಆಗಿರುವ ನಟಿ ಉರ್ಫಿ ಜಾವೇದ್ (Urfi Javed)​ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ತಮ್ಮ ಚಿತ್ರ-ವಿಚಿತ್ರ ಡ್ರೆಸ್​ನಿಂದಾಗಿ ಗಮನ ಸೆಳೆಯುವ ಅವರು ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡರು. ಅವರ ಕೈಯಲ್ಲಿ ಭಗವದ್ಗೀತೆ (Bhagavad Gita) ಇತ್ತು. ಧರಿಸಿದ್ದ ಟಿ-ಶರ್ಟ್​ ಮೇಲೆ ‘ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ’ (Not Javed Akhtar’s Granddaughter) ಎಂದು ಬರೆಯಲಾಗಿತ್ತು. ಈ ಎರಡು ವಿಚಾರಗಳ ಹಿಂದೆಯೂ ಒಂದೊಂದು ಕಹಾನಿ ಇದೆ. ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಉರ್ಫಿ ಜಾವೇದ್​ ಅವರ ಖ್ಯಾತಿ ಹೆಚ್ಚಿದೆ. ಅದೇ ರೀತಿ ಅವರು ಟೀಕೆಗೂ ಒಳಗಾಗುತ್ತಾ ಇರುತ್ತಾರೆ.

ತುಂಬ ಗ್ಲಾಮರಸ್​ ಆದ ಬಟ್ಟೆಗಳನ್ನು ಉರ್ಫಿ ಜಾವೇದ್​ ಧರಿಸುತ್ತಾರೆ. ಅದರಿಂದ ಒಂದು ವರ್ಗದ ನೆಟ್ಟಿಗರಿಗೆ ಅಸಮಾಧಾನ ಇದೆ. ಉರ್ಫಿ ಏನೇ ಕಿರಿಕ್​ ಮಾಡಿಕೊಂಡರೂ ಕೂಡ ‘ಜಾವೇದ್​ ಅಖ್ತರ್​ ಮೊಮ್ಮಗಳಿಗೆ ಸ್ವಲ್ಪ ಬುದ್ಧಿ ಹೇಳಿ’ ಎಂದು ಜನರು ಕಮೆಂಟ್​ ಮಾಡುತ್ತಾರೆ. ಚಿತ್ರಸಾಹಿತಿ ಜಾವೇದ್ ಅಖ್ತರ್​ ಅವರಿಗೂ ಉರ್ಫಿ ಜಾವೇದ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಇಬ್ಬರ ಹೆಸರಿನಲ್ಲೂ ‘ಜಾವೇದ್​’ ಇದೆ ಅಷ್ಟೇ. ಆ ಕಾರಣಕ್ಕಾಗಿ ಉರ್ಫಿಯನ್ನು ಜಾವೇದ್​ ಅಖ್ತರ್​ ಅವರ ಮೊಮ್ಮಗಳು ಎಂದು ಅನೇಕರು ಭಾವಿಸಿದ್ದಾರೆ.

‘ನಾನು ಜಾವೇದ್​ ಅಖ್ತರ್ ಮೊಮ್ಮಗಳಲ್ಲ’ ಎಂದು ಹೇಳಿ ಹೇಳಿ ಉರ್ಫಿಗೆ ಸಾಕಾಗಿ ಹೋಗಿದೆ. ಹಾಗಾಗಿ ಊರಿಗೆಲ್ಲ ತಿಳಿಯಲಿ ಎಂಬ ಕಾರಣಕ್ಕೆ ತಾವು ಧರಿಸಿದ ಟಿ-ಶರ್ಮ್​ ಮೇಲೆ ‘ನಾನು ಜಾವೇದ್​ ಅಖ್ತರ್ ಮೊಮ್ಮಗಳಲ್ಲ’ ಎಂದು ಪ್ರಿಂಟ್​ ಹಾಕಿಸಿಕೊಂಡು ಬಂದು ಅವರು ಪೋಸ್​ ನೀಡಿದ್ದಾರೆ. ಈ ವೇಳೆ ಅವರು ಹಿಡಿದುಕೊಂಡಿದ್ದ ಭಗವದ್ಗೀತೆ ಎಲ್ಲರ ಗಮನ ಸೆಳೆದಿದೆ.

ತಾವು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರೂ ಕೂಡ ಆ ಧರ್ಮದಲ್ಲಿ ತಮಗೆ ನಂಬಿಕೆ ಉಳಿದಿಲ್ಲ ಎಂದು ಕೆಲವೇ ದಿನಗಳ ಹಿಂದೆ ಉರ್ಫಿ ಜಾವೇದ್​ ಹೇಳಿಕೆ ನೀಡಿದ್ದರು. ಅಲ್ಲದೇ ತಾವು ಭಗವದ್ಗೀತೆ ಓದುತ್ತಿರುವುದಾಗಿಯೂ ಅವರು ಹೇಳಿದ್ದರು. ಅದರಂತೆಯೇ ಅವರೀಗ ಭಗವದ್ಗೀತೆ ಹಿಡಿದು ಓಡಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ವಿಚಿತ್ರವಾಗಿ ವಿನ್ಯಾಸಗೊಂಡ ಬಟ್ಟೆಗಳನ್ನು ಉರ್ಫಿ ಜಾವೇದ್​ ಧರಿಸುತ್ತಾರೆ. ಅವರ ಅನೇಕ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ‘ಬಿಗ್​ ಬಾಸ್​ ಒಟಿಟಿ’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದಾಗ ಅವರು ಕಸದ ಚೀಲದಿಂದಲೇ ಕಾಸ್ಟ್ಯೂಮ್​ ತಯಾರಿಸಿಕೊಂಡು ಗಮನ ಸೆಳೆದಿದ್ದರು.

ಇದನ್ನೂ ಓದಿ:

‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್​

ಎಷ್ಟೇ ಟ್ರೋಲ್​ ಮಾಡಿದ್ರೂ ಜಗ್ಗಲ್ಲ ಈ ಯುವತಿ; ಇಷ್ಟೊಂದು ನೆಗೆಟಿವ್​ ಕಮೆಂಟ್​ ಬರಲು ಕಾರಣ ಏನು?

Click on your DTH Provider to Add TV9 Kannada