Shah Rukh Khan: ಶಾರುಖ್ ನಿವಾಸ ‘ಮನ್ನತ್​’ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದವ ಈಗ ಪೊಲೀಸರ ಅತಿಥಿ

Mannat: ಬಾಲಿವುಡ್ ನಟ ಶಾರುಖ್ ಖಾನ್ ನಿವಾಸ ‘ಮನ್ನತ್’ ಸೇರಿದಂತೆ ಮುಂಬೈನ ಹಲವು ಪ್ರಮುಖ ಸ್ಥಳಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Shah Rukh Khan: ಶಾರುಖ್ ನಿವಾಸ ‘ಮನ್ನತ್​’ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದವ ಈಗ ಪೊಲೀಸರ ಅತಿಥಿ
ಶಾರುಖ್ ಖಾನ್ ಹಾಗೂ ಅವರ ನಿವಾಸ ‘ಮನ್ನತ್’

ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರ ನಿವಾಸ ‘ಮನ್ನತ್’ (Mannat) ಅನ್ನು ಸ್ಫೊಟಿಸುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶ (Madhya Pradesh) ಪೊಲೀಸರು ಬಂಧಿಸಿದ್ದಾರೆ. ಜಿತೇಶ್ ಕುಮಾರ್ (Jitesh Kumar) ಎಂಬಾತ ಜನವರಿ 6ರಂದು ಮಹಾರಾಷ್ಟ್ರ (Maharastra) ಪೊಲೀಸ್ ಕಂಟ್ರೋಲ್ ರೂಮ್​ಗೆ ಕರೆ ಮಾಡಿ ಬಾಂದ್ರಾದಲ್ಲಿರುವ ಶಾರುಖ್ ನಿವಾಸ ಸೇರಿದಂತೆ ಮುಂಬೈನ ಹಲವೆಡೆ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಆತನನ್ನು ಜಬಲ್ಪುರದಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಬೈ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, ಬೆದರಿಕೆ ಹಾಕಿದ ವ್ಯಕ್ತಿ ‘ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಕುರ್ಲಾ ರೈಲ್ವೆ ಸ್ಟೇಷನ್, ಖರ್ಗರ್​​ನಲ್ಲಿರುವ ಗುರುದ್ವಾರ’ ಸೇರಿದಂತೆ ಹಲವು ಸ್ಥಳಗಳನ್ನು ನ್ಯೂಕ್ಲಿಯಾರ್ ಬಾಂಬ್ ಮೂಲಕ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ. ಆತನ ವಿರುದ್ಧ ಐಪಿಸಿ ಸೆಕ್ಷನ್ 182, 505 ಮತ್ತು 506ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಸಿಎಸ್​​ಪಿ ಅಲೋಕ್ ಶರ್ಮಾ ಮಾತನಾಡಿ, ‘‘ಮಹಾರಾಷ್ಟ್ರ ಪೊಲೀಸರು ಜಬಲ್ಪುರದಿಂದ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದರು. ಪ್ರಕರಣದಲ್ಲಿ ನಮ್ಮ ಸಹಾಯ ಕೋರಿದ್ದರು. ಇದರಂತೆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ’’ ಎಂದಿದ್ದಾರೆ. ಬಂಧಿತ ಜಿತೇಶ್ ಕುಮಾರ್ ಹಿನ್ನೆಲೆ ಕುರಿತು ಮಾತನಾಡಿದ ಅವರು, ‘‘ಆತನಿಗೆ ಬೇರೆ ಉದ್ದೇಶವಿರಲಿಲ್ಲ. ಆತ ಕುಡಿದಿದ್ದ. ವೈವಾಹಿಕ ಸಮಸ್ಯೆಗಳು ಆತನನ್ನು ತಲ್ಲಣಗೊಳಿಸಿವೆ ಎಂದು ನಂತರ ತಿಳಿಯಿತು’’ ಎಂದಿದ್ದಾರೆ.

ಜಬಲ್ಪುರದ ಹೆಚ್ಚುವರಿ ಪೊಲೀಸ್ ನಿರ್ದೇಶಕ ಗೋಪಾಲ್ ಖಂಡೇಲ್ ಪಿಟಿಐ ಜತೆ ಮಾತನಾಡಿ ಮಹಾರಾಷ್ಟ್ರ ಪೊಲೀಸರು ಬೆದರಿಕೆ ಹಾಕಿದ್ದಾತನ ಮೊಬೈಲ್ ನಂಬರ್ ನೀಡಿದ್ದರು. ಅದರಿಂದ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂದಿದ್ದಾರೆ.

ಶಾರುಖ್ ಖಾನ್ ತಮ್ಮ ನಿವಾಸ ‘ಮನ್ನತ್’ ಅನ್ನು 2001ರಲ್ಲಿ ₹ 13 ಕೋಟಿ ಕೊಟ್ಟು ಖರೀದಿಸಿದ್ದರು. ಇದೀಗ ಅದರ ಬೆಲೆ ₹ 200 ಕೋಟಿ ದಾಟಿದೆ. ಶಾರುಖ್ ನಿವಾಸದಿಂದ ಸಮುದ್ರ ಕಾಣುತ್ತದೆ. ಸ್ವಂತ ನಿವಾಸವನ್ನು ಹೊಂದುವುದು ತಮ್ಮ ಕನಸಾಗಿತ್ತು ಎಂದು ಶಾರುಖ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಚಿತ್ರಗಳ ವಿಚಾರಕ್ಕೆ ಬಂದರೆ ಶಾರುಖ್ ನಟನೆಯ ‘ಪಠಾಣ್’ 2022ರಲ್ಲಿ ತೆರೆಕಾಣುವ ನಿರೀಕ್ಷೆ ಇದೆ. ಸಲ್ಮಾನ್ ಖಾನ್ ಜತೆ ‘ಟೈಗರ್ 3’ ಚಿತ್ರದಲ್ಲೂ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:

ರಂಗುರಂಗಿನ ದಿರಿಸಿನಲ್ಲಿ ಕನ್ನಡತಿ ಜೆನಿಲಿಯಾ ಡಿಸೋಜ ಚೆಂಗುಲಾಬಿಯಂತೆ ಕಾಣುತ್ತಾರೆ, ವಿಡಿಯೋ ನೋಡಿ ಮರುಳಾಗ್ತೀರಾ!!

Saina Nehwal: ‘ನನ್ನ ಮಗಳು ದೇಶಕ್ಕಾಗಿ ಪದಕ ಗೆದ್ದಿದ್ದಾಳೆ; ನೀವೇನು ಮಾಡಿದ್ದೀರಿ?’ ನಟ ಸಿದ್ಧಾರ್ಥ್​ಗೆ ಸೈನಾ ತಂದೆಯ ನೇರ ಪ್ರಶ್ನೆ

Click on your DTH Provider to Add TV9 Kannada