ರಂಗುರಂಗಿನ ದಿರಿಸಿನಲ್ಲಿ ಜೆನಿಲಿಯಾ ಡಿಸೋಜ ಚೆಂಗುಲಾಬಿಯಂತೆ ಕಾಣುತ್ತಾರೆ, ವಿಡಿಯೋ ನೋಡಿ ಮರುಳಾಗ್ತೀರಾ!!

TV9kannada Web Team

TV9kannada Web Team | Edited By: TV9 SEO

Updated on: Jan 11, 2022 | 5:33 PM

ಸದಾ ಹೊಸ ಬಗೆಯ ಉಡುಪುಗಳನ್ನು ಧರಿಸುವುದು ಜೆನಿಲಿಯಾಗೆ ಇಷ್ಟ. ವಾರ್ಡ್ ರೋಬ್ ನಲ್ಲಿ ವೆಸ್ಟರ್ನ್ ಮತ್ತು ಎಥ್ನಿಕ್ ಸೇರಿದಂತೆ ವಿವಿಧ ಉಡುಪುಗಳ ಭಂಡಾರವೇ ಇದೆ. ಸೋಜಿಗದ ಸಂಗತಿಯೇನೆಂದರೆ ಉಡುಪು ಯಾವುದೇ ಧರಿಸಿದರೂ ಸದಾ ಮುಗಳ್ನಗುವ ಜೆನಿಲಿಯಾ ಮುದ್ದುಮುದ್ದಾಗಿ ಕಾಣುತ್ತಾರೆ.

ಇದಕ್ಕೂ ಮೊದಲು ನಾವು ಈ ವಿಷಯವನ್ನು ಹೇಳಿದ್ದೇವೆ ಮತ್ತು ನಿಮಗೂ ಗೊತ್ತಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್​ಮುಖ್ ಅವರ ಮಗ ಮತ್ತು ಜನಪ್ರಿಯ ಬಾಲಿವುಡ್ ನಟ ರೀತೇಶ್ ದೇಶ್​ಮುಖ್ ಅವರ ಪತ್ನಿ ಜೆನಿಲಿಯ ಡಿಸೋಜ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಾದರೂ ಮಂಗಳೂರು ಕನ್ನಡತಿ ಮಾರಾಯ್ರೇ. ಅಮಿತಾಬ್ ಬಚ್ಚನ್ ಅವರೊಂದಿಗೆ ಪಾರ್ಕರ್ ಪೆನ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕ ಬಾಲಿವುಡ್ ನಲ್ಲಿ ಜನಪ್ರಿಯ ನಟಿಯಾಗಿ ಬೆಳೆದ ಜೆನಿಲಿಯಾ ಒಂದು ಕನ್ನಡ ಮತ್ತು ಹಲವು ತೆಲುಗು ಚಿತ್ರಗಳಲ್ಲೂ ನಟಿಸಿದ್ದರೆ. ಅವರೀಗ ಬೆಳ್ಳಿಪರದೆಯಿಂದ ಈಗ ದೂರ ಇರೋದು ನಿಜ ಆದರೆ, ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ಬಗೆಬಗೆಯ ಇಮೇಜ್ ಗಳನ್ನು ಪೋಸ್ಟ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಸದಾ ಹೊಸ ಬಗೆಯ ಉಡುಪುಗಳನ್ನು ಧರಿಸುವುದು ಜೆನಿಲಿಯಾಗೆ ಇಷ್ಟ. ವಾರ್ಡ್ ರೋಬ್ ನಲ್ಲಿ ವೆಸ್ಟರ್ನ್ ಮತ್ತು ಎಥ್ನಿಕ್ ಸೇರಿದಂತೆ ವಿವಿಧ ಉಡುಪುಗಳ ಭಂಡಾರವೇ ಇದೆ. ಸೋಜಿಗದ ಸಂಗತಿಯೇನೆಂದರೆ ಉಡುಪು ಯಾವುದೇ ಧರಿಸಿದರೂ ಸದಾ ಮುಗಳ್ನಗುವ ಜೆನಿಲಿಯಾ ಮುದ್ದುಮುದ್ದಾಗಿ ಕಾಣುತ್ತಾರೆ. ಈ ವಿಡಿಯೋನಲ್ಲಿ ಕಾಣುತ್ತಿರುವ ಪೋಟೋ ಶೂಟ್ಗಾಗಿ ಅವರು ಬಣ್ಣಬಣ್ಣದ ಕೊ-ಆರ್ಡ್ ಡ್ರೆಸ್ ಧರಿಸಿ ಪೋಸುಗಳನ್ನು ನೀಡಿದ್ದಾರೆ.

ಆಗಲೇ ಹೇಳಿದಂತೆ ಜೆನಿಲಿಯ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಬಹುವರ್ಣದ ಈ ಕೊ-ಆರ್ಡ್ ಸೆಟ್​ನಲ್ಲಿ ಅವರು ಡಬಲ್ ನಾಚ್ ಮಾಡಿದ ಕಾಲರ್​ವುಳ್ಳ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಅದರ ಜೊತೆಗೆ ಸೈಡ್ ಪಾಕೆಟ್​ಗಳಿರುವ ಸ್ಟ್ರೇಟ್ ಲೆಗ್ ಟ್ರೌಸರ್ ಉಟ್ಟಿದ್ದಾರೆ. ರೆಟ್ರೋ ಗ್ಲಾಸ್ ಮತ್ತು ಕಿತ್ತಳೆ ಬಣ್ಣದ ಸ್ಟ್ರ್ಯಾಪ್​ಗಳ ಸ್ಯಾಂಡಲ್ ನೊಂದಿಗೆ ಅವರು ಡ್ರೆಸ್ಸಿಂಗ್ ಪೂರ್ತಿಗೊಳಿಸುತ್ತಾರೆ. ಈ ಡ್ರೆಸ್ ಬೆಲೆ ರೂ.10,400 ಅಂತೆ!

‘ಗುಡುಗು-ಸಿಡಿಲುಗಳನ್ನಲ್ಲ ಕಾಮನಬಿಲ್ಲುಗಳ ಲೆಕ್ಕ ಹಾಕಿ’ ಅಂತ ಜೆನಿಲಿಯ ತಮ್ಮ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ.

ಅಂದಹಾಗೆ, ಅವರು ಧರಿಸಿರುವ ದಿರಿಸು ಅದ್ವೈತ್ ಬ್ರ್ಯಾಂಡ್ ಆಗಿದ್ದರೆ, ಪಾದರಕ್ಷೆ ಅಲ್ಡೊ ಮತ್ತು ಸನ್ ಗ್ಲಾಸಸ್ ರೋಸ್ವಿನ್ ಬಗ್ಸ್ ಬ್ರ್ಯಾಂಡಿನವಾಗಿವೆ.

ಇದನ್ನೂ ಓದಿ:  Samantha: ಮನೆಗೆ ಕನ್ನ ಹಾಕಲು ಬಂದ ಅಕ್ಷಯ್​ಗೆ ತಕ್ಕ ಶಾಸ್ತಿ ಮಾಡಿದ ಸಮಂತಾ!; ಹೇಗೆ? ಮಜವಾದ ವಿಡಿಯೋ ನೋಡಿ

Follow us on

Click on your DTH Provider to Add TV9 Kannada